ಮನಸು ಮೃದಂಗ
(ಲೇಖನಗಳ ಸಂಕಲನ)
ಸೆಲೆಬ್ರಿಟಿಗಳು
ದಷ್ಠ-ಪುಷ್ಠ, ಸ್ವಾಲಂಬನೆಯ ರಾಷ್ಟ್ರವಾಗಬೇಕಾದರೆ ಎರಡು ಅತ್ಯಅಮೂಲ್ಯವಾದ ಅಗತ್ಯಗಳನ್ನು ಪೂರೈಸಬೇಕು. ಒಂದು ಸರಿಯಾದ ನಾಯಕತ್ವ, ಮತ್ತೊಂದು ಆರ್ಥಿಕ ವ್ಯವಸ್ಥೆ. ದೃಢವಾದ ಆರ್ಥಿಕ ಅವಲಂಬನೆಗೆ ವಾಣಿಜ್ಯ ಹಾಗು ಆ ರಾಷ್ಟ್ರದ ಸಂಪನ್ಮೂಲ ಪೂರಕ. ಇಂದಿನ ಜನಸಾಮನ್ಯನ ಕೊರಗು “ಎಲ್ಲವು ಇದ್ದು ಒಳ್ಳೆಯದನ್ನು ಅನುಭೋಗಿಸುವ ಅದೃಷ್ಠ ನಮಗಿಲ್ಲವಲ್ಲ” ಎಂಬುದು.
ನಮ್ಮಲ್ಲಿ ಪ್ರಬುಧ್ಧತೆಯ ರಾಷ್ಠçನಾಯಕರು ಬೆರಳೆಣಿಕೆಯಷ್ಠೆ. ಪಕ್ಷ ಮತ್ತು ಪ್ರತಿಪಕ್ಷ ಮುನ್ನೂರ ಅರವತೈದು ದಿವಸಗಳು ಒಬ್ಬರಿಗೊಬ್ಬರು ಕಾಲೆಳೆಯುವದರಲ್ಲೆ ಕಾಲ ಕಳೆಯುತ್ತಾರೆ. ಒಮ್ಮೆ ಪಕ್ಷದ ಮಾಜಿ ಆರೋಗ್ಯ ಮಂತ್ರಿ celebrety ಗಳನ್ನ, ಹೆಸರು ಗಳಿಸಿದ ನಟ ಹಾಗು ನಟಿಯರನ್ನು ಉದ್ದೇಶಿಸಿ “ನೀವು ಅದ್ಬುತ ಕಲಾವಿದರು, ತಮ್ಮ ಶ್ರೇಷ್ಟ ನಟನೆಯಿಂದ ಚಿರ ಪರಿಚತರು, ಇಂದಿನ ದೇಶದ ಯುವ ಸಮುದಾಯ ನಿಮ್ಮನ್ನು ಮೆಚ್ಚಿ ಹಾಗು ಅನುಕರಿಸಿ ನಿಮ್ಮಂತೆಯೆ ಆಗಬೇಕನ್ನುವ ಹಂಬಲದಿಂದ ನಿಮ್ಮ ಅಭಿಮಾನಿಗಳಾಗುವರು. ದಯವಿಟ್ಟು “ಧೂಮಪಾನ ಮತ್ತು ಮಾದಕ ದ್ರವ್ಯ ದೃಶ್ಯಗಳಲ್ಲಿ ನಟಿಸಬೇಡಿ” ಎಂದು ಅಂಗಾಲಾಚಿದರು.
ವಿತ್ತ ಮಂತ್ರಿಗಳ ಕಿವಿಮಾತಿಗೆ ಬೆಲೆ ಕೊಡದ ಈ ಮಹಾಷಯರು ಅವರವರ ವ್ಯಕ್ತಿ ಸ್ವಾತಂತ್ರ, ತಮ್ಮ ಮೂಲಭೂತ ಹಕ್ಕನ್ನು ಪ್ರತಿಪಾದಿಸಿ ಈ ಆರೋಗ್ಯ ಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿ ಕತ್ತರಿ ಪ್ರಯೋಗದ ಬೆದಿರಿಕೆಯನ್ನು ಒಡ್ಡಿದರು ಕ್ಯಾರೇ ಅನ್ನಿಲಿಲ್ಲ. ಕೆಲವು ದುರಭಿಮಾನ, ದುರಾಡಳಿತ ಹಾಗು ದುರಭ್ಯಾಸ ಪ್ರಜಾಪ್ರಬುತ್ವ ವಾದಿಗಳು ದುಶ್ಚಟದ ಹಿಂದೆ ಅಡಗಿರುವ ರೋಗಾಪಾಯಗಳನ್ನ ಅರಿಯದೆ commercial (ವಾಣಿಜ್ಯ) ಲಾಭಿಗೆ ಮಣಿದು ಇಡೀ ಸಕಾರಾತ್ಮ ವಾತಾವರಣಕ್ಕೆ ತಣ್ಣೀರು ಎರಚಿ ತಣ್ಣಗಾಗಿಸಿ ಬಿಟ್ಟಿದ್ದಾರೆ.
