ಕೆ.ಆರ್.ಪೇಟೆ : ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ಶಾಲಾ ಹಂತದಲ್ಲೇ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು, ಅದನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟಿ ಗಂಜೀಗೆರೆ ಮಹೇಶ್ ಕರೆ ನೀಡಿದರು.

ತಾಲ್ಲೂಕಿನ ಹರಿಹರಪುರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹರಿಹರಪುರ ವಲಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಮರ ಕಡಿದರೆ ಹತ್ತು ಮರ ನೆಡಬೇಕು. ಪ್ಲಾಸ್ಟಿಕ್ ಬಳಕೆ ತಗ್ಗಿಸಿ, ನೀರನ್ನು ಮಿತವಾಗಿ ಬಳಸಿ.ನಿಮ್ಮ ಮನೆ, ಶಾಲೆ, ಊರನ್ನು ಸ್ವಚ್ಛವಾಗಿಟ್ಟುಕೊಂಡರೆ ಅದೇ ನಿಜವಾದ ಪರಿಸರ ಸೇವೆ.ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸಾಲ-ಉಳಿತಾಯಕ್ಕೆ ಸೀಮಿತವಾಗಿಲ್ಲ. ಕೆರೆ ಹೂಳೆತ್ತುವುದು,ಶಾಲಾ ತೋಟ ನಿರ್ಮಾಣ, ಜಲ ಸಂರಕ್ಷಣೆ, ಘನತ್ಯಾಜ್ಯ ನಿರ್ವಹಣೆ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹರಿಹರಪುರ ವಲಯದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿರುವುದು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅವರು ಮನುಷ್ಯನ ದುರಾಸೆಗೆ ಕಾಡು ನಾಶವಾಗುತ್ತಿದೆ. ಮರ ಕಡಿದರೆ ಮಳೆ ನಿಲ್ಲುತ್ತೆ, ಅಂತರ್ಜಲ ಬತ್ತುತ್ತೆ, ತಾಪಮಾನ ಏರುತ್ತೆ. ಇದರಿಂದ ರೈತನ ಬದುಕೇ ಬೀದಿಗೆ ಬರುತ್ತೆ. ಇವತ್ತು ನಾವು ಕಡಿಯುವ ಒಂದು ಮರ, ನಾಳೆ ನಮ್ಮ ಮಕ್ಕಳ ಉಸಿರು ಕಸಿಯುತ್ತೆ ಎಂದು ಮಹೇಶ್ ಆತಂಕ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಸದಸ್ಯ ಡಿ ಸಿ ಕುಮಾರ್ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೇವಲ ದೇವಸ್ಥಾನ ಕಟ್ಟಿಲ್ಲ ಲಕ್ಷಾಂತರ ಸ್ವಸಹಾಯ ಸಂಘಗಳ ಮೂಲಕ ಗ್ರಾಮಗಳ ಅಭಿವೃದ್ಧಿ, ಕೆರೆ-ಕಟ್ಟೆಗಳ ಜೀರ್ಣೋದ್ಧಾರ, ಶಾಲಾ ತೋಟ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆ.ಇದು ಸರ್ಕಾರ ಮಾಡಬೇಕಾದ ಕೆಲಸ. ಆದರೆ ಅನುದಾನ ಕೊರತೆ, ಇಚ್ಛಾಶಕ್ತಿ ಕೊರತೆಯಿಂದ ಆಗದ ಕೆಲಸವನ್ನು ಪೂಜ್ಯರು ಜನರ ಸಹಭಾಗಿತ್ವದಲ್ಲಿ ಮಾಡುತ್ತಿದ್ದಾರೆ. ಹರಿಹರಪುರ ವಲಯವೊಂದರಲ್ಲೇ ನೂರಾರು ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಕಾಳಜಿಗೆ ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನಿಯ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿ ಜಾಥಾ ಮೂಲಕ ಜಾಗೃತಿಗೊಳಿಸಿದರು.
ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಸದಸ್ಯ ಡಿ ಸಿ ಕುಮಾರ್,ಶಾಲಾ ಮುಖ್ಯ ಶಿಕ್ಷಕಿ ಮಂಜುಳ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹರಿಹರಪುರ ವಲಯದ ಮೇಲ್ವಿಚಾರಕಿ ಸಂಗೀತ ದಿನೇಶ್, ಕೃಷಿ ಮೇಲ್ವಿಚಾರಕ ಪ್ರವೀಣ್,ಸೇವಾ ಪ್ರತಿನಿಧಿಗಳಾದ ಪ್ರತಿಮಾ, ಮಂಜುಳ, ಶೃತಿ, ಪೂರ್ಣಿಮಾ,ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
