ತುಮಕೂರು: ಮತದಾರರ ಪಟ್ಟಿಯ ವಿಶೇಷ ಪರೀಕ್ಷಕರಣೆಯ ವೇಳೆ ತುಮಕೂರು ನಗರದ ಮತದಾರರು, ಅದರಲ್ಲಿಯೂ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತದಾರರು, ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಯ ನೂತನ ನೊಂದಣಿ ಫಾರಂ ತುಂಬುವ ಮೂಲಕ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವಾದ ಹಕ್ಕುಗಳಲ್ಲಿ ಒಂದಾಗಿರುವ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವಂತೆ ಮಾಜಿ ಶಾಸಕ ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಡಾ.ರಫೀಕ್ಅಹಮದ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಮತದಾರರ ಪಟ್ಟಿ ಪರೀಷ್ಕರಣೆ ಚುನಾವಣಾ ಆಯೋಗದ ಪ್ರತಿ ವರ್ಷದ ಪ್ರಕ್ರಿಯೆಯಾಗಿದ್ದರೂ, ಈ ಬಾರಿಚುನಾವಣಾ ಆಯೋಗ ವಿಶೇಷ ಪರೀಕ್ಷಕರಣೆಗೆ ಮುಂದಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಇರುವವರು ಸಹ,ನೊಂದಣಿ ಫಾರಂ ತುಂಬುವುದು ಕಡ್ಡಾಯವಾಗಿದೆ.ಅಲ್ಲದೆ 2002 ಮತದಾರರ ಪಟ್ಟಿ ಮತ್ತು 2025 ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು, ದೋಷವಿಲ್ಲದ ಮತದಾರರ ಪಟ್ಟಿಗೆ ಅವಕಾಶ ಇರುವ ಕಾರಣ, ಪ್ರತಿಯೊಬ್ಬ ಮತದಾರರು ತಮ್ಮ ಮನೆಯ ಬಳಿ ಚುನಾವಣಾ ಆಯೋಗ, ವಿಶೇಷ ಮತದಾರರ ಪಟ್ಟಿ ಪರೀಕ್ಷಕರಣೆಗೆ ಬಿ.ಎಲ್.ಓ(ಬೂತ್ ಲೆವಲ್ ಅಧಿಕಾರಿ)ಆಗಮಿಸುವ ವೇಳೆ ಮತದಾರರ ನೊಂದಣಿ ಅರ್ಜಿ ತುಂಬುವ ವೇಳೆ ಪ್ರತಿ ಪದವನ್ನು ಓದಿ, ಅರ್ಥೈಸಿಕೊಂಡು, ಇಲ್ಲವೇ ತಿಳಿದವರಿಂದ ಕೇಳಿ ತಿಳಿದು ಭರ್ತಿ ಮಾಡುವ ಮೂಲಕ, ಸಣ್ಣ ಪುಟ್ಟ ತಪ್ಪುಗಳಿಂದ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕೆಂದು ಡಾ.ರಫೀಕ್ಅಹಮದ್ ಕೋರಿದ್ದಾರೆ.
ಇದೇಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾ ಆಯೋಗ ನೇಮಕ ಮಾಡಿರುವ ಬಿಎಲ್ಓಗಳು ಮೂರು ಹಂತದಲ್ಲಿ ತಮ್ಮ ಮನೆಗಳ ಬಳಿ ಬರುವವರಿದ್ದು,ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಬೇಕಾಗಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವವರು, ತಾವು 2002ರಲ್ಲಿ ಯಾವ ಲೋಕಸಭಾಕ್ಷೇತ್ರ, ಯಾವ ವಿಧಾನಸಭಾಕ್ಷೇತ್ರದ, ಎಷ್ಟನೇ ಬೂತ್ನ ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು 2025ರ ಮತದಾರರ ಪಟ್ಟಿಯಲ್ಲಿ ಇರುವಂತೆ ಹೆಸರು ನೊಂದಾಯಿಸಿ, ವ್ಯತ್ಯಾಸವಿದ್ದಲ್ಲಿ, ಅದಕ್ಕೆ ತಕ್ಕ ದಾಖಲೆಗಳನ್ನು ನೀಡಿ,ಅರ್ಜಿಯನ್ನು ಭರ್ತಿ ಮಾಡಿ ನೀಡುವ ಮೂಲಕ,ಮತದಾನ ಹಕ್ಕು ಉಳಿಸಿಕೊಳ್ಳುವಂತೆ ಜಿಲ್ಲೆಯ ಮತದಾರರಲ್ಲಿ ಡಾ.ಎಸ್.ರಫೀಕ್ಅಹಮದ್ ಮನವಿ ಮಾಡಿದ್ದಾರೆ.
– ಕೆ.ಬಿ.ಚಂದ್ರಚೂಡ
