ಡಿ.ಎಸ್. ಕರ್ಕಿ
~~~~~~~~~~
1.ಡಿ.ಎಸ್. ಕರ್ಕಿಯವರ ಪೂರ್ಣ ಹೆಸರು
1)ದುರ್ಗಪ್ಪ ಶಿವಪ್ಪ ಕರ್ಕಿ. 2) ದೇವಪ್ಪ ಸಿದ್ರಾಮಪ್ಪ ಕರ್ಕಿ. 3)ದುಂಡಪ್ಪ ಸಿದ್ಧಪ್ಪ ಕರ್ಕಿ
2.ಡಿ.ಎಸ್. ಕರ್ಕಿಯವರು ಜನಿಸಿದ ಹಿರೇಕೊಪ್ಪ ಈ ಜಿಲ್ಲೆಯಲ್ಲಿದೆ.
1)ಬೆಳಗಾವಿ. 2)ಬಾಗಲಕೋಟೆ. 3)ಬಳ್ಳಾರಿ
3.ಡಿ.ಎಸ್. ಕರ್ಕಿಯವರ ತಂದೆ ತಾಯಿಯ ಹೆಸರು
1)ದುರಗಪ್ಪ, ದೇವಮ್ಮ. 2)ಸಿದ್ಧಪ್ಪ, ದುಂಡವ್ವ 3)ದೇವಪ್ಪ, ರಾಜವ್ವ
4.ಡಿ.ಎಸ್. ಕರ್ಕಿಯವರ ಜನಿಸಿದ ದಿನಾಂಕ
1)15 ನವೆಂಬರ್ 1907 2)15 ಡಿಸೆಂಬರ್ 1907 3)15 ಅಕ್ಟೋಬರ್ 1907
5.ಡಿ.ಎಸ್. ಕರ್ಕಿಯವವರ ‘ಕನ್ನಡ ಛಂದಸ್ಸಿನ ವಿಕಾಸ’ ಪಿ.ಹೆಚ್. ಡಿ. ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದವರು
1)ಕೆ.ಜಿ.ಕುಂದಣಗಾರ. 2)ಹೆಚ್. ಎಲ್.ನಾಗೇಗೌಡ. 3)ಸಿ.ಪಿ.ಕೃಷ್ಣಮೂರ್ತಿ
6.ಡಿ.ಎಸ್. ಕರ್ಕಿಯವರು 1949 ರಲ್ಲಿ ಪ್ರಕಟಿಸಿದ ಕವನ ಸಂಕಲನ
1) ಭಾವತೀರ್ಥ. 2)ನಮನ. 3)ನಕ್ಷತ್ರ ಗಾನ
7.ಡಿ.ಎಸ್. ಕರ್ಕಿ, ಎಸ್. ಡಿ.ಇಂಚಲ ಮತ್ತು ಬ.ಗಂ.ತುರಮರಿ ಇವರನ್ನು ‘ಕನ್ನಡದ ಕಿಟ್’ ಎಂದು ಕರೆದವರು
1) ಎಂ.ಎಂ.ಕಲಬುರ್ಗಿ. 2)ಪ್ರೊ.ಎಂ.ಎಸ್. ಇಂಚಲ, 3)ಜಿಡ್ಡು ಕೃಷ್ಣಮೂರ್ತಿ
8.ಡಿ.ಎಸ್. ಕರ್ಕಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ
1) ಬಣ್ಣದ ಚೆಂಡು. 2)ಕರ್ಕಿ ಕಣಗಲ. 3)ಗೀತ ಗೌರವ
9.ಇವುಗಳಲ್ಲಿ ಡಿ.ಎಸ್. ಕರ್ಕಿಯವರ ಬಹು ಜನಪ್ರಿಯ ಕನ್ನಡ ಗೀತೆ
1)ಹಚ್ಚೇವು ಕನ್ನಡದ ದೀಪ 2)ಹೊತ್ತಿತೋ ಹೊತ್ತಿತು ಕನ್ನಡದ ದೀಪ. 3)ಕನ್ನಡ ಎನೆ ಕುಣಿದಾಡುವುದೆನ್ನೆದೆ
