ಹಾಸನ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏಪ್ರಿಲ್ 15, 2026ರಂದು (ಬುಧವಾರ) ಆಯೋಜಿಸಲಾಗಿದೆ ಎಂದು ClearMedi Radiant Hospital ಪ್ರತಿನಿಧಿ ಸುನಿಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ClearMedi Healthcare ಹಾಗೂ Hassan Press Club ಸಂಘದ ಸಹಯೋಗದಲ್ಲಿ ಈ ಶಿಬಿರ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ ಎಂದರು.
“ಎಲ್ಲರಿಗೂ, ಎಲ್ಲೆಡೆ ಸಮಾನವಾಗಿ ಆರೋಗ್ಯ ಸೇವೆ ನೀಡುವುದು ನಮ್ಮ ಉದ್ದೇಶ. ಈ ಹಿನ್ನೆಲೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸುತ್ತಿದ್ದೇವೆ,” ಎಂದು ಅವರು ಹೇಳಿದರು.
ಶಿಬಿರದಲ್ಲಿ ಲಭ್ಯವಿರುವ ಪರೀಕ್ಷೆಗಳು:
- ರಕ್ತದಲ್ಲಿನ ಸಕ್ಕರೆ ಪ್ರಮಾಣ (GRBS)
- ರಕ್ತದ ಒತ್ತಡ ಪರೀಕ್ಷೆ (BP)
- ತೂಕ ಮತ್ತು ದೇಹದ ತಾಪಮಾನ ಪರಿಶೀಲನೆ
- ಶ್ವಾಸಕೋಶ ಕಾರ್ಯಕ್ಷಮತೆ ಪರೀಕ್ಷೆ (PFT)
- ಎಲುಬಿನ ದಟ್ಟತೆ ಪರೀಕ್ಷೆ (BMD)
ಇದರೊಂದಿಗೆ ವೈದ್ಯರಿಂದ ಉಚಿತ ಸಲಹೆಯೂ ಲಭ್ಯವಿರುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯುವಂತೆ ಸುನಿಲ್ ಮನವಿ ಮಾಡಿದ್ದಾರೆ.
