ಚೀನಿಯರ ಹಸ್ತಾಕ್ಷರ ವಿಚಿತ್ರವಾದದ್ದು. ಇವರಿಗೆ ವರ್ಣಮಾಲೆಯೇ ಇಲ್ಲ. ಇವರ ಬರಹ “Logo graphic” ವಿನ್ಯಾಸ ಮತ್ತು ಅದರದೇ ಆದ ಉಚ್ಛಾರಣೆ (phonetics). ಒಂದು ಅಂದಾಜಿನ ಪ್ರಕಾರ ಐವತ್ತು ಸಾವಿರ ಲೋಗೋ ಗ್ರಾಫಿಕ್ ವಿನ್ಯಾಸ ಇವಯಂತೆ. ಇವುಗಳ ಪೈಕಿ ಮೂರು ಸಾವಿರ ವಿನ್ಯಾಸ ಮತ್ತು ಅವುಗಳ ಉಚ್ಚಾರ ಕಲಿತರೆ ಮಹಾ ಮೇಧಾವಿ ಆಗಬಹುದಂತೆ. ನಾವು ಹೋಗುತ್ತಿದ್ದ ಹೋಟೆಲ್ಲಿನ ಮಾಲಿಕ ಮದ್ರಾಸಿ (Chennai).

ಸುಮಾರು ಇಪ್ಪತೈದು ವರ್ಷಗಳಿಂದ ಅಲ್ಲಿ ವಾಸವಿದ್ದಾರೆ. ಆವರನ್ನು ವಿಚಾರಿಸಿದಾಗ “ಸರ್, ನನಗೆ 10 % ಚೀನಾದ ಬಾಷೆ ತಿಳಿದಿದ್ದೇನೆ” ಎಂದರು.ಅವರ ಭಾಷೆ ಕಲಿಯಲು ಬಹು ಕಷ್ಟ. ಮಾತನಾಡುತ್ತಿದ್ದರೆ ಅವುರುಗಳು ಜಗಳ ಆಡುತ್ತಿದ್ದಾರೇ ಏನೋ ಎಂಬ ಭಾವನೆ ನಮಗೆ ಬರುತ್ತದೆ. ನಮ್ಮ ಗೈಡ್ ನ ಹೆಸರು “ಚೋ ಚೌ”. ಇಲ್ಲಿಯ ಮೊದಲನೆ ಹೆಸರು ಅವರ family ಹೆಸರಂತೆ. ಕೊನೆಯದ್ದು ಅವರ ಹೆಸರು.

ಅಲ್ಲಿಯ ಶೇಕಡ ತೊಂಬತ್ತೊಂಬತ್ತು ಜನ ಇಂಗ್ಲೀಷ್ ಕಲಿಯುವುದೇ ಇಲ್ಲ. ಚೀನಾದ ಎಲ್ಲಾ ಇಂಗ್ಲಿಷಿನ ಪ್ರಾಧ್ಯಾಪಕರುಗಳು ಇಂಗ್ಲಿಷ್ ಕಲಿಯುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೆಸರು ಇಡುತ್ತಾರಂತೆ. ಹಾಗಾಗಿ ನಮ್ಮ ಗೈಡಿನ ಹೆಸರು “steve”. ನಮಗೆ ಬಂದ ಗೈಡ್ಸ್ ಹೆಸರುಗಳು Bob, Pay, May ಹೀಗೆ ಇಟ್ಟುಕೊಂಡಿದ್ದರು.

ನಮ್ಮ ಗೈಡ್ ಆಮಂತ್ರಣ ನೀಡಿ ನಮ್ಮನ್ನು ಉದ್ದೇಶಿಸಿ “ನೀ ಹೋ” ಅಂದರು. “ನೀ” ಅಂದರೆ “ನೀವು (you)” ಮತ್ತು “ಹೋ” ಅಂದರೆ “ಕುಶಲವೇ (good)”. ಅರ್ಥಾತ್ “you good” ಎಂದು. ಇದನ್ನೇ ಅಮೇರಿಕದವರು ಕಾಪಿ ಮಾಡಿದ್ದಾರೆ. ನಾವು “how are you?” ಎಂದರೆ ಅಮೇರಿಕಾದಲ್ಲಿ “you good?” ಎಂದೆನ್ನುತ್ತಾರೆ (ಹೊಸಾ trend).

