ರಾಮನಾಥಪುರ.- ಮನುಷ್ಯ ಬದುಕಿನಲ್ಲಿ ನಿರ್ಧಷ್ಠವಾದ ಗುರಿಹೊಂದಿ ಸಾಗಬೇಕಾದರೇ ಸಾಕಷ್ಟು ಅಡೆತಡೆಗಳು ಸಹಜ. ಬರುವ ಅಡೆತಡೆಗಳನ್ನು ಮೀರಬೇಕಾದರೇ ಭಗವಂತನ ಸ್ವರಣೆಯಿಂದರಬೇಕು. ಈ ನಮ್ಮ ನಾಡಿನ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲು ಶ್ರೀಭಗವಾದ್ರ ಮಾನುಜಾಚಾರ್ಯರು ಈ ಭೂಮಿಯಲ್ಲಿ ಜನಿಸಿದ್ದರು. ಇಂತಹ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟತಂಹ ಧರ್ಮಾಚರಣೆ ಕಾರ್ಯಗಳನ್ನು ನಾವು ಅಳವಡಿಸಿಕೊಂಡು ಮುನ್ನೆಡೆಯೊಣ, ಹಾಗೂ ಪರಿಪಾಲಿಸೋಣ ಎಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮಿತಿ ಅಧ್ಯಕ್ಷರು ವೇ. ಕೃಷ್ಣ ಅವರು ತಿಳಿಸಿದರು.

ರಾಮನಾಥಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀಭಗವಾದ್ರ ಮಾನುಜಾಚಾರ್ಯರ ಜನ್ಮದಿನದ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮಹಾಮಂಗಳಾರತಿ ನಂತರ ಉಪನ್ಯಾಸ ನೀಡಿದ ಅವರು ಶ್ರೀಭಗವಾದ್ರ ಮಾನುಜಾಚಾರ್ಯರು ಸಕಲ ವಿದ್ಯೆಗಳಲ್ಲಿ ಪಾರಂಗತರಾಗಿ ಸಮಾಜದಲ್ಲಿ ಭಕ್ತಿ ಧರ್ಮ ಧಾರ್ಮಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಅವತರಿಸಿದ್ದರು, ಇಂತಹ ಮಹಾನಿಯರ ಆದರ್ಶಗಳ ಬದುಕು ನಾವು ಅಳವಡಿಸಿಕೊಂಡು ನಡೆಯಬೇಕು. ಅವಾಗ ಮಾತ್ರ ನಮ್ಮ ಹಿಂದಿನವರು ಹಾಕಿಕೊಟ್ಟ ಸನಾತನ ಧರ್ಮಗಳು ಉಳಿಯುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅರ್ಚಕರು ವೇ. ಉದಯರವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಬಂದಂತಹ ಭಕ್ತಾದಿಗಳಿಗೆ ದೇವಾಲಯದ ಸಮಿತಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.
ವರದಿ. ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