ನಾನೊಬ್ಬ ಮನೋವೈದ್ಯನಾದ್ದರಿಂದ ಈ ಧೂಮಪಾನ, ವ್ಯಸನ ಮತ್ತು ದುಶ್ಚಟಗಳ ಆಯಾಮಗಳನ್ನು ತಿಳಿದಿದ್ದರೂ ಇವರಿಗೆ ತಿಳಿಸುವುದಾದರು ಹೇಗೆ? ಸೆಲಬ್ರಿಟಿಗಳ ಖ್ಯಾತಿ ಮತ್ತು ಅವರ ಹಣ ಸಂಪಾದನೆ ಕಷ್ಟವೇ ಸರಿ, ಇದು ಅವರ ಅದೃಷ್ಠ, ಆದರೆ ಇವರ ಡೋಲಾಭಿಮಾನಿಗಳಿಗೆ ಆಗುವ ಅನಾಹುತಗಳ ಅರಿವು ಇವರಿಗೆ ಇದೆಯೇ? ಯಾವುದೆ ದೇಶದ ಸುವ್ಯವಸ್ಥೆ ಆ ದೇಶದ ಯುವಕರ ಸದ್ಬಾವನೆಯಿಂದ, ಸಾಂಘಿಕೃತ ಸಕಾರಾತ್ಮಕ ಚಿಂತನೆಯಿಂದ, ಸಂಘಟಿತ ಸಮೃದ್ದಿ ಕರ್ತವ್ಯ ಮನೋಭಾವದಿಂದ ಮಾತ್ರ ಸಾದ್ಯ. ಯುವಕರು ಶರೀರ ಮತ್ತು ಮಾನಿಸಕ ಆರೋಗ್ಯ ಹಾಗು ದುಶ್ಚಟಗಳಿಂದ ದೂರವಿದ್ದರೆ ದೇಶದ ಅಭಿವೃದ್ದಿಗೆ ಒಳಿತು.
ಯೌವ್ವನವನ್ನು ಬಿಡಸಿ ನೋಡಿದಾಗ “ಯುವ + ವನ” ವೆಂದು ಗೋಚರವಾಗುತ್ತೆ. ವನ ಅಂದರೆ ಪ್ರಕೃತಿ ಮತ್ತು ಯುವ ಅಂದರೆ ಚಿಗುರು. ಪ್ರಕೃತಿಯ ಅಡಿ ವನದಲ್ಲಿ ಕಾಣುವ ಮರ ನೂರಾರು ವರ್ಷಗಳು ಬಾಳಿದರೂ ನಿಜವಾದ ಅರ್ಥದಲ್ಲಿ ಆ ಮರದ ಬಾಳ್ವೆ ಒಂದು ವರ್ಷ ಮಾತ್ರ.
ಮರದ ಅಂದ ಬೇಸಿಗೆಯ ಬಿಸಿಗೆ ಬಾಡಿಹೋಗಿ ಮಳೆ ಆದೊಡನೆ ಎಲೆ ಚಿಗುರು ಕಂಡು ಹೂವನ್ನು ಹೊತ್ತಿ ಫಲವನ್ನು ಬಿಟ್ಟು, ವಸಂತ ಕಾಲ ಬಂದಾಗ ತನ್ನ ಮೈಮೇಲಿರುವ ಎಲೆಯನ್ನು ಕಳಿಚಿ ನೋಡಿದವರಿಗೆ ಆನಂದವನ್ನು ನೀಡುತ್ತದೆ, ನಿರಾಪೇಕ್ಷಾ ಮರ ತನ್ನ ಫಲವನ್ನು ಪರರಿಗೆ ನೀಡಿ ಮತ್ತೊಮ್ಮೆ, ಮಗದೊಮ್ಮೆ ಸಂವತ್ಸರದ ಕಡೆ ಮುಖವನ್ನು ಮಾಡುವುದು.
