ಚಿಕ್ಕಮಗಳೂರು ಜಿಲ್ಲೆಯ *ಕೊಪ್ಪ ಮತ್ತು ಕುದುರೆಮುಖ ವನ್ಯಜೀವಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಆಗಸ್ಟ್ 15 ಮತ್ತು 16ರಂದು ನಡೆಯಲಿರುವ ಆಫ್ ರೋಡಿಂಗ್ ಚಟುವಟಿಕೆಗಳಿಗೆ ಬೇರು ಭೂಮಿ ಪರಿಸರ ಸಂರಕ್ಷಣಾ ಸಂಸ್ಥೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.*
ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಅಲಿಗೇಶ್ವರದಲ್ಲಿ ಭದ್ರಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ *‘ಮೋಟೋ ಮೇನಿಯಾ’* *ಹಾಗೂ ಬೆಂಗಳೂರು ಅಡ್ವೆಂಚರ್ಸ್ ವತಿಯಿಂದ ‘ಕುದುರೆಮುಖ ಆಫ್ ರೋಡ್ ಅಡ್ವೆಂಚರ್* ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಭಾಗವಹಿಸುವ ಸಾಧ್ಯತೆಯಿದೆ
*ಅರಣ್ಯದ ದಾರಿಗಳು, ತೊರೆಗಳು, ಕೆಸರು ಪ್ರದೇಶಗಳು ಮತ್ತು ಕಲ್ಲಿನ ಹಾದಿಗಳಲ್ಲಿ ಭಾರಿ ವಾಹನಗಳ ಸಂಚಾರದಿಂದ ಮಣ್ಣಿನ ಸವಕಳಿ, ನೈಸರ್ಗಿಕ ನೀರಿನ ಹರಿವಿಗೆ ಹಾನಿ ಹಾಗೂ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ.*
ಅಳಗೇಶ್ವರ ಪ್ರದೇಶವು *ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಸಂಪರ್ಕಿಸುವ ವನ್ಯಜೀವಿ ಸಂಚಾರ ಪ್ರದೇಶಕ್ಕೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶವಾಗಿದೆ.* ಇಲ್ಲಿ ಗೌರ್, ಕಾಡೆಮ್ಮೆ ಹಾಗೂ ಆನೆಗಳ ಸಂಚಾರವೂ ಕಂಡುಬರುತ್ತಿದೆ.

*ಹೆಚ್ಚಿನ ಸಂಖ್ಯೆಯ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ವಿಶೇಷವಾಗಿ ಮಾರ್ಪಡಿಸಿದ ಸೈಲೆನ್ಸರ್ಗಳ ತೀವ್ರ ಶಬ್ದ, ವನ್ಯಜೀವಿಗಳ ಸಹಜ ಸಂಚಾರ, ಆಹಾರ ಹುಡುಕಾಟ ಮತ್ತು ವಿಶ್ರಾಂತಿಗೆ ಅಡ್ಡಿಯಾಗಬಹುದು.*
*ಕಾಡು ಮನುಷ್ಯನ ಸಾಹಸ ಪ್ರದರ್ಶನದ ವೇದಿಕೆಯಲ್ಲ ಅದು ವನ್ಯಜೀವಿಗಳ ಮನೆ.* ಕೆಲ ಗಂಟೆಗಳ ಮನರಂಜನೆಗಾಗಿ ಅವುಗಳ ಸಹಜ ಬದುಕಿಗೆ ತೊಂದರೆ ಉಂಟುಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ
ಈ ಕಾರ್ಯಕ್ರಮಗಳಿಗೆ *ಅರಣ್ಯ, ವನ್ಯಜೀವಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಗತ್ಯ ಅನುಮತಿಗಳಿವೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು.* ಅನುಮತಿ ಇಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಚಟುವಟಿಕೆ ನಡೆಯುತ್ತಿದ್ದರೆ *ತಕ್ಷಣವೇ ತಡೆದು ಕಾನೂನು ಕ್ರಮ ಕೈಗೊಳ್ಳಬೇಕು* ಎಂದು ಬೇರು ಭೂಮಿ ಆಗ್ರಹಿಸಿದೆ
*ಆಗಸ್ಟ್ 15 ಮತ್ತು 16ರಂದು ನಡೆಯಲಿರುವ ಮೋಟೋ ಮೇನಿಯಾ ಮತ್ತು ಕುದುರೆಮುಖ ಆಫ್ ರೋಡ್ ಅಡ್ವೆಂಚರ್ ಕಾರ್ಯಕ್ರಮಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು*
*
*ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ವಾಹನಗಳ ಆಫ್ ರೋಡಿಂಗ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು* ಎಂದು ಬೇರು ಪರಿಸರ ಸಂರಕ್ಷಣಾ ಸಂಸ್ಥೆ ಭೂಮಿ ಒತ್ತಾಯಿಸಿದೆ
*ಕಾಡು ನಮ್ಮ ಮನರಂಜನೆಗಾಗಿ ಅಲ್ಲ; ಅದು ವನ್ಯಜೀವಿಗಳ ಬದುಕಿಗಾಗಿ.*
*ಕಾಡನ್ನು ಉಳಿಸುವುದು ಎಂದರೆ ಮರಗಳನ್ನು ಮಾತ್ರವಲ್ಲ, ಅದರೊಳಗೆ ಬದುಕುತ್ತಿರುವ ಪ್ರತಿಯೊಂದು ಜೀವಿಯ ಬದುಕಿನ ಹಕ್ಕನ್ನು ಗೌರವಿಸುವುದು.*
ಬೇರು ಭೂಮಿ
ಪರಿಸರ ಸಂರಕ್ಷಣಾ ಸಂಸ್ಥೆ ಕರ್ನಾಟಕ