10.ಡಿ.ಎಸ್. ಕರ್ಕಿಯವರ ಶಿಶುಗೀತೆಗಳ ಸಂಕಲನ
1)ಬಣ್ಣದ ಚೆಂಡು. 2)ನಾಲ್ದೆಸೆಯ ನೋಟ. 3)ಗಿಲ್ ಗಿಲ್ ಗಿಲಕಿ
11.ಡಿ.ಎಸ್. ಕರ್ಕಿಯವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರ ತಾಯಿಯ ಊರು
1) ಬಸವನ ಬಾಗೇವಾಡಿ. 2)ಬೆಲ್ಲದ ಬಾಗೇವಾಡಿ. 3)ಗಿಲಗಂಜಿ ಅರಟಾಳ
12.ಡಿ.ಎಸ್. ಕರ್ಕಿಯವರು ನಿರ್ವಹಿಸಿದ ವೃತ್ತಿ
1)ಅಧ್ಯಾಪಕರು. 2)ವೈದ್ಯರು. 3)ಇಂಜಿನಿಯರ್
13.ಡಿ.ಎಸ್. ಕರ್ಕಿಯವರಿಗೆ ಷಷ್ಟ್ಯಬ್ದಿ ಸಮಾರಂಭ ಏರ್ಪಡಿಸಿ ಗೌರವ ಸಲ್ಲಿಸಿವರು
1)ಹುಬ್ಬಳ್ಳಿ ನಾಗರೀಕರು. 2)ಬೆಳಗಾವಿ ಅಭಿಮಾನಿಗಳು. 3)ಕುಟುಂಬದ ಸದಸ್ಯರು
14.ಡಿ.ಎಸ್. ಕರ್ಕಿಯವರ ‘ತನನ ತೋಂ’ ಕೃತಿಯು ಈ ಪ್ರಕಾರದಲ್ಲಿದೆ.
1)ಪ್ರಬಂಧಗಳ ಸಂಕಲನ. 2)ಮಕ್ಕಳ ಕವನ ಸಂಕಲನ. 3)ಸಂಶೋಧನಾ ಗ್ರಂಥ
15.ಡಿ.ಎಸ್. ಕರ್ಕಿಯವರು ಇಹಲೋಕದ ಪಯಣ ಮುಗಿದಸಿದ ದಿನಾಂಕ
1)16 ಜನವರಿ 2000 2) 16 ಜನವರಿ 1977 3) 16 ಜನವರಿ 1984
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ದುಂಡಪ್ಪ ಸಿದ್ಧಪ್ಪ ಕರ್ಕಿ 2)ಬೆಳಗಾವಿ 3)ಸಿದ್ಧಪ್ಪ, ದುಂಡವ್ವ 4) 15 ನವೆಂಬರ್ 1907 5)ಕೆ.ಜಿ.ಕುಂದಣಗಾರ 6)ನಕ್ಷತ್ರ ಗಾನ 7)ಪ್ರೊ.ಎಂ.ಎಸ್. ಇಂಚಲ 8)ಗೀತ ಗೌರವ 9)ಹಚ್ಚೇವು ಕನ್ನಡದ ದೀಪ 10)ಬಣ್ಣದ ಚೆಂಡು 11)ಬೆಲ್ಲದ ಬಾಗೇವಾಡಿ 12)ಅಧ್ಯಾಪಕರು 13)ಹುಬ್ಬಳ್ಳಿ ನಾಗರೀಕರು 14)ಮಕ್ಕಳ ಕವನ ಸಂಕಲನ 15) 16 ಜನವರಿ 1984
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ (ಜಯಂತ್ ಕಾಯ್ಕಿಣಿ)

[…] […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]