ಎಲ್ಲಿಯವರಿಗೂ ಸಂಚನಶೀಲ ಮಾಸಗಳು ಇರುತ್ತೋ ಅಲ್ಲಿಯವರಿಗು ಈ ಪ್ರಕೃತಿಯ ನಿಯಮ ನಿರಂತರ. ಆದರೆ ಮನುಷ್ಯನ ಜೀವ ಹೆಚ್ಚೆಂದರೆ ಶತಮಾನ ಮಾತ್ರ. ಹುಟ್ಟು, ಬಾಲ, ಯುವ, ಪ್ರೌಡ ಮುದಿ ಮತ್ತು ಸಾವು. ಈ ಎಲ್ಲಾ ಅವಸ್ಥೆಗಳನ್ನು ಮಾನವನು ಅನುಭೋಗಿಸಲೆ ಬೇಕು. ಈ ಜೀವನ ನೌಕೆಯಲ್ಲಿ ಮಾನವ ದಾಟಿದ ಒಂದು ಅವಸ್ಥೆ ಮತ್ತೆ ತಿರುಗಬಾರದು. ಪ್ರಕೃತಿಯ ವಸಂತ ಮಾಸವನ್ನು ಯುವಕಾವಸ್ಥೆಗೆ ಹೋಲಿಸಬಹುದು.
ವನಕ್ಕೆ ತನ್ನ ವಸಂತ ಮಾಸ ಬಂದಾಗ ಆ ಸಮಯದಲ್ಲಿ ಉಂಟಾದ ಚಿಗುರ ಸೊಬಗನ್ನು ನಾವು ಈ ಯೌವ್ವನದಲ್ಲಿ ನೋಡಬಹದು. ಇದನ್ನೆ ನಾವು “ಚಿಗರು ಮೀಸೆ” ಎನ್ನುವುದು. ಇದರಿಂದಲೇನೊ “ಕಳೆದು ಹೋದ ಚಿಗರು ಮೀಸೆ ಮತ್ತೆ ಬಾರದು” ಎನ್ನುವ ನಾಣ್ನುಡಿ ಇರುವುದು. ಯುವಕನು ಸದಾ ಉಲ್ಲಾಸಮಯಿ, ಶಕ್ತಿಮಯಿ ಮತ್ತು ಆಶಾಮಯಿ. ಆದರೆ ಇಂದಿನ ಮಾಯಾ, ತಾಂತ್ರಿಕ ಹಾಗು ಕಠಿಣ ಯಾಂತ್ರಿಕ ಬದುಕಿನಲ್ಲಿ ನಿರಾಸೆಗಳೇ ಹೆಚ್ಚು. ಆದರೂ ಈ ಯುವಕನು ಶ್ರಮದಾಯಕನಾಗಿ, ಗಮನಾ ಪ್ರವೃತ್ತಿಯನ್ನು ಬೆಳಸಿ, ಸಂಯಮಾ ಶೀಲನಾಗಿದ್ದರೆ ಸುಗುಮವಾಗಿ ತಾನು ಪ್ರೌಢಾವಸ್ತೆಗೆ ಕಾಲಿಡುವನು. ಈ ವೇಳೆ ಅಹಂ, ಅಸಡ್ಡೆ, ಅವಿವೇಕಿತನ ಮತ್ತು ಅತಿಯಾದ ಆಶಾಭಾವನೆಗಳನ್ನು ಹೊಂದಿದ್ದರೆ ನರಕ ಸದೃಷ ಕಟ್ಟಿಟ್ಟ ಬುತ್ತಿ. ಇಂತಹ ಅನೇಕ ಯೌವ್ವನದ ನಕಾರತ್ಮಕ ಗುಣಗಳು ಒಂದು ದೇಶದ ಅಭಿವೃದ್ದಿಗೆ ಮಾರಕವೆನ್ನುವದನ್ನ ಮರೆಯಾಬಾರದು.
ಶ್ರೀ ಕೃಷ್ಣ ಪರಮಾತ್ಮನು ತನ್ನ ಪಾಂಚಜನ್ಯ ಶಂಖವನ್ನು ಝೇಂಕರಿಸುವ ಮೂಲಕ ಷಢ್ಢಐಶ್ರ್ಯಗಳ ಪಂಚೇಂದ್ರಿಯ ಕುದರೆಗಳ ಲಗಾಮನ್ನು ತನ್ನ ಹಿಡಿತದಲ್ಲಿ ತಂದು ಪಂಚಪಾಂಡವರಲ್ಲಿ ಒಬ್ಬನಾದ ನಕಾರತ್ಮಕ ಚಿಂತನೆಗಳಿಂದ ಒಳಗೊಂಡ ಅರ್ಜುನನಿಗೆ ಸಕಾರತ್ಮಕ ಬೋದನೆಗಳ ಧರ್ಮವನ್ನು ಬೋದಿಸಿ, ಧೈರ್ಯವನ್ನು ತುಂಬಿ ಕುರುಕ್ಷೇತ್ರ ಯುದ್ದವನ್ನು ಮಾಡಿಸಿ ಕೌರವರ ಮೇಲೆ ಪಾಂಡವರು ಗೆದ್ದರೆನ್ನುವುದು ಮಹಾಭಾರತದ ಮೂಲ. ಇಂತಹ ನೀತಿ ಪಾಠಗಳು ನಮ್ಮ ಪಠ್ಯಕ್ರಮಗಳಲ್ಲಿ ದೂರವಾಗುತ್ತಿರುವುದು ವಿಷಾದನಿಯಾ.