ನಾವು ಎಲ್ಲಾ ಪ್ರೇಕ್ಷಣೀಯ ಸ್ಥಳಗಳ ಬೇಟಿ ನೀಡಿದಾಗಲು ನಮ್ಮ ಪಾಸ್ಪೋರ್ಟ್ ತೋರಿಸಬೇಕು. ಸ್ಥಳೀಯರು ಅವರ Identity card ತೋರಿಸಿದರೆ ಸಾಕು ಬಿಡುತ್ತಾರೆ. ಕೆಲವು ಕಡೆ ನಮ್ಮ passports ನ್ನು ಸ್ಕ್ಯಾನ್ ಮಾಡುತ್ತಿದ್ದರು. ನಮ್ಮದು group visa ಆದ್ದರಿಂದ ನಾವು ಎಲ್ಲೇ ಹೋದರು group ನಲ್ಲೇ ಇರಬೇಕು. ಅಲ್ಲಿ ಪ್ರವಾಸಿಗರಿಗೆ ಸೀಸನ್ ಆದ್ದರಿಂದ ಎಲ್ಲಿ ನೋಡಿದರು ಜನಜಂಗುಳಿ. ರಷ್ಯ ಮತ್ತು ಈರೋಪ್ ರಾಷ್ಟ್ರಗಳಿಗೆ ಬೇಸಿಗೆ ಮತ್ತು ರಜಾ ತಿಂಗಳಗಳು ಆದ್ದರಿಂದ ಆ ದೇಶಗಳ ಪ್ರವಾಸಿಗರೇ ಹೆಚ್ಚು. ಅವರೆಲ್ಲರೂ ಗುಂಪಿನಲ್ಲೇ ಇರುತ್ತಾರೆ. ಗುಂಪಿನ ಚೈನ್ ಕಳಿಚಿದರೆ ಒಳ ಹೋಗಲು ಬಲು ಕಷ್ಟ. ನಮಗೆ ಈ ಸ್ಥಿತಿ “Tiananmen square” ಲ್ಲಿ ಆಯಿತು. ಐದು ಸಾಲಿನ ಗುಂಪಿನಲ್ಲಿ ನಮ್ಮನ್ನು ಬೇರೆ ಭಾಗ – 4 … ಚೀನಾ ಪ್ರವಾಸ ಕಥನ

ಚೀನಿಯರ ಹಸ್ತಾಕ್ಷರ ವಿಚಿತ್ರವಾದದ್ದು. ಇವರಿಗೆ ವರ್ಣಮಾಲೆಯೇ ಇಲ್ಲ. ಇವರ ಬರಹ “Logo graphic” ವಿನ್ಯಾಸ ಮತ್ತು ಅದರದೇ ಆದ ಉಚ್ಛಾರಣೆ (phonetics). ಒಂದು ಅಂದಾಜಿನ ಪ್ರಕಾರ ಐವತ್ತು ಸಾವಿರ ಲೋಗೋ ಗ್ರಾಫಿಕ್ ವಿನ್ಯಾಸ ಇವಯಂತೆ. ಇವುಗಳ ಪೈಕಿ ಮೂರು ಸಾವಿರ ವಿನ್ಯಾಸ ಮತ್ತು ಅವುಗಳ ಉಚ್ಚಾರ ಕಲಿತರೆ ಮಹಾ ಮೇಧಾವಿ ಆಗಬಹುದಂತೆ.

ನಾವು ಹೋಗುತ್ತಿದ್ದ ಹೋಟೆಲ್ಲಿನ ಮಾಲಿಕ ಮದ್ರಾಸಿ (Chennai). ಸುಮಾರು ಇಪ್ಪತೈದು ವರ್ಷಗಳಿಂದ ಅಲ್ಲಿ ವಾಸವಿದ್ದಾರೆ. ಆವರನ್ನು ವಿಚಾರಿಸಿದಾಗ “ಸರ್, ನನಗೆ 10 % ಚೀನಾದ ಬಾಷೆ ತಿಳಿದಿದ್ದೇನೆ” ಎಂದರು.

