ರಾಮನಾಥಪುರದಲ್ಲಿ ಭಾರತೀಯ ಸಂತ ಮಹಾ ಪರಿಷತ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿ ಮಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಭಾರತೀಯ ಸಂಸ್ಕೃತಿಯ ಮಹತ್ವ, ಸನಾತನ ಪರಂಪರೆಯ ಏಕತೆ ಮತ್ತು ಹಿಂದೂ ಸಮಾಜದ ಸಂಘಟನೆಯ ಕುರಿತು ಉಪನ್ಯಾಸ ನೀಡಿದರು. ವಿವಿಧ ಮಠಗಳ ಸಂತರು ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ವಾಸಿ ಮಂಜು ಮಟ್ಟನವಿಲೆ ಕೆಲವು ರ್ಷಗಳ ಹಿಂದೆ ನನಗೆ ಪೋನ್ ಮಾಡಿ, ಸಾರ್, ನೀವು ನಾಟಕ ವಿರ್ಶೆ, ಕಲಾವಿದರ ಪರಿಚಯ, ಸಾಹಿತ್ಯ ವಿದ್ಯೆ , ಲೇಖನ ಎಲ್ಲಾ ಬರೆಯುತ್ತಿರುತ್ತಿರಲ್ಲ. ಅದನ್ನು ಓದುತ್ತಿರುತ್ತೇನೆ. ಖುಷಿ ಆಗುತ್ತದೆ.. ಎಂದರು. ಥ್ಯಾಂಕ್ಸ್, ನೀವು ಕಲಾವಿದರೇ ಎಂದೆ. ಹೌದು ಸಾರ್ಎಂದು ಒಂದಿಷ್ಟು ಕಲಾ ಪರಿಚಯ ಹೇಳುತ್ತಾ ಹೋದರು.
ಸ್ವಲ್ಪ ಬರೆದು ಕಳಿಸಿ. ನನಗೆ ಎಲ್ಲವನ್ನೂ ನೆನಪಿಟ್ಟು ಬರೆಯಲು ಕಷ್ಟವಾಗುತ್ತದೆ ಎಂದಿದ್ದೆ. ಅಂದು ಅವರು ಕಳಿಸಲಿಲ್ಲ. ನಾನು ಬರೆದಿರಲಿಲ್ಲ. ನೆನ್ನೆ ಕೆಲಸದ ನಿಮಿತ್ತ ಚನ್ನರಾಯಪಟ್ಟಣಕ್ಕೆ ಹೋಗಿದ್ದೆ. ಸಾಹಿತಿ ಮಿತ್ರರು ಡಾ. ಬರಾಳು ಶಿವರಾಮ ಅವರಿಗೆ ನಾನು ಬಂದಿರುವ ವಿಚಾರ ತಿಳಿಸಿದ್ದೆ. ಮಧ್ಯಾಹ್ನ ಅವರೇ ಫೋನ್ ಮಾಡಿ, ನಿಮ್ಮನ್ನು ನೋಡಲು ಯಾರೋ ಕಲಾವಿದರು ಕಾತುರರಾಗಿದ್ದಾರೆ ಪಿಪಿ ಹೋಟೆಲಿಗೆ ಬನ್ನಿ ಎಂದರು.
ಹೋದೆ. ಇವರು ಮಟ್ಟನವಿಲೆ ಮಂಜು ಎಂದರು. ಇವರು ಈ ಹಿಂದೆ ನನಗೆ ಫೋನ್ ಮಾಡಿದ್ದರು. ಆದರೆ ಮುಖ ಪರಿಚಯ ಇಲ್ಲ ಎಂದೆ. ಅದಾಗಿ ಇಂದು ಮಂಜು ಅವರೇ ತಮ್ಮ ಕಲಾ ಪರಿಚಯ ಕಳಿಸಿದರು.
ನಮ್ಮ ತಂದೆ ಮರಿಯಣ್ಣ. ತಾಯಿ ನಂಜಮ್ಮ. ಅತಿ ಕಡು ಬಡತನದ ಕುಟುಂಬ ನಮ್ಮದು. ನನ್ನ ವಿದ್ಯಾಭ್ಯಾಸ ಬಿ.ಎ. ಜಾನಪದ ಡಿಪ್ಲೋಮೋ, ಸುಗಮ ಸಂಗೀತ ಅಭ್ಯಾಸ ಮಾಡಿದ್ದೇನೆ. ಅತಿ ಚಿಕ್ಕ ವಯಸ್ಸಿನಲ್ಲೇ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಮ್ಮ ಗ್ರಾಮದಲ್ಲಿ ನಮ್ಮ ತಂದೆಯವರು ಕೃಷ್ಣ ಲೀಲೆ ನಾಟಕದಲ್ಲಿ ರಾಧೆ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಈ ನಾಟಕ ನನಗೆ ಪ್ರೇರಣೆಯಾಗಿ ಇದೇ ನಾಟಕದಲ್ಲಿ ನಾನು ಪ್ರಪ್ರಥಮ ಬಾರಿಗೆ ಬಾಲ ಮಕರಂದ ಪಾತ್ರವನ್ನು ನಿಭಾಯಿಸಿ ಪೌರಾಣಿಕ ನಾಟಕಕ್ಕೆ ಪಾದರ್ಪಣೆ ಮಾಡಿದೆ. ಹಾಗೆ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಲಾವಿದರು ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಿದ್ದರು. ಆ ನಾಟಕಗಳನ್ನು ವೀಕ್ಷಣೆ ಮಾಡಲು ನಾನು ಹೋಗುತ್ತಿದ್ದೆ. ಎಂಟನೇ ತರಗತಿ ಓದುತ್ತಿದ್ದಾಗ ಶಾಲಾ ವರ್ಷಿಕೋತ್ಸವ ಸಮಾರಂಭದಲ್ಲಿ ಜಾನಪದ ಗೀತೆ ಸ್ರ್ಧೆಯಲ್ಲಿ ಚೆಲ್ಲಿದರು ಮಲ್ಲಿಗೆಯ….ಹಾಡಿಗೆ ಪ್ರಥಮ ಬಹುಮಾನ ಪಡೆದಿದ್ದೆ.
