ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಂಗ ಸಂಸ್ಥೆಯಾದ ಶ್ರೀ ರೇಣುಕಾ ವಿದ್ಯಾಪೀಠದ ಶಾಲಾ ಹಾಗೂ ಕಾಲೇಜು ಸಮಿತಿಯ ನೂತನ ಅಧ್ಯಕ್ಷರು, ಗೌರವ ಕಾರ್ಯದರ್ಶಿಯವರನ್ನು ನಗರದ ವೀರಶೈವ ಸಹಕಾರ ಬ್ಯಾಂಕಿನಿಂದ ಸನ್ಮಾನಿಸಿ ಗೌರವಿಸಲಾಯಿತು.
ರೇಣುಕಾ ವಿದ್ಯಾಪೀಠ ಸಮಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಟಿ.ಆರ್.ಲೋಕೇಶ್,ಗೌರವ ಕಾರ್ಯದರ್ಶಿ ಟಿ.ಜೆ.ಗಿರೀಶ್ ಹಾಗೂ ತುಮಕೂರು ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಆಗಿರುವ ಈ.ಎಸ್.ಸಂತೋಷ್ಕುಮಾರ್ ಇವರನ್ನು ವೀರಶೈವ ಸಹಕಾರ ಬ್ಯಾಂಕಿನಿಂದ ಅಭಿನಂದಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನಯ್ಯ(ಹೆಬ್ಬಾಕ) ಹಾಗೂ ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳು, ಸಿಇಓ ಶ್ರೀಮತಿ ವೀಣಾ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಕೆ ಬಿ ಚಂದ್ರಚೂಡ್
