ಮನಸು ಮೃದಂಗ
(ಲೇಖನಗಳ ಸಂಕಲನ)
ಅಹಿಂಸಾ ಧರ್ಮ
ಸರ್ವ ಧರ್ಮಗಳು ಒಳ್ಳೆಯದನ್ನೇ ಬಯಸುತ್ತವೆನ್ನುವ ನಂಬಿಕೆ ನನ್ನದು. ಒಮ್ಮೆ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವಳಾದ ಮುವತೈದರ ವಯೋಮಾನದ ಅವಿವಾಹಿತ ಇಸ್ಲಾಮ್ ಮಹಿಳೆಯೊಬ್ಬರು ತನ್ನ ಅಪಸ್ಮಾರ ಕಾಯಿಲೆಗೆ ಔಷದೋಪಚಾರ ಹಾಗು ಸಲಹೆಗೆಂದು ಬಂದಿದ್ದಳು. ಹತ್ತಿರದ ಹಳ್ಳಿ ವಾಸಿಯಾದ ಇವಳು ಕಡುಬಡತನದ ಕುಟಂಬದಿಂದ ಬಂದವಳಾದ್ದರಿಂದ ತನ್ನ ಆರ್ಥಿಕ ಮುಗ್ಗಟ್ಟನ್ನು ನೀಗಿಸಿಕೊಳ್ಳಲು ನಗರದ ಕಡೆ ಮುಖ ಮಾಡಿದ್ದಳು.
ನಗರದಲ್ಲಿ ಶ್ರೀಮಂತರ ಮನೆಗಳಲ್ಲಿ ಮನೆ ಕೆಲಸ ಮಾಡಿ ಗಳಿಸಿದ ಅಲ್ಪ ಹಣದಿಂದ ಈ ಮುಂಚೆ ಅಪಸ್ಮಾರ ವ್ಯಾದಿಗೆ ನರ ಮತ್ತು ಮಾನಸಿಕ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಔಷದೊಪಚಾರ ಮಾಡಿಸಿಕೊಂಡಿದ್ದಳು. ಆದರೂ ಆಕೆಯ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಸಾದ್ಯವಾಗಿರಿಲಿಲ್ಲ.

ಈ ಕಾಯಿಲೆಯಿಂದ ಆಕೆ ಬಳಲುತ್ತಿದ್ದ್ದಳಾದ್ದರಿಂದ ವಾಸಿಯಾಗದ ಕಾರಣ ಆಕೆಯ ಮನೆಯ ಯಜಮಾನರು ಕೆಲಸದಿಂದ ಇವಳನ್ನು ತೆಗದು ಹಾಕಿದ್ದರು. ಕೊನೆಗೆ ತಾನು ನಗರೆದಲ್ಲೆ ಇದ್ದರೆ ಕಷ್ಠವೆಂಬುದನ್ನ ಅರಿತು ತನ್ನ ಹಳ್ಳಿಗೆ ಹಿಂದಿರುಗಿದಳು. ನಗರದ ಯಾಂತ್ರಿಕ ಬದುಕು ತನ್ನ ಊರಿಗೆ ವಾಪಸ್ ಆಗಲು ಕಾರಣವಾಗಿತ್ತು. ತನ್ನ ಬಂದುಗಳು ಹಾಗು ಮಿತ್ರರು ಆಶ್ರಯ ಕೊಟ್ಟರಾದರೂ ಆಕೆಯ ಆತ್ಮ ವಿಶ್ವಾಸ ಹಾಗು ಸ್ವಾಭಿಮಾನ ಹೊಲ ಗದ್ದೆಗಲ್ಲಿ ಕೆಲಸ ಮಾಡಿ ದುಡಿಯುವಂತೆ ಮಾಡಿತು.