ಯುವಕರ ಮನಸ್ಸು ಬಿರಗಾಳಿ. ಗೀಳಿನ ಮಹಾ ಸಾಗರ. ಹಗಲು ಕನಸುಗಳ ಟೈಟಾನಿಕ್ ಹಡಗು. ಆಶಾಭಾವನೆಗಳೆಲ್ಲವು “ಟಿಪ್ ಅಫ್ ದ ಐಸ್ ಬರ್ಗ್” ಹೌದು. ಸಹಜವಾಗಿ ಯುವಕರು ತರ್ಕಾಹೀನರು, ಛಲವಾದಿಗಳು, ಅರ್ಥ ಅಪೂರ್ಣರು, ಉಪದೇಶಾನಾಸ್ತಿಕರು, ಊರ್ಧ್ವ ಸ್ವತಂತ್ರ್ಯಾ ದುರಭಿಮಾನಿಗಳು, ಅನುಕರಣಾ ಪರಿಕಲ್ಪಿತರು, ಅಸಹಜ ಅಭಿಮಾನಿಗಳು ಮತ್ತು ಅತೀವ ಶಕ್ತಿದಾಯ ಬಾವನೆಉಳ್ಳವರು. ಇಂತಹ ಅನೇಕ ಅಪಾರ್ಥಗಳ ಚಿತ್ತ ಕಲ್ಪನಾ ಯುವಕರಿಗೆ ಗಟ್ಟಿಮುಟ್ಟಾದ ದೋಣಿ ಇದೆ. ಆದರೆ ಒಳ್ಳೆಯ ನಾವಿಕನಾಗದೆ ಹೋದರೆೆ ಹಾಗು ಹರಿಗೋಲನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇದ್ದರೆ ಈ ಯುವಕನು ಮಂಕು ಕವಿದ ಮಹಾ ಸಾಗರದಲ್ಲಿ ಮುಳಗುವುದು ಖಚಿತ. ಇಂತಹ ಸ್ಥಿತಿ ಒದಗಿ ಬಂದಾಗ ಅವರಿಗೆ ಒಳ್ಳೆಯ ಮಾರ್ಗದರ್ಶನ ಬೇಕಾಗುವುದು. ಈ ಮಾರ್ಗದರ್ಶನ ಯಾರಿಂದ ಬೇಕಾದರೂ ಸಿಗಬಹುದು.
ಜ್ಞಾನವಂತನಿಗೆ ಶ್ರೀ ಕೃಷ್ಣಪರಮಾತ್ಮನಿಂದ, ವಿಧ್ಯಾರ್ಥಿಗೆ ಒಳ್ಳೆಯ ಉಪಾಧ್ಯಾಯರಿಂದ, ಕಚೇರಿಯಲ್ಲಿ ಕೆಲಸ ಮಾಡುವವನಿಗೆ ಅಲ್ಲಿಯ ಹಿರಿಯ ಸಹದ್ಯೋಗಿಯಿಂದ, ಮಕ್ಕಳಿಗೆ ಪೋಷಕರಿಂದ, ಶ್ರೀಸಾಮಾನ್ಯನಿಗೆ ಒಳ್ಳೆಯ ಸ್ನೇಹಿತನ ಮಾರ್ಗದರ್ಶನದಿಂದ ಹಾಗೆಯೇ ಒಬ್ಬ ಒಳ್ಳೆಯ ಕೇಂದ್ರ ಮಂತ್ರಿಯಿಂದ ತಿಳುವಳಿಕೆಯಿಂದ ಸಹಾ ಆಗಿರಬಹುದು.
ಇದನ್ನು ಅರಿಯದ ನಮ್ಮ ಪ್ರಸಿದ್ದ? ನಟ-ನಟಿಯರಿಗೆ ಯಾರು ತಾನೆ ಪಾಠ ಹೇಳಿಕೊಡಬಲ್ಲರು?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


