ರಾಮನಾಥಪುರ, ಏಪ್ರಿಲ್ 18: ಹನ್ಯಾಳು ಗ್ರಾಮದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಅವರಿಗೆ ಶಿರದನಹಳ್ಳಿ ಸತ್ಯ ಶನೈಶ್ಚರಸ್ವಾಮಿ ಕಲ್ಲಿನ ದೇವಾಲಯದ ಗುದ್ದಲಿಪೂಜೆ ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿ ಗೌರವಿಸಲಾಯಿತು.
ಏಪ್ರಿಲ್ 20ರ ಸೋಮವಾರ ಬೆಳಿಗ್ಗೆ 8 ರಿಂದ 11 ಗಂಟೆಯ ಶುಭ ಮುಹೂರ್ತದಲ್ಲಿ ನಡೆಯಲಿರುವ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಾಲಯದ ಮುಖ್ಯ ಅರ್ಚಕರಾದ ಹಾಗೂ ಸಂಸ್ಥಾಪಕರಾದ ಶ್ರೀ ನಾಗರಾಜಸ್ವಾಮಿ ಅವರು ಮಾಜಿ ಸಚಿವ ಎ. ಮಂಜು ಅವರಿಗೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜಸ್ವಾಮಿ ಮಾತನಾಡಿ, ಶ್ರೀಕ್ಷೇತ್ರ ಶಿರದನಹಳ್ಳಿ ಗ್ರಾಮದಲ್ಲಿ ಭೂಮಂಡಲ ಸತ್ಯ ಶನೈಶ್ಚರಸ್ವಾಮಿ ಹಾಗೂ ಶಿರದನಹಳ್ಳಿ ಪಿರಿಯಪಟ್ಟಣದಮ್ಮನವರ ಕ್ಷೇತ್ರದಲ್ಲಿ ನಡೆಯುವ ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಂಗೂರು ಜಿ.ಸಿ. ಮಂಜೇಗೌಡ, ಹನ್ಯಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಅರ್. ನಂದೀಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದರಾಜು, ಗುತ್ತಿಗೆದಾರ ಹೇಮಂತ್ ಕುಮಾರ್ ಹಾಗೂ ಮಧು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಗುದ್ದಲಿಪೂಜೆಯನ್ನು ಯಶಸ್ವಿಗೊಳಿಸಬೇಕೆಂದು ನಾಗರಾಜಸ್ವಾಮಿ ಅವರು ಮನವಿ ಮಾಡಿದರು.
– ಎಂ.ಎನ್.ಕುಮಾರಸ್ವಾಮಿ.