ಕೆಲವು ಊರಿನ ಸಾಹುಕಾರರ ಮನೆಗಳಲ್ಲಿ ಕೆಲಸ ಮಾಡಿ ತನ್ನ ಅಪಸ್ಮಾರ ಕಾಯಿಲೆಗೆ ಔಷಧಿಯನ್ನು ಖರೀದಿಸುತ್ತಿದ್ದಳು. ಕಾಯಿಲೆಯಿಂದಾಗಿಯೇ ಈಕೆಯನ್ನು ಯಾರೂ ವರಿಸಿರಲಿಲ್ಲ. ಇವಳು ಕನ್ಯೆಯಾಗಿಯೆ ಉಳಿದು ಬಿಟ್ಟಳು. ಇಸ್ಲಾಮ್ ಸಂಘ ಸಂಸ್ಥೆಗಳು ಈಕೆಯ ಬವಣೆಯನ್ನು ಅರಿತು ಮುಂದೆ ಬಂದು ಆರ್ಥಿಕ ಸಹಾಯ ಮಾಡಲು ಒಪ್ಪಿದರೂ ಈಕೆ ನಿರಾಕರಿಸಿದ್ದಳು. ಕಾರಣ ಈಕೆಯ ಆತ್ಮಾಭಿಮಾನದ ಕಾಯಕದ ಹಾಗೂ ಸ್ವಾಲಂಬನೆಯ ಬೇರು ಘಾಡವಾಗಿ ತನ್ನಲ್ಲಿ ಬೇರೂರಿತ್ತು.
ಈಕೆ ತನ್ನ ಕಾಯಿಲೆಯ ಔಷದಿಗೆ ಯಾರಲ್ಲು ಹಣವನ್ನು ಅಂಗಲಾಚಿ ಬೇಡಿರಲಿಲ್ಲ. ಇವಳ ಬಂಧು ಒಬ್ಬರು ಈ ಹಿಂದೆ ನನ್ನಲ್ಲಿ ಅವರ ನರ ತೊಂದರೆಗೆ ತೋರಿಸಿ ವಾಸಿ ಆಗಿದ್ದರಿಂದ ಈಕೆಯನ್ನು ನನ್ನ ಬಳಿ ಕರೆ ತಂದ್ದಿದ್ದರು. ನನ್ನ ಔಷದೋಪಚಾರದಿಂದ ಕೆಲವು ತಿಂಗಳಲ್ಲೆ ಇವಳ ಅಪಸ್ಮಾರ ಕಾಯಿಲೆಯು ನಿಯಂತ್ರಣಗೊಂಡಿತು. ಆದರೆ ಔಷದಿಯ ವೆಚ್ಚ ಇಮ್ಮಡಿಸಿತು. ಇದನ್ನು ಅರಿತು ಈಕೆಯ ಹಳ್ಳಿಯಲ್ಲೇ ವಾಸವಾಗಿದ್ದ ಮದುವೆಯಾದ ಒಬ್ಬಾತನು ಇವಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಮುಂದೆ ಬಂದಿದ್ದ.
ಮೊದಲೆ ತಿಳಿಸಿದ ಹಾಗೆ ತನ್ನ ಆತ್ಮ ಮನೋಸ್ಥೈರ್ಯ ದೊಂದಿಗೆ ವರಿಸುವನನ್ನು ನನ್ನ ಬಳಿ ಕರೆತಂದು “ಡಾಕ್ಟರೇ ನನ್ನ ಕಾಯಿಲೆ ಮತ್ತು ವೆಚ್ಚವನ್ನು ಇವರಿಗೆ ತಿಳಿಸಿ” ಎಂದಳು. ನಾನು ಅವನಲ್ಲಿ ಸವಿಸ್ತಾರವಾಗಿ ಕಾಯಿಲೆಯ ರೂಪ ರೇಷೆಗಳನ್ನು ಅಂದರೆ ಅಪಸ್ಮಾರದ ಲಕ್ಪ್ಷಣಗಳನ್ನು, ನಿರಂತರ ಔಷದಿ ಸೇವನೆಯನ್ನು, ಗರ್ಭ ಧರಿಸಿದಾಗ ಆ ಮಗುವಿಗೆ ಆಗಬಹುದಾದ ತೊಂದರೆಗಳನ್ನು, ಔಷದಿಯ ವೆಚ್ಚವನ್ನು ಹಾಗು ಇವಳ ಕಾಯಲೆಯು ಅಂಟು ಕಾಯಲೆಯಲ್ಲಾ ಎನ್ನುವುದನ್ನು ಸಹಾ ತಿಳಿಸಿ ಕಳಿಸಿದೆ. ನನ್ನ ಸಲಹಾ ಕೊಠಡಿಯಿಂದ ಹೊರನಡೆÀದವ ಇವಳ ಬಳಿ ಮತ್ತೆ ಸುಲಿಯಲೇ ಇಲ್ಲ.
