ಟಿ.ನರಸೀಪುರ : ವಿಶ್ವ ಪರಿಸರ ದಿನದ ಅಂಗವಾಗಿ ಸಂತ ನೋರ್ಬರ್ಟ್ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟಿ.ನರಸೀಪುರ ಹಾಗೂ ಕೊಳ್ಳೇಗಾಲ ಮುಖ್ಯರಸ್ತೆಯ ಬಳಿ ಬರುವ ಸಂತ ನೋರ್ಬರ್ಟ್ ಶಾಲೆಯಲ್ಲಿ ವ್ಯವಸ್ಥಾಪಕರಾದ ಫಾದರ್ ಬೆನ್ನಿ ಥಾಮಸ್ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಮರ-ಗಿಡಗಳ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸುವುದರ ಜೊತೆಗೆ ಸಂರಕ್ಷಣೆ ಮಾಡಬೇಕು, ನಮ್ಮ ಶಾಲೆಯಲ್ಲೂ ಕೂಡ ಪರಿಸರದ ಮಹತ್ವವನ್ನು ಕುರಿತು ಮಕ್ಕಳಿಗೆ ತಿಳಿಸುತ್ತಿರುತ್ತೇವೆಂದರು.

ಪ್ರಾಂಶುಪಾಲರಾದ ಸಿಸ್ಟರ್ ಸುಮಿ ರೋಸಾ ರವರು ಮಾತನಾಡುತ್ತಾ ಪ್ರತಿ ಮನೆಗಳಲ್ಲಿ , ಊರುಗಳಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸವಾಗಬೇಕಾಗಿದೆ, ತಾಪಮಾನವನ್ನು ತಗ್ಗಿಸಲು ಮರ-ಗಿಡಗಳು ಬಹಳ ಮುಖ್ಯ ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳು ಹಸಿರು ಬಟ್ಟೆಯನ್ನು ಧರಿಸಿ ಬರುವುದರ ಜೊತೆಗೆ ಕೈಯಲ್ಲಿ ಒಂದು ಗಿಡವನ್ನು ತಂದು ನೆಡುವುದರ ಮೂಲಕ ಸಂತಸದಿಂದ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಹಣಕಾಸು ವ್ಯವಸ್ಥಾಪಕರಾದ ಫಾದರ್ ರೆನಿನ್ ಸಬಾಸ್ಟಿನ್ , ಫಾದರ್ ವಿನೀತ್ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.
– ಎಂ. ನಾಗೇಂದ್ರ ಕುಮಾರ
