ಕೊರಟಗೆರೆ:- ಕೊರಟಗೆರೆ ತಾಲ್ಲೂಕಿಗೆ ನೂತನ ತುರ್ತುವಾಹನವನ್ನು ಸಾರ್ವಜನಿಕ ಸೇವೆಗೆ ಉಚಿತವಾಗಿ ಎಪ್ರಿಲ್ 23ರ ಗುರುವಾರದಂದು ಅರ್ಪಿಸಲಾಗುವುದು ಎಂದು ಪ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಅದ್ಯಕ್ಷ ರವಿಕುಮಾರ್ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ತಾಲ್ಲೂಕಿನ ಸೇವಾ ಸಮಿತಿ ಮತ್ತು ಜಗ್ಗೇಶ್ ಅಭಿಮಾನಿಗಳ ಸಂಘ ಇವರ ಸಹಯೋಗದಲ್ಲಿ ಏಪ್ರಿಲ್ 23 ರ ಗುರುವಾರದಂದು ಪಟ್ಟಣದ ಪುರಸಭಾ ಕಾರ್ಯಾಲಯ ಮುಂಭಾಗ ಸಂಜೆ 5 ಗಂಟೆಗೆ ಸಾರ್ವಜನಿಕ ಸೇವೆಗೆ ಉಚಿತ ನೂತನ ತುರ್ತುವಾಹನವನ್ನು ನೀಡಲಾಗುವುದು, ಪ್ರಸ್ತುತ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ತುರ್ತುವಾಹನ ಹಳೆಯದಾಗುತ್ತಿದ್ದು ಅದಕ್ಕಾಗಿ ನೂತನ ವಾಹನವನ್ನು ಸೇವೆಗೆ ಸಲ್ಲಿಸಲಾಗುತ್ತಿದೆ, ಕಾರ್ಯಕ್ರಮದಲ್ಲಿ ಗುರುವಂದನೆ, ಪ್ರತಿಭಾಪುರಸ್ಕಾರ, ಸಹ ಹಮ್ಮಿಕೊಳ್ಳಲಾಗಿದ್ದು ಅಂದು ಚಲನಚಿತ್ರ ಹಾಸ್ಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮವು ನಡೆಯಲಿದೆ ನಮ್ಮ ಸಂಘಗಳು 20 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೊರಿದರು.
ಜಗ್ಗೇಶ್ ಅಭಿಮಾನಿಗಳ ಸಂಘದ ಮಲ್ಲಣ ಮಾತನಾಡಿ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ವಹಿಸುವರು, ಗೃಹ ಸಚಿವರಾದ ಡಾ.ಜಿ,ಪರಮೇಶ್ವರ, ಕೇಂದ್ರ ರೈಲ್ವೆ ಸಚಿವರಾದ ಸೋಮಣ್ಣ, ಮಾಜಿ ಸಚಿವರು ಮತ್ತು ಶಾಸಕರಾದ ಕೆ.ಎನ್.ರಾಜಣ್ಣ ಮತ್ತು ರಾಜ್ಯಸಭಾ ಸದಸ್ಯರು ಹಾಗೂ ಚಲನಚಿತ್ರ ನಟರಾದ ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರೆಂಡ್ಸ್ ಗ್ರೂಪ್ನ ಪ್ರದೀಪ್ಕುಮಾರ್, ವಿಎಸ್ಎಸ್ಎನ್ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಕೆ.ವಿ.ಪುರುಷೋತ್ತಮ್, ಹರ್ಷ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಶ್ರೀನಿವಾಸ್, ಕೊರಟಗೆರೆ