ಅಪಸ್ಮಾರ ರೋಗಗಳು ನರ ಕಾಯಿಲೆಯಾಗಿದ್ದು ಜ್ಞಾನ ತಪ್ಪಿ, ಕೆಳಗೆ ಬಿದ್ದು, ಕೈ ಕಾಲು ಸೆಟೆದು, ನಾಲಿಗೆ ಕಚ್ಚಿ, ಜೊಲ್ಲು ಸುರಿಸೊ ರೋಗ ಲಕ್ಷಣಗಳಲ್ಲದೆ; ಕೆಳಗೆ ಬೀಳದೆ, ಕ್ಷಣ ಕಾಲ ಹಾಗೆಯೇ ಬಾಯಿ ಚಪ್ಪರಿಸಿ, ಎಂಜಲು ನುಂಗುವ ಹಾಗೆ ಕಣ್ಣು ಮಿಟಿಕಿಸುವುದು, ಕೆಲವೊಮ್ಮೆ ಅಸಂಭಂದ ಹಾಗು ಅಸಾಂದರ್ಬಿಕ ಅನರ್ಥವಾದ ನುಡಿಗಳನ್ನ ನುಡಿಯುವುದು, ಗಾಬರಿ ಅಥವ ದಂಗು ಬಡಿದವನಂತೆ ನಿಂತು, ಆಶ್ಚರ್ಯಚಕಿತನಾಗಿ ಕಂಡು, ಹೆದರಿ ಪಕ್ಕದಲ್ಲಿ ಇರುವ ವ್ಯಕ್ತಿಗಳ ಕೈ ಹಿಡಿದು, ಗೊತ್ತಿರುವ ಸ್ಥಳವನ್ನು ತಿಳಿದೇ ಇಲ್ಲದ ಹಾಗೆ ನೆಡದು ಕೊಂಡು ಹೋಗುವುದು, ಅಪರಿಚಿತ ಸ್ಥಳವನ್ನು ಪರಿಚಯವಿದೆ ಎನ್ನುವ ರೀತಿಯಲ್ಲಿ ನೆಡದುಕಳ್ಳವುದು, ಕೆಲವೊಮ್ಮೆ ಕೈಗಳನ್ನು ಅನಿರ್ಧಿಷ್ಠ ರೀತಿಯಲ್ಲಿ ಆಡಿಸುವುದು, ತೀವ್ರವಾಗಿ ಹೊಟ್ಟೆ ಕಿವುಚಿಕೊಂಡು ಗಾಬರಿಯಾಗಿ ಬೆವರಿ ಹಾಗೆಯೆ ಕೆಲವು ಕ್ಷಣ ಪ್ರಜ್ಞಾಹೀನನಾಗುವುದು ಸಹ ಅಪಸ್ಮಾರಗಳ ಲಕ್ಷಣಗಳಾಗಿವೆ.
ಇಂತಹ ಅಪಸ್ಮರದ ಕಾಯಿಲೆಗೆ ಈಕೆ ತುತ್ತಾಗಿದ್ದಳು. ಬಹುತೇಕ ಅಪಸ್ಮಾರಗಳು ಸುಸ್ತಿ ಧರಗಳಲ್ಲಿ ಸಿಗುವ ಸಾಮನ್ಯ ಔಷಧಿಯಿಂದ ವಾಸಿ ಆಗಬಹುದು. ಆದರೆ ಈ ತರಹದ ಅಪಸ್ಮಾರ ನರ ರೋಗಗಳಿಗೆ ದುಬಾರಿ ಔಷದಿಗಳನ್ನು ಸೇರಿಸಿ ರೋಗ ನಿಯಂತ್ರಣಕ್ಕೆ ತರಬೇಕಾಗುತ್ತದೆ. ಈ ತರಹದ ವಿರಳ ಅಪಸ್ಮಾರವನ್ನು “ಪರ್ಷಿಯಲ್ ಕಾಂಪ್ಲೆಕ್ಸ್ ಎಪಿಲೆಪ್ಸಿ (partial complex epilepsy) ಎನ್ನುವರು.
