ಕೆ.ಆರ್.ಪೇಟೆ,ಜೂ.25: ತಾಲ್ಲೂಕು ಒಕ್ಕಲಿಗರ ವೇದಿಕೆ(ರಿ) ವತಿಯಿಂದ ಜುಲೈ 1 ರಂದು ಟಿಎಪಿಸಿಎಂಎಸ್ ಸಂಸ್ಥೆಯ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದಲ್ಲಿ ಬೆಂಗಳೂರು ನಿರ್ಮಾತೃ ಸರ್ವಧರ್ಮ ಜನ ಪರಿಪಾಲಕರಾಗಿ ಅತ್ಯುತ್ತಮ ಆಡಳಿತ ನಡೆಸಿದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗಾಗಿ ಈ ಕಾರ್ಯಕ್ರಮಕ್ಕೆ ಸರ್ವ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ಪಟ್ಟಣದ ಬಸವೇಶ್ವರನಗರದಲ್ಲಿರುವ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಜಗದ್ಗುರು ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿಯವರು, ಕುಂಚಟಿಗ ಶ್ರೀ ಮಠದ ಜಗದ್ಗುರು ಡಾ.ನಂಜಾವಧೂತ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣಗೌಡ, ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಶಾಸಕರಾದ ಹೆಚ್.ಟಿ.ಮಂಜು, ದರ್ಶನ್ಪುಟ್ಟಣ್ಣಯ್ಯ, ವಿವಿಧ ಪಕ್ಷಗಳ ರಾಜ್ಯಮಟ್ಟದ ರಾಜಕೀಯ ನಾಯಕರು ಹಾಗೂ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಹಾಗಾಗಿ ಸರ್ವ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ವೇದಿಕೆ ಅಧ್ಯಕ್ಷ ವಳಗೆರೆಮೆಣಸ ಗ್ಯಾಸ್ ಕುಮಾರ್ಗೌಡ, ಪ್ರಧಾನ ಕಾರ್ಯದರ್ಶಿ ಗೌರೀಶ್, ಉಪಾಧ್ಯಕ್ಷ ಚಿಕ್ಕೋನಹಳ್ಳಿ ನಾಗರಾಜೇಗೌಡ, ಗೌರಾವಾಧ್ಯಕ್ಷ ವಡಕಹಳ್ಳಿ ಮಂಜಣ್ಣ, ಬೇಲದಕೆರೆ ನಂಜಪ್ಪ, ಟಿ.ವೈ.ಆನಂದ್, ಕೊರಟೀಕೆರೆ ದಿನೇಶ್, ಖಜಾಂಚಿ ಕಿರಣ್ಕುಮಾರ್, ಕಾರ್ಯಾಧ್ಯಕ್ಷ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಚಿನ್ನೇನಹಳ್ಳಿ ಕಾಂತರಾಜು, ಸಹ ಕಾರ್ಯದರ್ಶಿ ಶ್ರೀನಿವಾಸ್, ವೇದಿಕೆಯ ನಿರ್ದೇಶಕರಾದ ಎ.ಬಿ.ಕುಮಾರ್, ಮೆಣಸ ನಾಗೇಂದ್ರ, ಡಿ.ಎಸ್.ನಾಗೇಂದ್ರ, .ವಿ.ರಾಮಕೃಷ್ಣೇಗೌಡ, ಗುಡ್ಡೇನಹಳ್ಳಿ ಸೋಮಣ್ಣ, ಎ.ಸಿ.ಮುರುಳಿ, ವಡ್ಡರಹಳ್ಳಿ ಮಹಾದೇವ್, ನಿಂಗರಾಜು, ಲೋಹಿತಾಶ್ವ, ರಾಜೇಶ್, ದೇವರಾಜು, ಸಂತೋಷ್, ಲೋಕಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಬೋರ್ವೆಲ್ ಮಹೇಶ್, ಎನ್.ಎಂ.ಹರೀಶ್, ಅಲೋಕ್ಚಂದ್ರ, ಉಮೇಶ್ ಸೇರಿದಂತೆ ಹಲವು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್