ಅವರ ಭಾಷೆ ಕಲಿಯಲು ಬಹು ಕಷ್ಟ. ಮಾತನಾಡುತ್ತಿದ್ದರೆ ಅವುರುಗಳು ಜಗಳ ಆಡುತ್ತಿದ್ದಾರೇ ಏನೋ ಎಂಬ ಭಾವನೆ ನಮಗೆ ಬರುತ್ತದೆ. ನಮ್ಮ ಗೈಡ್ ನ ಹೆಸರು “ಚೋ ಚೌ”. ಅಲ್ಲಿ ಮೊದಲ ಹೆಸರು ಅವರ family ಹೆಸರಂತೆ. ಕೊನೆಯದ್ದು ಅವರ ಹೆಸರು. ಅಲ್ಲಿಯ ಶೇಕಡ ತೊಂಬತ್ತೊಂಬತ್ತು ಜನ ಇಂಗ್ಲೀಷ್ ಕಲಿಯುವುದೇ ಇಲ್ಲ. ಚೀನಾದ ಎಲ್ಲಾ ಇಂಗ್ಲಿಷಿನ ಪ್ರಾಧ್ಯಾಪಕರುಗಳು ಇಂಗ್ಲಿಷ್ ಕಲಿಯುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೆಸರು ಇಡುತ್ತಾರಂತೆ. ಹಾಗಾಗಿ ನಮ್ಮ ಗೈಡಿನ ಹೆಸರು “steve”. ನಮಗೆ ಬಂದ ಗೈಡ್ಸ್ ಹೆಸರುಗಳು Bob, Pay, May ಹೀಗೆ ಇಟ್ಟುಕೊಂಡಿದ್ದರು.

ನಮ್ಮ ಗೈಡ್ ಆಮಂತ್ರಣ ನೀಡಿ ನಮ್ಮನ್ನು ಉದ್ದೇಶಿಸಿ “ನೀ ಹೋ” ಅಂದರು. “ನೀ” ಅಂದರೆ “ನೀವು (you)” ಮತ್ತು “ಹೋ” ಅಂದರೆ “ಕುಶಲವೇ (good)”. ಅರ್ಥಾತ್ “you good” ಎಂದು. ಇದನ್ನೇ ಅಮೇರಿಕದವರು ಕಾಪಿ ಮಾಡಿದ್ದಾರೆ. ನಾವು “how are you?” ಎಂದರೆ ಅಮೇರಿಕಾದಲ್ಲಿ “you good?” ಎಂದೆನ್ನುತ್ತಾರೆ (ಹೊಸಾ trend).

ನಾವು ಎಲ್ಲಾ ಪ್ರೇಕ್ಷಣೀಯ ಸ್ಥಳಗಳ ಬೇಟಿ ನೀಡಿದಾಗಲು ನಮ್ಮ ಪಾಸ್ಪೋರ್ಟ್ ತೋರಿಸಬೇಕು. ಸ್ಥಳೀಯರು ಅವರ Identity card ತೋರಿಸಿದರೆ ಸಾಕು ಬಿಡುತ್ತಾರೆ. ಕೆಲವು ಕಡೆ ನಮ್ಮ passports ನ್ನು ಸ್ಕ್ಯಾನ್ ಮಾಡುತ್ತಿದ್ದರು. ನಮ್ಮದು group visa ಆದ್ದರಿಂದ ನಾವು ಎಲ್ಲೇ ಹೋದರು group ನಲ್ಲೇ ಇರಬೇಕು. ಅಲ್ಲಿ ಪ್ರವಾಸಿಗರಿಗೆ ಸೀಸನ್ ಆದ್ದರಿಂದ ಎಲ್ಲಿ ನೋಡಿದರು ಜನಜಂಗುಳಿ.

ರಷ್ಯ ಮತ್ತು ಈರೋಪ್ ರಾಷ್ಟ್ರಗಳಿಗೆ ಬೇಸಿಗೆ ಮತ್ತು ಮತ್ತು ರಜಾ ಇರುವುದರಿಂದ ಆ ದೇಶಗಳ ಪ್ರವಾಸಿಗರೇ ಹೆಚ್ಚು. ಅವರೆಲ್ಲರೂ ಗುಂಪಿನಲ್ಲೇ ಇರುತ್ತಾರೆ. ಗುಂಪಿನ ಚೈನ್ ಕಳಿಚಿದರೆ ಒಳ ಹೋಗಲು ಬಲು ಕಷ್ಟ. ನಮಗೆ ಈ ಸ್ಥಿತಿ “Tiananmen square” ಲ್ಲಿ ಆಯಿತು. ಐದು ಸಾಲಿನ ಗುಂಪಿನಲ್ಲಿ ನಮ್ಮನ್ನು ಬೇರೆ ಗುಂಪಿನವರು ತಡೆ ಒಡ್ಡಿದರು. ನಮ್ಮ ಗುಂಪಿಗೆ time slot ಕೊಟ್ಟಿರುತ್ತಾರೆ. ಆ ಸಮಯಕ್ಕೆ ನಾವು enter ಆಗಬೇಕು. ನಮ್ಮ ಗೈಡ್ ಒಂದೇ ಉಸಿರಿಗೆ ಬಂದು ಆ ಗಲಾಟೆಯಲ್ಲಿ ನಮ್ಮನ್ನು ಎಳೆದುಕೊಂಡು ಹೋಗಿಬಿಟ್ಟರು.

