“ಗೆಳೆಯ ಈ ವಾಖ್ಯಾನದ ಕಡೆ ಗಮನ ಕೊಡುವಂತನಾಗು. ಒಮ್ಮೆಯಾದರು ಈ ಹೇಳಿಕೆಯ ಹಿಂದೆ ನೋಡು. ನಿನಗೆ ಅರ್ಥವಾಗಲಿಲ್ಲವೇ, ಅರ್ಥವನ್ನು ಮಾಡಿಸುವೆನು, ಕೇಳುವಂತನಾಗು.
ಬೆಂಕಿ ನಿನ್ನನ್ನು ಸುಡುತ್ತದೆ. ಅಕಸ್ಮಾತ್ ನೀನು ಬದುಕಿದರೆ ನೀನು ಅನುಭೋಗಿಸುವ ನೋವು ಬೆಂಕಿಯಿಂದ ಅಲ್ಲ. ಬೆಂಕಿಯಿಂದ ಆದ ಗಾಯದಿಂದ. Amines ಮತ್ತು Kinins ರಸಾಯನಿಕ ಕಣಗಳ ಹೊರಸೂಸುವುದರಿಂದ. ಇವು ನಿನ್ನ ನರಗಳನ್ನು ಮರ್ಧಿಸಿ ನೋವ್ವನ್ನು ನಿನ್ನ ಮೆದುಳಿಗೆ ರವಾನಿಸುತ್ತದೆ. ಪಾಪ, ತೀವ್ರವಾದ ಮಂದ ಬುದ್ದಿ ಹೊಂದಿರುವನು ಬುದ್ಧನಲ್ಲವೆ. ಬೆಂಕಿಯನ್ನು ಚಿಟ್ಟೆ ಎಂದು ಭಾವಿಸಿ ಹಿಡಿಯಲು ಹೋಗುವನು. ಸುಟ್ಟಾಗ ಅಳುವನು. ಅವನಿಗೆ ತಿಳಿಯದು, ಅವನ ಅಳು ಬೆಂಕಿಯಿಂದ ಎಂದು. ಹೆತ್ತ ತಾಯಿ ಜಾಗೃತೆ ವಹಿಸುವಳು. ವಶೀಕರಣ ಮಾಡುವದು ಇದೇ ಕೆಲಸ. ಪರವಶತ್ವ ಎಲ್ಲವನ್ನು ನುಂಗಿಸಿ ದಾಸನಾಗಿಸುತ್ತದೆ. ಹೀಗೆ ಅಲ್ಲವೇ ನೀನು ಮೋಸ ಹೋಗುವುದು. ನೀನು ಎಂದಾದರೂ ನಿನಗೆ ನೀನು ದಾಸನಾಗುತ್ತಿಯೇ? ಯೋಚನೆ ಮಾಡಿ ಹೇಳು.
ಸರಿ, ಬೆಂಕಿಯಿಂದ ನಿನಗೆ ನೋವು. ಬೆಂಕಿಯಿಂದ ಅಲ್ಲದೆ ನಿನಗೆ ನೋವ್ವಾಗುವದು ತಿಳಿದಿದಿಯೇ ಗೆಳೆಯ. ನಾ ಹೇಳುವೆ ಕೇಳು. ಅದು ನಿನ್ನ ಭಾವನೆ. ಯಾರೋ ಏನೋ ಹೇಳಿದರು, ಮೊದಲಿಸಿದರು, ಚುಚ್ಚಿ ಮಾತನಾಡಿದರು ಇತ್ಯಾದಿ. ಧ್ಯಾನಿಸು, ಧ್ಯಾನಿಸಿ ತಪ್ಪು ಸರಿ ಲೆಕ್ಕ ಹಾಕು. ಕೆಟ್ಟದನ್ನ ತೆಗೆ, ಒಳ್ಳೆಯ ಸಾರವನ್ನು ಸ್ವೀಕರಿಸು. ಬುದ್ಧನಾಗು, ಹೀಗೆಯೇ ಸಿದ್ದಾರ್ಥ ಗೌತಮ ಬುದ್ಧನಾದ. ಇದೇ ಪರಿವರ್ತನೆಯ ಸಂಕೇತ.
