ಬೇಲೂರು : ಅಮ್ ಆದ್ಮಿ ಶಾಖೆ ಜೊತೆಗೆ ಜಾತಿಗಣತಿ ಗಮನ ಹರಿಸುವಂತೆ ಸೂಚನೆ ನೀಡಿದ್ದಕ್ಕೆ ಮನನೊಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್.
ತಾಲೂಕು ದಂಡಾಧಿಕಾರಿಯವರು ನನಗೆ ಮಾನಸಿಕವಾಗಿ ಉದ್ದೇಶ ಪೂರಕವಾಗಿಯೇ ಕುರಿತು ಕೆಲವು ಕೆಲಸಗಳನ್ನು ನಿರ್ವಹಿಸಲು ತಿಳಿಸುತ್ತಿದ್ದಾರೆ ಈ ಕೆಲಸಗಳನ್ನು ನಿರ್ವಹಿಸಲು ಬೇರೆ ಸಿಬ್ಬಂದಿಗಳು ಇದ್ದರೂ ಸಹ ಅದನ್ನು ಲೆಕ್ಕಿಸದೆ ನನ್ನನ್ನೇ ಈ ಕೆಲಸವನ್ನು ನಿರ್ವಹಿಸುವಂತೆ ತಿಳಿಸುತ್ತಿದ್ದಾರೆ ಆದ ಕಾರಣ ಇಂದು ನಾನು ಮನನೊಂದು ಕಚೇರಿಯ ಮುಂಭಾಗದಲ್ಲಿ ತಾಲೂಕು ದಂಡಾಧಿಕಾರಿಗಳು ನೀಡುತ್ತಿರುವ ಕಿರುಕುಳ ಮತ್ತು ಮಾನಸಿಕ ಹಿಂಸೆ ಮನನೊಂದು ಮಾತ್ರೆ ಸೇವಿಸಿ ಪ್ರಾಣವನ್ನು ತ್ಯಜಿಸುತ್ತೇನೆ ಎಂದು ಮುಂದಾದ ಶಿರಸ್ಥೇದಾರ್ ತನ್ವೀರ್ ಅಹಮದ್ .
ಇದೇ ವೇಳೆ ಸ್ಪಷ್ಟನೆ ನೀಡಿದ ದಂಡಾಧಿಕಾರಿ ಶ್ರೀಧರ್ ಕಂಕಣ ವಾಡಿ ಅಮ್ ಆದ್ಮಿ ಶಾಖೆಯ ಶಿರಸ್ಥೇದಾರ್ ಆಗಿರುವ ತನ್ವೀರ್ ಅಹಮದ್ ೨೦೨೬ ನೇ ಸಾಲಿನ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಇಲ್ಲಿರುವ ಕೆಲವರನ್ನು ಇದಕ್ಕೆ ನೇಮಕ ಮಾಡಲಾಗುತ್ತಿದೆ.ಉತ್ತಮ ಕೆಲಸ ಮಾಡುವ ಇವರಿಗೆ ಜಾತಿಗಣತಿ ಕಾರ್ಯದ ಮೇಲ್ವೀಚರಣೆಗೆ ಆದೇಶಿಸಲಾಗಿದೆ.ಇವರಿಗೆ ಯಾವುದೇ ಹೆಚ್ಚುವರಿ ಕೆಲಸ ನಾವು ನೀಡಿಲ್ಲ.ಅಲ್ಲದೆ ತಕ್ಷಣ ನಮ್ಮ ಕಚೇರಿಗೆ ಬಂದು ಈ ಕೆಲಸ ನಾನು ಮಾಡುವುದಿಲ್ಲ ಎಂದಾಗ ಅದನ್ಬು ಲಿಖಿತ ರೂಪದಲ್ಲಿ ಕೊಡಿ ಎಂದು ಕೇಳಿದ್ದು ನಿಜ.ಹೊರಗಡೆ ಹೋಗಿ ನಾನು ಮಾತ್ರೆ ಸೇವಿಸುವೆ ಎಂದು ಧಮಕಿ ಹಾಕಿದಾಗ ನಾವೆ ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದೇನೆ .
ಸರ್ಕಾರಿ ಕೆಲಸ ಮಾಡುವ ಸಂದರ್ಭದಲ್ಲಿ ಸಣ್ಣಪುಟ್ಟ ಹೆಚ್ಚುವರಿ ಕೆಲಸ ಎಲ್ಲರೂ ಮಾಡುವುದು ಕರ್ತವ್ಯ ಇವರ ಮೇಲೆ ನಾವು ಸಹ ಮೇಲಾಧಿಕಾರಿಗಳಿಗೆ ದೂರನ್ನು ನೀಡುತ್ತಿದ್ದೇನೆ ಎಂದರು.
ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರಸ್ಥೇದಾರ್ ಶುಗರ್ ಮಾತ್ರೆ ಸೇವಿಸಿದ್ದಾರೆಂದು ಸ್ಪಷ್ಟ ಪಡಿಸಿದ್ದಾರೆ.
