ತುಮಕೂರು:ತುಮಕೂರು ವಕೀಲರ ಸಹಕಾರವನ್ನು ನಾನು ಎಂದೂ ಮರೆಯುವಂತಿಲ್ಲ,ವಕೀಲರ ಸಹಕಾರದಿಂದ 29-11-2023ರಿಂದ ಇಂದಿನವರೆಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶನಾಗಿ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಯಿತು,ಕಕ್ಷಿದಾರರ ಕೇಸುಗಳನ್ನು ಶೀಘ್ರವಾಗಿ ಮುಗಿಸಲು ವಕೀಲರ ಸಹಕಾರ ಅತ್ಯಂತ ಮುಖ್ಯ ತುಮಕೂರಿನಲ್ಲಿ ವಕೀಲರ ಸಹಕಾರದಿಂದ ಶೀಘ್ರವಾಗಿ ಕೇಸುಗಳನ್ನು ಮುಗಿಸಲು ಸಾಧ್ಯವಾಯಿತು,ನ್ಯಾಯಾಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ವಕೀಲರ ಸಂಘದ ಸಹಕಾರದಿಂದ ಸಾಧ್ಯವಾಯಿತು ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ರವರು ತಿಳಿಸಿದರು.
ಅವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಬಾರ್ ಅಂಡ್ ಬೆಂಚ್ ಬಹಳ ಮುಖ್ಯ ನ್ಯಾಯಾಧೀಶರು ಮತ್ತು ವಕೀಲರ ನಡುವೆ ಉತ್ತಮ ಬಾಂಧವ್ಯವಿದ್ದರೆ ಕಕ್ಷಿದಾರರಿಗೆ ಶೀಘ್ರ ನ್ಯಾಯದಾನ ಒದಗಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಬಿ.ಜಯಂತಕುಮಾರ್ ಸಾಹೇಬರು ವಕೀಲರುಗಳಿಗೆ ಉತ್ತಮ ಸಹಕಾರ ನೀಡಿದ್ದಾರೆ.
ಅಮಲಾಪುರದಲ್ಲಿ ಸರ್ಕಾರ ಮಂಜೂರು ಮಾಡಿದ 10 ಎಕರೆ ಜೊತೆ 5ಎಕರೆ ಹೆಚ್ಚುವರಿಯಾಗಿ ಕೇಳಿದ್ದೇವೆ,ಅದಕ್ಕೆ ಶೀಘ್ರವಾಗಿ ಅನುದಾನ ದೊರೆತು ಕೆಲಸ ಪ್ರಾರಂಭವಾಗುತ್ತದೆ,ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಗಣೇಶದೇವಾಲಯ,ನ್ಯಾಯಾಲಯದ ಸಿಬ್ಬಂದಿಗಳ ಕೊರತೆ ನೀಗಿಸುವಲ್ಲಿ,ಕಳೆದ 2ವರ್ಷ 10 ತಿಂಗಳುಗಳಲ್ಲಿ ಬಿ.ಜಯಂತಕುಮಾರ್ ಸಾಹೇಬರು ಮಾಡಿದ ಪ್ರತಿ ಕೆಲಸ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬಹುದಾದ ಕೆಲಸಗಳು ನಾನು 2ಬಾರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷನಾಗಿದ್ದು 2ನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದಾಗಲೂ ಸಾಹೇಬರು ಇದ್ದು ವಕೀಲರ ಸಂಘದ ಅಭ್ಯುದಯಕ್ಕೆ ಕಾರಣೀಭೂತರಾಗಿದ್ದಾರೆ.
ಈವರೆವಿಗೂ ಯಾವುದೇ ಮನಸ್ತಾಪವಿಲ್ಲದೆ ಖುಷಿಖುಷಿಯಾಗಿ ಇದ್ದೇವೆ ಅಂದರೆ ಅದಕ್ಕೆ ಸಾಹೇಬರು ನೀಡಿದ ಸಹಕಾರವೇ ಕಾರಣ,ಮುಂದೆಯೂ ಬರುವ ಪಿಡಿಜೆ ಸಾಹೇಬರು ಜಯಂತಕುಮಾರ್ ಸಾಹೇಬರ ಮನಸ್ಥಿತಿವುಳ್ಳವರು ಬಂದರೆ ಜಿಲ್ಲಾ ನ್ಯಾಯಾಂಗ ಮತ್ತು ವಕೀಲರ ಕೆಲಸಗಳು ಶೀಘ್ರವಾಗಿ ಆಗುತ್ತವೆ,ಈಗ ಇರುವ ಒಟ್ಟು 24ಜನ ನ್ಯಾಯಾಧೀಶರು ಸಹ ವಕೀಲರೊಂದಿಗೆ ಉತ್ತಮ ಸಂಬಂಧ ಸಹಕಾರ ಹೊಂದಿದ್ದಾರೆ ನಮ್ಮೆಲ್ಲರ ಗುರಿವೊಂದೇ ಶೀಘ್ರ ನ್ಯಾಯದಾನ,ಕಕ್ಷಿದಾರರಿಗೆ ಯಾವುದೇ ಲೋಪವಿಲ್ಲದೆ ನ್ಯಾಯ ಒದಗಿಸುವುದು ಆಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗೋವಿಂದರಾಜು.ಪಿ, ಡಿ.ಎ.ಜಗದೀಶ್,ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್.ಸೇವಾಪ್ರಿಯ.ಜೆ.ಎಸ್. ಸೇರಿದಂತೆ ಹಿರಿಯ,ಕಿರಿಯ ಮಹಿಳಾ ವಕೀಲರುಗಳು ಉಪಸ್ಥಿತರಿದ್ದರು.