ಭಾವನೆಗಳು double edge knife ಇದ್ದ ಹಾಗೆ. ಹಣ್ಣನ್ನು ತುಂಡರಿಸಿ ಸ್ನೇಹಿತನಿಗೆ ನೀಡಬಹುದು ಅಥವ ಅವನ ಸಾವಿಗೆ ಕಾರಣವಾಗಬಹುದು. ಮನಸ್ಸಿನ ಸಂವೇದನೆಯ ನೋವು ಬೆಂಕಿಗಿಂತಾ ನೂರು ಪಟ್ಟು ಹೆಚ್ಚು. ಹೀಗಿರುವುದರಿಂದಲೇ ನಿನ್ನ ಅಕ್ಕ ಪಕ್ಕದ ಜನರು ಆತ್ಮಹತ್ಯೆ ಮಾಡಿಕೊಳ್ಳುವುದು. ಮನಸ್ಸಿನ ವೇದನೆ ಶಾರೀರಿಕ ವೇದನೆಗಿಂತ ನೂರು ಪಟ್ಟು ಹೆಚ್ಚು. ಆತ್ಮಹತ್ಯೆಯಿಂದ ಏನು ಸುಖ? ಮನೆಯವರ ಮತ್ತು ನಂಬಿದವರ ಕತೆ ಏನು? ರಾಷ್ಟ್ರಕ್ಕೆ ಏನು ಲಾಭ? ಗೆಳೆಯ ಹೇಳುವೆಯಾ.
ನಿನ್ನ ಅತಿಯಾದ ನಂಬಿಕೆಯಿಂದ ನೀನು ಭಾವಪರವಶೆ ಆಗುವೆ. ಇದರಿಂದ ಹಾನಿಯೇ ಹೆಚ್ಚು. ಇದೇ ಅಲ್ಲವೇ ಇಂದಿನ ಧರ್ಮ ಅಫಾತ ಅನ್ನುವುದು. ನೀನು ನಿನ್ನನ್ನು ನಂಬುತ್ತೀಯಾ? ಈ ಕೆಲಸವನ್ನು ನೀನು ಮಾಡು. ಆಗ ನಿನ್ನನ್ನು ಮಾನವ ಧರ್ಮ ಕಾಪಾಡುತ್ತದೆ.
ಇಂದಿನ ಸ್ಪರ್ಧಾತ್ಮಕ ಮನೋಭಾವದಲ್ಲಿ ಎಡಬಿಡದೆ ಕಾಡುವ ಗೀಳು ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ನಾನು ಹಣ ಸಂಪಾದಿಸಬೇಕು, ದೊಡ್ಡಹುದ್ದೆ ಪಡೆಯಬೇಕು, ಎಲ್ಲರೂ ಗುರಿತಿಸಬೇಕು ಇತ್ಯಾದಿ. ಗೆಳೆಯ, ಈ ಕಾರಣಗಳಿಂದಲೇ ಮಾನಸಿಕ ನೋವು ಅಪಾರ. ಅನಿಸಿಕೆ ಸರಿ, ಆದರೇ ತ್ವರಿತವಾಗಿ ಅಲ್ಲ.
ಮುಗ್ದತೆ, ಗೀಳಿಗೆ ವಿರುದ್ಧ. ನೀ ಮುಗ್ದನಾಗು, ಪೂರ್ಣತೆಯನ್ನು ಹೊಂದು, ಹೊಂದಿದ ಮೂಲಕ ನೀ ಗಳಿಸಬೇಕಿದ್ದು ತನ್ನಷ್ಟಕ್ಕೆ ತಾನೆ ನಿನ್ನ ಪಾದಾರ್ಪಣೆ ಮಾಡುತ್ತದೆ. ಹಣ ಬುದ್ದಿವಂತರ ಗೀಳಾದರೆ ಬೇರೆಯವರ ಗೀಳು ಕೇಳು. ರೈತನಿಗೆ ಮಳೆ, ಬೆಳೆ, ಬದುಕು ಗೀಳಾದರೆ ಉಳ್ಳವನಿಗೆ ಶುಚಿತ್ವ, ಅಣು ಜೀವಿ, ಬಾಣಿಸಿಗನಿಂದ ಗೀಳು. ಮಾನಸಿಕ ಅಸ್ವಸ್ಥತೆ ಬೇರೆ. ನನಗೆ ತಿಳಿದಿದೆ ನಿನಗೆ ಇಲ್ಲ ಎಂದು. ಆದರೆ ನಿನ್ನ ಕೆಟ್ಟ ಅಭ್ಯಾಸಗಳು ನಿನಗೆ ಗೀಳಾಗಿ ಕಾಣಬಹುದು. ರೈತನಿಗೆ ಹೊಟ್ಟೆ ತುಂಬಿಸಿಕೊಳ್ಳುವ ಗೀಳು, ಕೆಲವರಿಗೆ ಹೂಟ್ಟೆ ತುಂಬಿದರೆ ಎಲ್ಲಿ ಕೆಡುತ್ತದೆನ್ನುವ ಗೀಳು.
