ತುಮಕೂರು: ಉಪಮುಖ್ಯಮಂತ್ರಿ ಆದ ನಂತರ ಪ್ರಪ್ರಥಮ ಬಾರಿಗೆ ತುಮಕೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ರವರನ್ನು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು,ಮುಖಂಡರು,ಪರಮೇಶ್ವರ್ ಅಭಿಮಾನಿ ಬಳಗದವರು,ಇಕ್ಬಾಲ್ ಅಹಮದ್ ಅಭಿಮಾನಿ ಬಳಗದವರು,ಕಾರ್ಯಕರ್ತರು ಡಾ||ಜಿ.ಪರಮೇಶ್ವರ್ ರವರನ್ನು ಹೆಚ್.ಎಂ.ಎಸ್.ಕಾಲೇಜಿನ ಬಳಿ ಅದ್ಧೂರಿಯಾಗಿ ಬರಮಾಡಿಕೊಂಡರು,ನಂತರ ಮಾಜಿ ಸಚಿವ ರಾಜಣ್ಣ ಮನೆಗೆ ಭೇಟಿ ನೀಡಿದರು,ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜಣ್ಣ ನಂದು ೫೦ ವರ್ಷದ ಗೆಳೆತನ. ಈ ಸಂದರ್ಭದಲ್ಲಿ ಒಟ್ಟಿಗೆ ರಾಜಕಾರಣ ಮಾಡಿದವರು. ನಾವೆಲ್ಲಾ ಒಟ್ಟಿಗೆ ಇದ್ದೀವಿ ಅಂತಾ ಸಂದೇಶ ಹೋಗಬೇಕು ಅಂತ ಭೇಟಿ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಅವರಿಗೆ ಸಚಿವ ಸ್ಥಾನ ಸಿಗಲು ನಾನು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದರು .

ತುಮಕೂರು ಸಿಎಂ ಸ್ಥಾನ ಸಿಗುತ್ತೆ ಎಂಬ ನೀರೀಕ್ಷೆಯಿತ್ತು ಎನ್ನುವ ವಿಚಾರವಾಗಿ, ಅದು ಹೈಕಮಾಂಡ್ ತೀರ್ಮಾನ,ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಡಿಕೆಶಿ ಅವರನ್ನ ಪರಿಗಣಿಸಿದ್ದಾರೆ. ಅವರು ಡಿಸಿಎಂ ಆಗಿದ್ದವರು, ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಅವರನ್ನ ಪರಿಗಣಿಸಿದ್ದಾರೆ. ನಾವು ಅವರ ಜೊತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೆರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟು, ಹಣಕಾಸಿನ ಶಿಸ್ತು ಕಾಪಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರಿಗೂ ಸಹ ಅಭಿನಂದನೆ ಸಲ್ಲಿಸುತ್ತೇನೆ. ಅವರ ಮಾರ್ಗದರ್ಶನ ಕೂಡ ಸರ್ಕಾರಕ್ಕೆ ಇರುತ್ತೆ ಎಂದರು.ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ತೃಪ್ತಿಯಾಗಿದೆಯಾ ಎಂಬ ವಿಚಾರವಾಗಿ, ನಾನು ಯಾವಾಗಲೂ ಅತೃಪ್ತಿಯಾಗಿಲ್ಲ ನಾನು ತೃಪ್ತಿಯಾಗಿದ್ದೇನೆ ಎಂದರು.ನಂತರ ಬಟವಾಡಿ ಶ್ರೀ ಆಂಜನೇಯ ದೇವಸ್ಥಾನದಿಂದ ಟೌನ್ ಹಾಲ್ ಬಳಿ ಇರುವ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೂ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು.
ಪ್ರಜಾಪ್ರಗತಿ ಕಚೇರಿ ಬಳಿ ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್,ಟಿ.ಎನ್.ಮಧುಕರ್,ರೇಣುಕಾ,ಗೋವಿಂದಪ್ಪ,ಜಯನುಡಿ ಜಯಣ್ಣ ಇತರರು ಉಪಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.
– ಕೆ.ಬಿ.ಚಂದ್ರಚೂಡ
