ತುಮಕೂರು: ನಗರದ ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್. ರಫೀಕ್ ಅಹಮದ್ ಅವರ ತಾಯಿ ಫಾತಿಮ ಬೇಗಂ ಶುಕ್ರವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮ ಬೇಗಂ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದರು. ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮದ್ ಸೇರಿದಂತೆ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಫಾತಿಮ ಬೇಗಂ ಅವರ ಪಾರ್ಥೀವ ಶರೀರವನ್ನು ತುಮಕೂರಿನ ಜಯನಗರ ಏಳನೇ ಕ್ರಾಸ್ನಲ್ಲಿರುವ ಅವರ ಮನೆಯಲ್ಲಿ ಇಡಲಾಗುವುದು. ಶನಿವಾರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಪುತ್ರ ಡಾ. ರಫೀಕ್ ಅಹಮದ್ ತಿಳಿಸಿದ್ದಾರೆ.ಮೃತರ ನಿಧನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರಾದ ಇಕ್ಬಾಲ್ ಅಹಮದ್,ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್,ಜಿ.ಬಿ.ಜ್ಯೋತಿಗಣೇಶ್,ಮಾಜಿಶಾಸಕ ಷಫಿಅಹಮದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರಗೌಡ, ಮುರಳೀಧರಹಾಲಪ್ಪ,ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು, ಎಸ್.ಪುಟ್ಟೀರಪ್ಪ, ರಾಯಸಂದ್ರರವಿಕುಮಾರ್ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
– ಕೆ.ಬಿ.ಚಂದ್ರಚೂಡ
