ಹಾಸನ, ಜೂ.26: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಟಾರ್ಗೆಟ್ ಪದವಿ ಪೂರ್ವ ಕಾಲೇಜು, ವಿಜಯನಗರ ಬಡಾವಣೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ‘ನಾ ಮೆಚ್ಚಿದ ಪುಸ್ತಕ’ ವಿದ್ಯಾರ್ಥಿಗಳ ಓದು ಕಾರ್ಯಕ್ರಮವನ್ನು ಜೂನ್ 29ರಂದು (ಸೋಮವಾರ) ಬೆಳಗ್ಗೆ 11 ಗಂಟೆಗೆ ಟಾರ್ಗೆಟ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಉದ್ಘಾಟಿಸಲಿದ್ದು, ಇದೇ ಸಂದರ್ಭದಲ್ಲಿ ‘ಮನೆಗೊಂದು ಗ್ರಂಥಾಲಯ’ ಹಾಸನ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಾರ್ಗೆಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ರಾಹುಲ್ ವಹಿಸಲಿದ್ದು, ಸಾಹಿತಿ ಗೊರೂರು ಅನಂತರಾಜು ಅವರು ‘ಓದಿನ ಮಹತ್ವ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ಹಾಗೂ ಟಾರ್ಗೆಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಹೆಚ್. ಗಣೇಶ್ ಅಂಕಪುರ ಭಾಗವಹಿಸಲಿದ್ದಾರೆ.
‘ನಾ ಮೆಚ್ಚಿದ ಪುಸ್ತಕ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಭೂಮಿಕ ಎಸ್. ಗೌಡ, ಸಮೀಕ್ಷಾ, ವರ್ಷಿಣಿ ಜಿ.ಆರ್., ಇಂಚರ ಗೌಡ, ಹರ್ಷಿತಾ, ತೇಜಸ್ವಿನಿ, ಅನು ಹಾಗೂ ಚಾಂದಿನಿ ತಾವು ಓದಿದ ಮೆಚ್ಚಿನ ಪುಸ್ತಕಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
