ತುಮಕೂರು: ತಾಲ್ಲೂಕಿನ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಲ್ಲಸಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ತಿಮ್ಮನಾಯಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪಶುಪಕ್ಷಿಗಳ ಸಂಕುಲಕ್ಕೆ ಆಹಾರ,ಸೂರಿನ ವ್ಯವಸ್ಥೆ ಹಾಗೂ ಸಕಲ ಜೀವರಾಶಿಗಳಿಗೆ ಪರಿಶುದ್ಧ ಪ್ರಾಣವಾಯುವನ್ನು ಒದಗಿಸುವ ಪರಮಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ವರ್ಗದವರು ಹಗಲಿರುಳು ಶ್ರಮಿಸುತ್ತಿದ್ದು,ಇವುಗಳ ಭಾಗವಾಗಿ ನಮ್ಮಲ್ಲಿ ಸಾಮಾಜಿಕ ಅರಣ್ಯೀಕರಣದ ವಿಶೇಷ ಕಾರ್ಯಕ್ರಮವನ್ನು ಸಂಘಟಿಸಲು ಜಾಗದ ವ್ಯವಸ್ಥೆ ಹಾಗೂ ನಾಟಿ ಮಾಡಿದ ಸಸಿಗಳ ಸಮಗ್ರ ನಿರ್ವಹಣೆಗೆ ಸೂಕ್ತ ಸಹಕಾರವನ್ನು ಬಯಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಹಾಗೂ ಕಾರ್ಯಬದ್ದತೆಯನ್ನು ಅರಿತಿದ್ದ ನಾವು ಸಂಪೂರ್ಣ ಸಹಕಾರ ನೀಡುವುದಾಗಿ ಒಪ್ಪಿಗೆ ಸೂಚಿಸಿ ಸಸಿಗಳನ್ನು ಪೋಷಿಸುತ್ತೇವೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಮಾತನಾಡಿ ಯೋಜನೆ ನಡೆದು ಬಂದ ದಾರಿ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆಗೆ ಹಾಗೂ ಕೃಷಿ ಉಳಿವಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಘಟಿಸುತ್ತಿರುವ ಕೃಷಿ ಕಾರ್ಯಕ್ರಮಗಳಾದ ರೈತಕ್ಷೇತ್ರ ಪಾಠಶಾಲೆ, ಪರಿಸರ ಜಾಗೃತಿ ಕಾರ್ಯಕ್ರಮ,ವಿಶೇಷ ಕೃಷಿ ಅಧ್ಯಯನಪ್ರವಾಸ, ಕೆರೆಪುನಶ್ಚೇತನ, ಕೆರೆಯಂಗಳದಲ್ಲಿ ಗಿಡನಾಟಿ ಹಾಗೂ ಸಾಮಾಜಿಕ ಅರಣ್ಯೀಕರಣದ ಡೈರಿ ಆವರಣದಲ್ಲಿ 350 ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ತಿಳಿಸಿದರು. ಹಣಕಾಸು ವ್ಯವಸ್ಥಾಪಕರಾದ ಶ್ರೀ ವೆಂಕಟೇಶ್ ರವರು ಸಾಮಾಜಿಕ ಅರಣ್ಯೀಕರಣದ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಘಟಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೋಕು ಯೋಜನಾಧಿಕಾರಿ ಸಂದೇಶ್.ಪಿ.ಬಿ, ವಿಶ್ವವಾಣಿ ಪತ್ರಿಕೆ ವರದಿಗಾರರಾದ ರಂಗನಾಥ್ ಮರಡಿ,ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕಾರಿಗಳಾದ ಎಂ.ರಾಜು. ವಿದ್ಯಾನಂದ್. ತಿಪ್ಪೇಸ್ವಾಮಿ. ಸುರೇಶ್, ಕೆಂಪೇಗೌಡ. ಕೃಷಿ ಅಧಿಕಾರಿ ರಾಘವೇಂದ್ರ ಎನ್, ಸೇವಾಪ್ರತಿನಿಧಿಗಳಾದ ಪುಷ್ಪಲತಾ, ಮಂಜುಳಾ, ಭಾಗ್ಯಮ್ಮ, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
