ಕೆ.ಆರ್.ಪೇಟೆ,ಜ.20 : ತಾಲ್ಲೂಕು ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅರಳಕುಪ್ಪೆ ಎ.ಸಿ.ಮೋಹನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಈ ಹಿಂದಿನ ಅಧ್ಯಕ್ಷರಾಗಿದ್ದ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ಬ್ಯಾಂಕಿನ ಸಭಾಂಗಣದಲ್ಲಿ ನಿಗಧಿಯಾಗಿದ್ದ ಚುನಾವಣೆಯಲ್ಲಿ ಇಂದು ಚುನಾವಣೆ ನಿಗದಿಯಾಗಿತ್ರು. ಅಧ್ಯಕ್ಷ ಸ್ಥಾನ ಬಯಸಿ ಎ.ಸಿ.ಮೋಹನ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಎ.ಸಿ.ಮೋಹನ್ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ ಉಪಾಧ್ಯಕ್ಷ ಮಾರ್ಗೋನಹಳ್ಳಿ ರಮೇಶ್, ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ನಿರ್ದೇಶಕರಾದ ಅಣ್ಣೇಚಾಕನಹಳ್ಳಿ ನಾಗರಾಜೇಗೌಡ, ಅಕ್ಕಿಹೆಬ್ಬಾಳು ರಾಜಾನಾಯಕ್, ಬಣ್ಣೇನಹಳ್ಳಿ ಧನಂಜಯ, ಶೀಳನೆರೆ ರಾಮೇಗೌಡ, ಭಾರತೀಪುರ ಸುರೇಶ್, ಮಾಳಗೂರು ಜಗದೀಶ್, ಕೆ.ಟಿ.ಚಕ್ರಪಾಣಿ, ಅರೇಬೊಪ್ಪನಹಳ್ಳಿ ಸುನಿಲ್, ,ಲಕ್ಷ್ಮೀಫುರ ಚಂದ್ರೇಗೌಡ,ಬಂಡಿಹೊಳೆ ನಾಗೇಶ್, ಮಂಜುಳಾ ಕೃಷ್ಣೇಗೌಡ,ಕವಿತ ಚಂದ್ರೇಗೌಡ, ಮುಖಂಡರಾದ ಎ.ಸಿ.ಸೋಮೇಗೌಡ, ರಾಜೇಶ್, ಸಿ.ಜೆ.ಮಂಜೇಗೌಡ, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಎ.ಸಿ.ಮೋಹನ್ ಅವರನ್ನು ಅಭಿನಂದಿಸಿ ಮಾತನಾಡಿದ ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಎಲ್ಲಾ ನಿರ್ದೇಶಕರು ಬ್ಯಾಂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ನೂತನ ಅಧ್ಯಕ್ಷರಾದ ಎ.ಸಿ.ಮೋಹನ್ ಅವರು ಯುವಕರಿದ್ದು ಬ್ಯಾಂಕಿನ ಅಭಿವೃದ್ದಿಗೆ ಸರ್ಕಾರದಿಂದ ಸೂಕ್ತ ಅನುಧಾನ ತಂದು ಅಭಿವೃದ್ಧಿಗೆ ಸಹಕಾರ ನೀಡಬೇಕು. ಈ ಮೂಲಕ ರೈತರಿಗೆ ಹೆಚ್ಚಿನ ಸಾಲ ನೀಡಲು ಕ್ರಮ ವಹಿಸಬೇಕು ಎಲ್ಲರೂ ಅವರಿಗೆ ಸಹಕಾರ ನೀಡುತ್ತೇವೆ ಎಂದು ಸಲಹೆ ನೀಡಿದರು.
ನೂತನ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಅರಳಕುಪ್ಪೆ ಎ.ಸಿ. ಮೋಹನ್ ಮಾತನಾಡಿ ನಾನು ಮೊದಲ ಬಾರಿಗೆ ಬ್ಯಾಂಕ್ ನಿರ್ದೇಶಕರಾಗಿ ಎಲ್ಲರ ಸಹಕಾರದಿಂದ ಅಧ್ಯಕ್ಷರನಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಎಲ್ಲಾ ನಿರ್ದೇಶಕರು ಹಾಗೂ ಬ್ಯಾಂಕಿನ ನೌಕರರ ಸಹಕಾರದೊಂದಿಗೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಚಿತ್ರಶೀರ್ಷಿಕೆ:20.ಕೆ.ಆರ್.ಪಿ-02: ಕೆ.ಆರ್.ಪೇಟೆ: ತಾಲ್ಲೂಕು ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅರಳಕುಪ್ಪೆ ಎ.ಸಿ.ಮೋಹನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಅಭಿನಂದಿಸಿದರು.
ವರದಿ : ಶ್ರೀನಿವಾಸ್ ಆರ್
==================================
