ರಾಮನಾಥಪುರ: ರಾಮನಾಥಪುರದ ಶ್ರೀ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ವಿ. ನಂದಿನಿ ಶ್ರೀ ಹಾಗೂ ಬಾಬುವರ್ಧನ್ ಅವರ ನಿವಾಸದಲ್ಲಿ ಶುಕ್ರವಾರ ಭಕ್ತಿಭಾವದಿಂದ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಪುರೋಹಿತರಾದ ಕುಮಾರ್ ಪುರೋಹಿತ್, ವೇ. ರಾಘವೇಂದ್ರ ಭಟ್ ಹಾಗೂ ಅಭಿರಾಜ್ ಅವರು ವೇದಮಂತ್ರೋಚ್ಚಾರಣೆಯೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಭಕ್ತರು ಭಾಗವಹಿಸಿ ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾದರು.
– ಕುಮಾರಸ್ವಾಮಿ ಎಂ.ಎನ್