ಈ ನರ ತೊಂದರೆಗೆ ಏನಿಲ್ಲವಾದರು (ಈಗಿನ ಬೆಲೆಯಲ್ಲಿ) ಮೂರು ತಿಂಗಳಿಗೊಮ್ಮೆ ಸುಮಾರು ಒಂದರಿಂದ ಒಂದುವರೆ ಸಾವಿರ ರುಪಾಯಿವರಿಗೂ ಖರ್ಚು ಬರುತ್ತದೆ. ಇದನ್ನು ಅರಿತ್ತಿದ್ದ ನಾನು ಆಕೆ ಮಾತ್ರೆಗಳನ್ನು ಕೆಲವು ವರ್ಷಗಳೇ ಸೇವಿಸಬೇಕಾದುದ್ದರಿಂದ ರಿಯಾಯಿತಿ ದರದಲ್ಲಿ ಹಾಗು ಕೆಲವು ಔಷಧಿಯನ್ನು ಉಚಿತವಾಗಿ ಕೊಡಿಸುವೆ ಎಂದೊಡನೆ “ಏನ್ ಸಾರ್, ನಮ್ಮ ಧರ್ಮದಲ್ಲಿ ಬಿಟ್ಟಿ ತೆಗದು ಕೊಳ್ಳುವುದು, ರಿಯಾಯಿತಿಯಲ್ಲಿ ಕೊಳ್ಳುವುದು ಅಕ್ಷಮ್ಯ ಅಪರಾಧ ಸಾರ್, ನಿಮ್ಮ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತೆ ಸಾರ್” ಎಂದು ಹೇಳಿ ಗಳ ಗಳನೆ ಅತ್ತೇ ಬಿಟ್ಟಳು. ಇವಳನ್ನು ನೋಡಿದ ಅನೇಕ ಸಹ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರು ಮೂಖ ವಿಸ್ಮಿತರಾದರು. ನಾನು ಇವಳನ್ನು ಸಮಾದಾನಿಸಲು ಸಾಕಷ್ಠು ಶ್ರಮ ಪಡಬೇಕಾಯಿತು.
ಸ್ನೇಹಿತರೆ, ಇವಳ ವರ್ತನೆ ನಿಜವಾಗಿಯೂ ವಿರುದ್ದ ನಡವಳಿಕೆಯಲ್ಲವೆ? ಎಷ್ಠೆ ಹಣವಂತರಾಗಿದ್ದರೂ, ಹೊಟ್ಟೆ ಬಾಕರಂತೆ ಬಿಟ್ಟಿ ಕೂಳು, ಬಿಟ್ಟಿ ಹೆಂಡ, ಬಿಟ್ಟಿ ಹೆಣ್ಣು, ಬಿಟ್ಟಿ ಔಷಧಿ ಮತ್ತು ಬಿಟ್ಟಿ ವಸ್ತುಗಳೆಂದರೆ ಅಂಗಾಲಾಚುವವರಿಗೆ ಈಕೆ ಮಾದರಿಯಲ್ಲವೆ? ಪ್ರವಾದಿ ಮಹಮ್ಮದ್ ಪೈಗಂಬರ್ ಸಾರಂಶವನ್ನು ಸಾರುವ ಈಕೆ ಇಸ್ಲಾಮ್ ಧರ್ಮಕ್ಕೆ ಉದಹಾರಣೆಯಾಗಲಿಲ್ಲವೆ? ಇಸ್ಲಾಮ್ ಧರ್ಮವು ದುಡಿದ ಹಣದಲ್ಲಿ ಶೇಖಡ ಇಪ್ಪತ್ತುರಷ್ಟು ನಿರ್ಗತರಿಗೆ ಧಾನ ಮಾಡಬೇಕೆನ್ನುವ ತತ್ವ ವಿಚಾರಧಾರೆಗೆ ಇವಳು ಪ್ರೇರಣೆಯಲ್ಲವೆ?
