ತುಮಕೂರು: ಮದ್ಯ ಕಲಿಸಲು ಎಲ್ಲರೂ ಸಿದ್ಧ ಆದರೆ ಮದ್ಯ ಬಿಡಿಸಲು ಧರ್ಮಸ್ಥಳದ ಧರ್ಮಾಧಿಕಾರಿಗಳೇ ಬರಬೇಕು,ಧರ್ಮಸ್ಥಳ ಸಂಸ್ಥೆ ಕುಡಿತ ಬಿಟ್ಟು ಉತ್ತಮ ಜೀವನ ಕಟ್ಟಿಕೊಳ್ಳಲು ಮದ್ಯವರ್ಜನಾ ಶಿಬಿರವನ್ನು ಆಯೋಜಿಸಿ ಮದ್ಯ ಸೇವಿಸುವವರನ್ನು ಒಂದೆಡೆ ಸೇರಿಸಿ ಅವರಿಗೆ ಕುಡಿತದ ಚಟವನ್ನು ಬಿಡಿಸುತ್ತಿದೆ,ಧರ್ಮಸ್ಥಳದ ಮದ್ಯವರ್ಜನ ಶಿಬಿರ ಇಡೀ ದೇಶಕ್ಕೆ ಮಾದರಿ,ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಿ ಕುಡಿತ ಬಿಟ್ಟು ನಿಮ್ಮ ಹೆಂಡತಿ ಮಕ್ಕಳು,ತಂದೆ-ತಾಯಿ,ಅಣ್ಣ-ತಮ್ಮ,ಅಕ್ಕ-ತAಗಿಯರ ಜೊತೆ ಉತ್ತಮ ಜೀವನ ಕಟ್ಟಿಕೊಳ್ಳಿ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಆರ್.ಕಾಮರಾಜ್ ರವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಹಾಗೂ 2125 ನೇ ಮದ್ಯವರ್ಜನಾ ವ್ಯವಸ್ಥಾಪನ ಸಮಿತಿ ಬೆಳ್ಳಾವಿ ವಲಯದ ಇವರ ಆಶ್ರಯದಲ್ಲಿ ನಡೆದ 2125 ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಕಾರದೇಶ್ವರ ಮಠದ ಸ್ವಾಮೀಜಿ ಕಾರದ ವೀರ ಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು,ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ.ಎಂ, ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ನಂಜೇ ಗೌಡ, ಶಿಬಿರದ ಅಧ್ಯಕ್ಷರಾದ ಉಮೇಶ್ ಬಿ.ಸಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ರಾಜಶೇಖರ್, ವಿಜಯ ಭಾಸ್ಕರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿಶಂಕರ್, ಶಿವಕುಮಾರ್, ಲಿಂಗಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ 68 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರುಗೊಂಡಿದ್ದು ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ ಸ್ವಾಗತಿಸಿ ಮೇಲ್ವಿಚಾರಕರಾದ ಮನೋಜ್ ಕಾರ್ಯಕ್ರಮ ನಿರೂಪಿಸಿ, ಎನ್.ರಾಘವೇಂದ್ರರವರು ವಂದಿಸಿದರು.
– ಚಂದ್ರಚೂಡ ಕೆ.ಬಿ.