ಗೆಳೆಯ ಪರಿಪೂರ್ಣತೆಯನ್ನು ಕಾಣು, ಕಂಡು ಸರಿ ತಪ್ಪು ತಿಳಿ. ತುಂಬಿಸಿ ಕೂಳ್ಳುವುದು ನಿನ್ನ ಹೊಟ್ಟೆಯನಲ್ಲ, ಮನಸ್ಸನ್ನು ತುಂಬಿಸಿಕೊ. ಹಣ, ವೈಢೂರ್ಯ, ಅಂತಸ್ತಿನಿಂದ ಅಲ್ಲ. ಪ್ರೇಮ, ಔದಾರ್ಯ ಮತ್ತು ಕರುಣೆಯಿಂದ ತುಂಬಿಸಿಕೂ.
ಸ್ವಾಮಿ ನಿಷ್ಠಾವಂತ ಆಂಜನೇಯ, ರಾಮನನ್ನು ತನ್ನ ಹೃದಯದಲ್ಲಿ ತುಂಬಿಕೊಂಡಿದ್ದ. ಎದೆ ಸೀಳಿದರೆ ರಾಮನೇ ಕಾಣಿಸುತ್ತಿದ್ದ. ನೀನು ಗಮನಿಸು, ಹನುಮನ ದೇಗುಲಗಳೇ ಅಧಿಕ. ರಾಮನ ಧೇವಸ್ಥಾನಗಳು ಕಡಿಮೆ. ಗೆಳೆಯ ಕಾರಣ ಏನು? ಸ್ವಾಮಿಗಿಂತ ನಿಷ್ಠೆ ದೊಡ್ಡದು. ನಿನ್ನ ಮನೆಯಲ್ಲಿ ನಾಯಿ ಸಾಕಿದ್ದಿಯಲ್ಲವೇ? ಅನೇಕರ ಮನೆಯಲ್ಲಿ ಬಂಧುಗಳು ತೀರಿಕೊಂಡಾಗ ಅಳುವುದಿಲ್ಲ ಅದರೆ ಸಾಕಿದ ನಾಯಿ ಸತ್ತಾಗ ಅಳುತ್ತಾರೆ. ಸ್ವಾಮಿ ನಿಷ್ಠೆ ಸ್ವಾಮಿ, ಸ್ವಾಮಿ ನಿಷ್ಠೆ. ನಾಯಿ ತನ್ನ ಸ್ವಾಮಿಯನ್ನು ಬರುವುದೇ ಕಾಯುತ್ತದೆ, ಮನೆಯನ್ನು ಕಾಯುತ್ತದೆ, ಸ್ವಾಮಿ ತಂಟೆಗೆ ಬಂದರೆ ಬೊಗಳುತ್ತದೆ. ಈ ಕಾರಣದಿಂದ ಏನೋ ನಾಯಿಯನ್ನು ನಾರಾಯಣ ಎಂದು ಕರೆಯುತ್ತಾರೆ. ಈಗ ಹೇಳು ನಿನ್ನ ಹೃದಯದಲ್ಲಿ ಯಾರನ್ನು ತುಂಬಿಸಿಕೊಳ್ಳುತ್ತಿ ಎಂದು.