ತನ್ನ ಧರ್ಮದಲ್ಲಿ ಅಪಾರ ನಂಬಿಕೆವುಳ್ಳ ಇವಳು ಅನ್ಯರಿಗೆ ತೊಂದರೆ ಕೂಡಬಾರದೆನ್ನೋ ಮನೋಭಾವನೆಯು ನನ್ನ ಚಿಂತನಗಳನ್ನ ಮಂಥನವಾಗಿಸಿ ಬಿಟ್ಟಿತು. ಇಂದಿನ ಹೇಯ ಸಮಾಜದಲ್ಲಿ ಜಾತಿ-ಧರ್ಮ, ನೀಚ-ಸಾಚ, ಕೀಳು-ಉತ್ತಮಗಳೆಂಬ ಕೆಟ್ಟ ಬೀಜಗಳಿಂದ ದ್ವೇಷ, ದಳ್ಳುರಿ ಹಾಗು ಹಿಂಸೆಗಳೆಂಬ ಅಣು ಬಾಂಬುಗಳನ್ನು ತಯಾರಿಸಿ ಬಯೋತ್ಪಾದನೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸ್ವಜನಪಕ್ಷ ಪಾತಿಗಳಿಗೆ, ಧರ್ಮಾಂಧರಿಗೆ, ಎಡ ಹಾಗು ಬಲ ಪಂಕ್ತಿಗಳಿಗೆ, ಅಲ್ಪ ಅರಿತ ಪ್ರಜಾ ಪ್ರಭುದ್ದಿಗಳಿಗೆ ಮತ್ತು ಜಾಣ ಕಿವುಡು ರಾಜಕಾರಣಿಗಳಿಗೆ ಈಕೆಯ ನಡತೆ ಪ್ರಶಂಶನೀಯವಲ್ಲವೇ?
ಸ್ನೇಹಿತರೆ, ನನ್ನ ಪಕ್ಷ ““NOT TO TROUBLE OTHERS” ಅಂದರೆ ಯಾರಿಗು ತೊಂದರೆ ಕೂಡದಿರಿ ಎನ್ನುವ ಪಕ್ಷ. ಇದರ ಮೂಲ ಸಂದೇಶ “ನೀವು ಎಲ್ಲೆ ಇರಿ, ಹೇಗೇ ಇರಿ ಇತರರಿಗೆ ತೊಂದರೆ ಕೂಡ ಬೇಡಿ” ಎಂದು. ಆಕೆಯನ್ನು ಉದ್ದೇಶಿಸಿ ನನ್ನ ಪಕ್ಷವನ್ನು ನೊಂದಿಣಿಯಾಗಲು ಹೇಳಿದ ತಕ್ಷಣ ಅಳುತ್ತಿದ್ದ ಈಕೆ ಮಂದಹಾಸ ಬೀರಿದಳು. ನನ್ನ ಪಕ್ಷ ಸೇರದಿದ್ದರೂ ಪರವಾಗಿಲ್ಲ ಆದರೆ ನನ್ನ ಮನಸ್ಸಿಗೆ ಇವಳು ನೂರಕ್ಕೆ ನೂರು ಪ್ರತಿಷತಃ ನನ್ನ ಈ ಪಕ್ಷಕ್ಕೆ ಅರ್ಹಳೆಂದನಿಸಿತು. ನನ್ನ ಈ ಪಕ್ಷಕ್ಕೆ ಓದುಗರೆಲ್ಲರು ನೊಂದಣಿಯಾಗುತ್ತಾರೆ ಏನ್ನೊ ಭರವಸೆಯೊಂದಿಗೆ……………………!
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಅಹಿಂಸಾ ಧರ್ಮ- ಲೇಖನಗಳ ಸಂಕಲನ […]
[…] ಅಹಿಂಸಾ ಧರ್ಮ- ಲೇಖನಗಳ ಸಂಕಲನ […]