Tiananmen square ಗೆ ತುಂಬಾ ದೂರ ನಡೆಯಬೇಕು. ವಯಸ್ಸಾದವರಿಗೆ ಸ್ವಲ್ಪ ಕಷ್ಟವೇ. ನಾವು ಈ square ನೋಡಿ ಹೊರ ಬರಲು ಸುಮಾರು ಹತ್ತು ಕಿಲೋಮೀಟರ್ಸ ನೆಡೆದೆವು. ಸಾವಿರದ ಆರುನೂರ ಐವತ್ತೊಂದರಲ್ಲಿ ( ಮಿಂಗ್ dynasty) ಬೀಜಿಂಗ ನಗರದ ಮಧ್ಯ ಭಾಗದಲ್ಲಿ ಸುಮಾರು ನಾಲ್ಕುವರೆ ಲಕ್ಷ ಚದರ ಮೀಟರ್ಸ ಜಾಗದಲ್ಲಿ ಪ್ರಪ್ರಥಮವಾಗಿ ಕಟ್ಟಲ್ಪಟ್ಟ ಪ್ಲಾಜಾ ಇದು. ಇದನ್ನು 1956 ಲ್ಲಿ ಮಾವೋ ಕಮ್ಯುನಿಸ್ಟ ಪಾರ್ಟಿ ವಿಸ್ತರಿಸಿದರು. ಇಂದು ಅಲ್ಲಿ ಅವರ ಸಂಸತ್ ಭವನ, ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಮಾವೋ ಭವನ ಮತ್ತು ಹಳೆ ಅರಮನೆ ಇವೆ. ಮಧ್ಯ ಭಾಗದಲ್ಲಿ ಚೀನಾದ ವೀರರನ್ನು ನೆನಪಿಸುವ ಸ್ಮಾರಕ ಎಂದು ಹೇಳಲಾದ ಎತ್ತರದ ಕಂಬವಿದೆ. ಅರಮನೆಯ ಸಂಕೀರ್ಣ ದೊಡ್ಡದಾಗಿದೆ ಹಾಗು ಸಭಾಂಗಣ, ಭೋಜನ ಶಾಲೆ, ವಾಸವಿದ್ದ ಅರಮನೆ ಹೀಗೆ ಹಲವಾರು ಇವೆ. ಯಾರನ್ನು ಒಳಗೆ ಬಿಡುವುದಿಲ್ಲ. ಈ ಸಂಕೀರ್ಣವನ್ನು “forbidden city” ಎಂದು ಕರೆಯುತ್ತಾರೆ.

ಮಿಂಗ್ ಮತ್ತು ಕ್ವಿಂಗ್ ರಾಜವಂಶಸ್ತರಿಗೆ ಹಾಗು ತಮ್ಮ ಮಂತ್ರಿ ಮಂಡಲದವರಿಗೆ ಮಾತ್ರ ಪ್ರವೇಶವಿತ್ತು. ಒಳ ಹೋಗಲು ಮೂರು ದ್ವಾರಗಳು ಇರುತ್ತವೆ. ಮಧ್ಯ ರಾಜರಿಗೆ, ಎಡ ದ್ವಾರ ಮಂತ್ರಿಗಳಿಗೆ ಮತ್ತು ಬಲ ದ್ವಾರ ಅರಮನೆಯ ಇತರರಿಗೆ ಪ್ರವೇಶ (Budhist ವಾಸ್ತುಶಿಲ್ಪ). ನಾಗರಿಕರಿಗೆ ಈ ಸಂಕೀರ್ಣದ ಎಡ ಮತ್ತು ಬಲ ಎರಡು ಚಿಕ್ಕ ದ್ವಾರಗಳನ್ನು ಬಳಸಬೇಕಿತ್ತು. ಇದು ಪ್ರಪಂಚದಲ್ಲೇ ಬಹು ದೊಡ್ಡ ಕಟ್ಟಿಗೆ (wood) ಗಳಿಂದ ಕಟ್ಟಿದ ಅರಮನೆ ಸಮುಚ್ಚಯ ಆಗಿರುತ್ತದೆ.