ನಿನಗೆ ಅಹಂಕಾರ ಮತ್ತು ನಿರಹಂಕಾರ ವೆತ್ಯಾಸ ತಿಳಿದಿದೆ ಎಂದುಕೊಳ್ಳುತ್ತೇನೆ. ಅಹಂಕಾರಿಗೆ ಉಪಕಾರ, ಸೇವೆ ಮತ್ತು ನೆರವುಗಳ ಅರ್ಥ ತಿಳಿದಿರುವುದಿಲ್ಲ. ಅದೇ ನಿರಹಂಕಾರಿಯ ಮನಸ್ಸು ಮಗುವಿನಂತೆ ಇರುವುದು. ಮಗು ಮತ್ತೆ ಬಾಲಿಶತನ ನಡುವೆ ಆಜಗಜಾಂತರ ವೆತ್ಯಾಸವಿದೆ. ಬಾಲಿಶತನ ಅಹಂಕಾರಿಗೆ. ಬಾಲತನ ನಿರಹಂಕಾರಿಗೆ. ತುಂಬಿರುವ ಹೃದಯ ನಿರಹಂಕಾರಿಗೆ. ಹೃದಯ ಹೀನತೆ ಅಹಂಕಾರಿಗೆ. ನಿಜವಾದ ಸಾಧಕರಿಗೆ ಶಾಲು ಹೊದಿಸಿ ಸನ್ಮಾನ ಮಾಡುತ್ತಾರೆ. ಗೆಳೆಯ ತಿಳಿದಿದಿಯೇ ಕಾರಣ? ಆ ಸಾಧಕನ ಹೃದಯ ಮಗುವಿನಂತೆ ಇರುವುದರಿಂದ. ನೀನು ನಿನ್ನ ಮಗುವಿಗೆ ಶಾಲು ಹೊದಿಸುತ್ತೆಯಲ್ಲವೇ, ಹಾಗೆ.
ಗೆಳೆಯ, ಓದಿ ಹೇಳುವುದು ಮತ್ತು ತಿಳಿದಿರುವುದನ್ನು ಹೇಳುವುದು ಬೇರೆ. ಇದರಿಂದಲೇ ಶಿಕ್ಷಕ ಮತ್ತು ಗುರುವಿನ ವೆತ್ಯಾಸ ಅನಂತ. ಗುರುವಿನ ಪಾಂಡಿತ್ಯ ಹೃದಯದಲ್ಲಿ ಅಡಿಗಿರುತ್ತದೆ. ಶಿಕ್ಷಕನ ಜ್ಞಾನ ತಲೆಯೊಳಗೆ ಇರುತ್ತದೆ. ಪೂರ್ಣನಾಗಬೇಕಿದ್ದರೆ ಜ್ಞಾನ ಪಾಂಡಿತ್ಯವಾಗ ಬೇಕು. ಇಂದು ಶಾಲು ಹೊದಿಸುವುದು fashion ಆಗಿಬಿಟ್ಟಿದೆ. ಎಂತಾ ವಿಪರ್ಯಾಸ ನೋಡು.
ಗೆಳೆಯ ಹೃದಯ ತುಂಬಿಸಿಕೂ. ತುಂಬಿದ ಹೃದಯಕ್ಕೆ ತೆಗೆದುಕೊಳ್ಳುವುದು ಇರುವುದಿಲ್ಲ, ಕೂಡುವುದೊಂದೆ ಇರುತ್ತದೆ. ಇದನ್ನು ಮಾಡುತ್ತಿರು, ಒಂದಾನೊಂದು ದಿನ ನಿರ್ವಾಣವನ್ನು ಹೂಂದುತ್ತಿಯಾ. ಮತ್ತೆ ಮತ್ತೆ ಒಳ್ಳೆಯದನ್ನೇ ಮಾಡುತ್ತಿರು, ನೀನು ಸ್ವಾತಂತ್ರವನ್ನು ಹೊಂದುತ್ತಿಯಾ. ಮುಂದುವರಿದು ಮಾಡುತ್ತಿರು, raga ಹಾಗು dvesha ಇಲ್ಲದಂತಾಗುತ್ತದೆ. ಮತ್ತೆ ಮತ್ತೆ ಮುಂದುವರಿಸು, ಜೀವನಮುಕ್ತಿಯನ್ನು ಹೊಂದುತ್ತಿಯಾ…..”
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: ಮುಗ್ದನಾಗು, ಪೂರ್ಣತೆಯನ್ನು ಹೊಂದು…! […]