ಈ ಗೀತೆಯ ಪ್ರಶಸ್ತಿ ನನಗೆ ಜಾನಪದ ಗಾಯನ ಕಲೆ ಬಗ್ಗೆ ಆಸಕ್ತಿ ಮೂಡಿಸಿತು. ಗೂರಮಾರನಹಳ್ಳಿ ಮೊರರ್ಜಿ ದೇಸಾಯಿ ಶಾಲೆಯ ವಿದ್ಯರ್ಥಿಗಳಿಗೆ ಮಾರಿ ಕುಣಿತ ಜಾನಪದ ನೃತ್ಯ ಸಂಯೋಜನೆ ರ್ಣಾಲಂಕಾರ ವಸ್ತ್ರಾಲಂಕಾರ ತಯಾರಿಕೆ ಮಾಡಿದ್ದೆ. ಈ ಜಾನಪದ ನೃತ್ಯ ಹಾಸನ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಪ್ರತಿಭಾ ಕಾರಂಜಿ ಸ್ರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. 2014ನೇ ಸಾಲಿನಲ್ಲಿ ನಡೆದ ಸ್ರ್ಧೆ ಹಾಗೆ ನಮ್ಮ ಚನ್ನರಾಯಪಟ್ಟಣದ ಜೈ ಜಾನಪದ ಮಹಿಳಾ ಕಲಾವಿದರಿಗೆ ಪ್ರಥಮ ಬಾರಿ ಡೊಳ್ಳು ಕುಣಿತ ತರಬೇತಿ ನೀಡಿದ್ದೆ.. ರ್ಕಾರಿ ಶಾಲೆಗಳ ವಿದ್ಯರ್ಥಿಗಳಿಗೆ ಸುಗಮ ಸಂಗೀತ, ಜಾನಪದ ತರಬೇತಿ ನೀಡುತ್ತಾ ಬಂದಿದ್ದೇನೆ. ವಿದ್ಯರ್ಥಿಗಳು ಜಾನಪದ, ಭಾವಗೀತೆ ಸ್ರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಪ್ರತಿಭಾ ಕಾರಂಜಿ ಸ್ರ್ಧೆಗಳಲ್ಲಿ ವಿವಿಧ ಪ್ರಕಾರದಲ್ಲಿ ಗೊರವ ನೃತ್ಯ, ಕಾಡುಜನರ ನೃತ್ಯ ತರಬೇತಿ ನೀಡಿ ಆ ಮಕ್ಕಳ ಪ್ರತಿಭೆ ಹಲವು ವೇದಿಕೆಗಳಲ್ಲಿ ಅನಾವರಣವಾಗಿದೆ.
ಕುರುಕ್ಷೇತ್ರ ಪೌರಾಣಿಕ ನಾಟಕದ ಅಭಿಮನ್ಯು ಪಾತ್ರದಲ್ಲಿ 20 ಬಾರಿ ಅಭಿನಯಿಸಿದ್ದೇನೆ. ಭೀಷ್ಮನಾಗಿ 12 ಬಾರಿ, ರಕ್ತರಾತ್ರಿ ನಾಟಕದಲ್ಲಿ ದರ್ಜಯನ ಪಾತ್ರ,
ದಕ್ಷಯಜ್ಞದಲ್ಲಿ ವಸುಂದರನ ಪಾತ್ರ ನರ್ವಹಿಸಿದ್ದೇನೆ. ಹವ್ಯಾಸಿ ನಾಟಕಗಳು ಸಂಭವಾಮಿ ಯುಗೇ ಯುಗೇ, ಅಶ್ವ ರ್ವ, ಕಿಂದರ ಜೋಗಿ.
ನನ್ನ ಕಲಾ ಸಾದನೆಗೆ ಜಿಲ್ಲಾ ರಾಜ್ಯೋತ್ಸವ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸoಘ ಸಂಸ್ಥೆಗಳಿಂದ ರಂಗ ಕಲಾರತ್ನ, ಕರುನಾಡ ಗಾನಕೋಗಿಲೆ, ಸಂಗೀತ ರತ್ನ, ಕಲಾ ಸೇವಾ ರತ್ನ ಪ್ರಶಸ್ತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸನ್ಮಾನಿಸಿದೆ.
2019ರಲ್ಲಿ ಸುರಾಗ ಟ್ರಸ್ಟ್ ಸಂಸ್ಥೆ ಮಾಡಿ ಇದರ ಅಧ್ಯಕ್ಷನಾಗಿ ಶಾಲಾ ಕಾಲೇಜುಗಳಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಸುಗಮ ಸಂಗೀತ, ಶಿಶುಗೀತೆ, ಮಹಿಳೆಯರಿಗೆ ಸೋಬಾನೆ ಪದಗಳ ತರಬೇತಿ ನೀಡುತ್ತಿದ್ದೇನೆ..
—
ಗೊರೂರು ಅನಂತರಾಜು,
ಮೊ:9449462879
ವಿಳಾಸ: ಹುಣಸಿನಕೆರೆ ಬಡಾವಣಿ,
29ನೇ ವರ್ಡ್, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,