ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಕಳೆದ ಕೆಲ ದಿನಗಳ ಹಿಂದೆ.ಮಂಡ್ಯ ಜಿಲ್ಲಾ ಕಛೇರಿ ಎದುರು ತಾಲೂಕು ಮತ್ತು ಜಿಲ್ಲಾಧಿಕಾರಿಗಳು ನನ್ನ ಜಮೀನು ಸಮಸ್ಯೆಗಳ ಬಗೆಹರಿಸುತ್ತಿಲ ಎಂದು ಆರೋಪಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿಗಿಡಾಗಿದ್ದ ರೈತ ಮಂಜೇಗೌಡರ ನಿವಾಸಕ್ಕೆ ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್,ಮಾಜಿ ಶಾಸಕ ಬಿ.ಪ್ರಕಾಶ್ ಜೊತೆಗೂಡಿ ಭೇಟಿ ನೀಡಿದರು.ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮೃತರ ಕುಟುಂಬಸ್ಥರಿಗೆ ಸಾಂತ್ವನದ ಜೊತೆಗೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಬಿ.ಪ್ರಕಾಶ್ ರೈತ ಈ ದೇಶದ ಬೆನ್ನೆಲುಬು ಯಾವುದೇ ಸಂದರ್ಭದಲ್ಲೂ ಕೂಡ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸಬಾರದು, ಏಕೆಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸದಾ ರೈತರ ಅಭಿವೃದ್ಧಿಗೆ ಚಿಂತಿಸಿ ಸ್ಪಂದಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ, ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನಸೋತು ಆತ್ಮಹತ್ಯೆ ಅಂತಹ ಘೋರ ತಪ್ಪು ನಿರ್ಧಾರಗಳನ್ನ ತೆಗೆದುಕೊಂಡು ನಿಮ್ಮ ನಂಬಿದ ಕುಟುಂಬದವರನ್ನು ಬೀದಿ ಪಾಲು ಮಾಡದಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಗ್ರಾ. ಪಂ ಸದಸ್ಯ ಅನು ಕುಮಾರ್,ಗ್ರಾಮದ ಹಿರಿಯ ಮುಖಂಡ ಚಿಕ್ಕೇಗೌಡ,ರಂಗಸ್ವಾಮಿ, ದೇವರಾಜು, ಲಕ್ಕೆಗೌಡ,ರಘು, ಚಲುವರಾಜು, ಕಾಳೇಗೌಡ ,ಕುಬೇರ, ಶ್ರೀನಿವಾಸ್, ಮೊಗ್ಗಣ್ಣೆಗೌಡ, ಜಗನ್ನಾಥ್ , ದಿನೇಶ್, ಮಂಜುನಾಥ್, ಯುವ ಮುಖಂಡ ಚೇತನ್,ಉಪನ್ಯಾಸಕ ವೆಂಕಟೇಶ್, ಮಂಜು, ದಿಲೀಪ್,ಹೇಮಂತ್, ಅಭಿ, ಸಂತೋಷ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್,ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