1989 ನೆ ಇಸವಿಯಲ್ಲಿ ಈ ಚೌಕದಲ್ಲಿ ಅಲ್ಲಿಯ ವಿದ್ಯಾರ್ಥಿಗಳು ಕಮ್ಯುನಿಸ್ಟ ವಿರುದ್ಧ ದಂಗೆ ಎದ್ದಾಗ ಸಾವಿರಾರು ಪ್ರತಿಭಟನೆ ನಿರತರನ್ನು ಅಥವಾ ಅಮಾಯಕರನ್ನು ಅಮಾನುಷವಾಗಿ ಅಲ್ಲಿಯ ಸೈನಿಕರು ಮಾರಣಹೋಮ ಮಾಡಿದ್ದರು ಎಂಬುದು ಇತಿಹಾಸ.
“ಟೀ” ಪ್ರಿಯರಿಗೆ ಮತ್ತು ಶಾಕಾಹಾರಿ ಪ್ರವಾಸಿಗರಿಗೆ ಚೀನಾ ಪ್ರವಾಸ ಬಲು ಕಷ್ಟ. ಭಾರತೀಯ ಶಾಕಾಹಾರಿ ಹೋಟಲ್ಗಳು ಈ ದೇಶದಲ್ಲಿ ಇಲ್ಲವೇ ಇಲ್ಲ. ಭಾರತ ಮೂಲದ ಹೋಟೆಲ್ಸ ಅತಿ ವಿರಳ. ಇದ್ದರೂ ಮಾಂಸಾಹಾರ ಮತ್ತು ಶಾಕಹಾರ ಅಹಾರ ಸಿಗುತ್ತವೆ. ಕಾಫಿ ವೆಂಡರ್ ಶಾಪ್ಗಳು ಹೇರಳವಾಗಿ ಸಿಗುವುದು ಆದರೆ ಟೀ ಕುಡಿಯಲು “ಟೀ ಶಾಪ್” ಸಿಗುವುದೇ ಇಲ್ಲ. ಇಲ್ಲಿಯ ವೆಜಿಟಬಲ್ ಅಯಿಲ್ “soya oil”. ಇದರಿಂದ ಕರಿದಿರೋ ಶಾಕಾಹಾರಿ preparations ಸ್ವಾದ ಅಥವಾ ರುಚಿ ಸ್ವಲ್ಪ ವಿಭಿನ್ನವಾಗಿ ಇರುತ್ತದೆ.
“ಮರಕತ” ಅಥವಾ “ಪಚ್ಚೆ (jade)” ಚೀನಾದ “Guangdong” ಪ್ರಾವಿನ್ಸ (province or district) ಲ್ಲಿ ಸಿಗುತ್ತವೆ. ಈ ಪ್ರದೇಶದಲ್ಲಿ ಸಿಗುವ ಪಚ್ಚೆಕಲ್ಲುಗಳು ಶ್ರೇಷ್ಟ ಮತ್ತು ತುಂಬ ಬೆಲೆಬಾಳುವುದು. ಇವುಗಳಲ್ಲಿ ಎರಡು ತರಹ ಇರುತ್ತವೆ. Jadeite ಮತ್ತು nephrite. Jadeite ಅತ್ಯುತ್ತಮವಾದ ಕಲ್ಲು ಮತ್ತು ಪಾರದರ್ಶಕ. ಆದರೆ nephrite ಲ್ಲಿ aluminium silicate ಇರುವುದರಿಂದ ಪಾರದರ್ಶಕತೆ ಇರುವುದಿಲ್ಲ. Maynmar ಲ್ಲೂ ಸಹ ಪಚ್ಚೆಕಲ್ಲು ಸಿಗುವುದು. ಇಲ್ಲಿಯ ಕಲ್ಲುಗಳು ಅತಿ ಶ್ರೇಷ್ಟ ಮತ್ತು most expensive. ಒಂದು carat ನ ಬೆಲೆ ಇಪ್ಪತೈದು ಸಾವಿರ ಡಾಲರ್ಸ. ಇದನ್ನು imperial jade ಎಂದು ಕರೆಯುತ್ತಾರೆ. ಇಂತಹ ಕಲ್ಲುಗಳು ಅಚ್ಚು ಹಸಿರಿನ ಬಣ್ಣ ಹೊಂದಿರುತ್ತದೆ. ನಾವು jade’s ಗೆ ಎಂದೇ ಇರುವ jades museum ಗೆ ಹೋದೆವು. ಇಲ್ಲಿ ಪಚ್ಚೆ ಕಲ್ಲಿನಿಂದ ಬೃಹತ್ ಗಾತ್ರದ ಕಲಾ ಕೃತಿಗಳನ್ನು ನೋಡಬಹುದು. ಇಲ್ಲಿ ತರ ತರಹದ jade ಆಭರಣ ಕಾಣಬಹುದು ಮತ್ತು ಕೊಳ್ಳಬಹುದು.
ಮುಂದುವರಿಯುವುದು…

