ಬೆಂಗಳೂರು, ಏಪ್ರಿಲ್ 16: ಟಾಟಾ ಸಮೂಹದ ಪ್ರಸಿದ್ಧ ಐಷಾರಾಮಿ ಆಭರಣ ಬ್ರ್ಯಾಂಡ್ ‘ಜೋಯಾ’ ಬೆಂಗಳೂರಿನ ಪ್ರತಿಷ್ಠಿತ ‘ದಿ ಲೀಲಾ ಪ್ಯಾಲೇಸ್’ ಹೋಟೆಲ್ ನ ಕೊಲೊನೇಡ್ ನಲ್ಲಿ ತನ್ನ ನೂತನ ಮಳಿಗೆಯನ್ನು ಉದ್ಘಾಟಿಸಿದೆ. ಟಾಟಾ ಸಮೂಹದ ಜೋಯಾ ವಿಭಾಗದ ಬಿಸಿನೆಸ್ ಹೆಡ್ ಅಮನ್ ಪ್ರೀತ್ ಅಹ್ಲುವಾಲಿಯಾ ಅವರು ಈ ಹೊಸ ಮಳಿಗೆಯನ್ನು ಉದ್ಘಾಟಿಸಿದರು.
ಈ ಮಳಿಗೆಯು ಜೋಯಾ ಸಂಸ್ಥೆಯ ಬೆಂಗಳೂರಿನ ಎರಡನೇ ಮಳಿಗೆಯಾಗಿದ್ದು, ಭಾರತದಲ್ಲಿ 13ನೇ ಮತ್ತು ದಕ್ಷಿಣ ಭಾರತದ 4ನೇ ಮಳಿಗೆಯಾಗಿದೆ. ಅತ್ಯಂತ ಆಪ್ತ ಮತ್ತು ಅರ್ಥಪೂರ್ಣ ಅನುಭವವನ್ನು ನೀಡುವಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದ್ದು, ಈ ಮಳಿಗೆಯು ಐಷಾರಾಮಿತನದ ಹೊಸ ಆಯಾಮವನ್ನು ಪರಿಚಯಿಸುತ್ತದೆ.
ಒಂದು ಸುಂದರ ಕವಿತೆಯಂತೆ ವಿನ್ಯಾಸಗೊಂಡಿರುವ ಈ ಮಳಿಗೆಯು ಕೇವಲ ವ್ಯಾಪಾರ ಮಳಿಗೆಯಾಗಿರದೆ, ಕಲಾತ್ಮಕ ಗ್ಯಾಲರಿಯಂತೆ ಭಾಸವಾಗುತ್ತದೆ. ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಸ್ತ್ರೀಯರನ್ನು ತಕ್ಷಣವೇ ಆಕರ್ಷಿಸುವಂತಿದೆ. ಗ್ರಾಹಕರು ಮಳಿಗೆಯೊಳಗೆ ಸಾಗುತ್ತಿದ್ದಂತೆ, ಅದ್ಭುತ ಕರಕುಶಲತೆ ಮತ್ತು ಸೊಗಸಾದ ಆಭರಣಗಳನ್ನು ಎದುರುಗೊಳ್ಳುತ್ತಾರೆ.
‘ಜೋಯಾ’ ಎಂದರೆ ಜೀವಂತಿಕೆ ಎಂದರ್ಥ. ಪ್ರತಿಯೊಬ್ಬ ಮಹಿಳೆಯೂ ತನ್ನದೇ ಆದ ಯಶೋಗಾಥೆಯ ಪಯಣದಲ್ಲಿ ಸಾಗುತ್ತಿರುತ್ತಾರೆ ಎಂಬುದು ಈ ಬ್ರ್ಯಾಂಡ್ ನ ಮೂಲ ನಂಬಿಕೆ. ಅದಕ್ಕೆ ಪೂರಕವಾಗಿ ಮಳಿಗೆಯ ಪ್ರವೇಶದ್ವಾರದಲ್ಲಿ ಮಹಿಳೆಯ ವಿಕಸನವನ್ನು ಚಿತ್ರಿಸುವ ಸೊಗಸಾದ ಭಿತ್ತಿಚಿತ್ರವು ಗ್ರಾಹಕರನ್ನು ಸ್ವಾಗತಿಸುತ್ತದೆ.
