ತುಮಕೂರು:ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅಕೌಂಟೆಂಟ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ಜನಮನ್ನಣೆಗಳಿಸಿ,ವಿದ್ಯಾರ್ಥಿಗಳ,ಪೋಷಕರು,ಉಪನ್ಯಾಸಕರಿಂದ ಉತ್ತಮ ಹೆಸರು ಮಾಡಿದ್ದ ಜಿ.ಷಡಾಕ್ಷರಯ್ಯರವರು ಇಂದು ವಯೋನಿವೃತ್ತಿ ಹೊಂದಿದ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ||ಜಿ.ಆರ್.ರೇವಣ್ಣಸಿದ್ದಪ್ಪ, ಡಾ||ಟಿ.ಬಿ.ನಿಜಲಿಂಗಪ್ಪ, ಪದಾಧಿಕಾರಿಗಳಾದ ಬಿ.ಎಸ್.ಸೂರ್ಯನಾರಾಯಣಗುಪ್ತ, ಪ್ರೊ.ಸಿ.ಎಸ್.ಸೋಮಶೇಖರಯ್ಯ, ಕೆ.ಬಿ.ಚಂದ್ರಚೂಡ, ಶ್ರೀಮತಿ ಆರ್.ಎಸ್.ಆಶಾರಾಣಿ, ಪ್ರೊ.ಲಿಂಗದೇವರಪ್ಪ, ಚೇತನ್ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