ಮಳಿಗೆಯ ಗೋಡೆಗಳಿಗೆ ಕೈಯಿಂದಲೇ ನೇಯ್ದ ಮಣಿಗಳ ವಿನ್ಯಾಸವಿರುವ ವಾಲ್ ಪೇಪರ್ ಗಳನ್ನು ಬಳಸಲಾಗಿದ್ದು, ಇದು ಭಾರತದ ಶ್ರೇಷ್ಠ ಕರಕುಶಲ ಪರಂಪರೆಯನ್ನು ಕಣ್ಮುಂದೆ ತರುತ್ತದೆ. ಮಳಿಗೆಯ ಒಳಾಂಗಣವನ್ನು ಬಾಳೆನಾರಿನ ಕಾಗದ ಮತ್ತು ಆರ್ಗನ್ಜಾ ಬಟ್ಟೆಯಿಂದ ತಯಾರಿಸಿದ ವಿಶಿಷ್ಟ ಚೇಂಡೆಲಿಯರ್ನಿಂದ ಅಲಂಕರಿಸಲಾಗಿದೆ. ಗ್ರಾಹಕರು ಮಳಿಗೆಯ ಪ್ರತಿ ಹಂತದಲ್ಲೂ ಆತ್ಮೀಯ ಕರಕುಶಲತೆ ಮತ್ತು ಅಪರೂಪದ ಆಭರಣಗಳನ್ನು ವೀಕ್ಷಿಸಬಹುದಾಗಿದೆ.
ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸಮೂಹದ ಜೋಯಾ ವಿಭಾಗದ ಬಿಸಿನೆಸ್ ಹೆಡ್ ಅಮನ್ಪ್ರೀತ್ ಅಹ್ಲುವಾಲಿಯಾ ಅವರು, “ಇದು ಭಾರತದಲ್ಲಿ ನಮ್ಮ 13ನೇ ಮಳಿಗೆ ಹಾಗೂ ಬೆಂಗಳೂರಿನಲ್ಲಿ ಎರಡನೆಯದು. ಪ್ರತಿಯೊಂದು ಹೊಸ ಮಳಿಗೆಯೊಂದಿಗೆ ‘ಜೋಯಾ’ ತನ್ನನ್ನು ತಾನು ಇನ್ನಷ್ಟು ಆಕರ್ಷಕವಾಗಿ ಬಿಂಬಿಸಿಕೊಳ್ಳುತ್ತಿದೆ.
‘ದಿ ಲೀಲಾ ಪ್ಯಾಲೇಸ್’ ನಲ್ಲಿರುವ ಈ ಮಳಿಗೆಯು ಧರಿಸಬಹುದಾದ ಕಲಾಕೃತಿಗಳ ಗ್ಯಾಲರಿಯಂತೆ ಮೂಡಿಬಂದಿದೆ. ಇಲ್ಲಿ ಪ್ರತಿಯೊಂದು ಆಭರಣವನ್ನು ಗ್ರಾಹಕರು ನೋಡುವುದರ ಜೊತೆಗೆ ಅವುಗಳನ್ನು ಫೀಲ್ ಮಾಡಬೇಕು ಎಂಬುದು ನಮ್ಮ ಆಶಯ. ಈ ಮಳಿಗೆಯನ್ನು ಅತ್ಯಂತ ಆಪ್ತವಾಗಿ ಮತ್ತು ಸೊಗಸಾಗಿ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿನ ಸಹಜವಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಮಹಿಳೆಯೂ ತನ್ನ ಬಿಡುವಿಲ್ಲದ ಜೀವನದ ನಡುವೆ ಈ ತಾಣದಲ್ಲಿ ಒಂದು ಕ್ಷಣ ವಿರಮಿಸಿ, ತನ್ನನ್ನು ತಾನು ಮರುಶೋಧಿಸಿಕೊಳ್ಳುವಂತಾಗಲಿ ಎಂದು ನಾವು ಆಶಿಸುತ್ತೇವೆ” ಎಂದರು.
ಈ ಮಳಿಗೆಯನ್ನು ಪ್ರತಿ ಆಭರಣದ ಕಥೆಗಳು ಸುಂದರವಾಗಿ ಕಣ್ಣೆದುರು ತೆರೆದುಕೊಳ್ಳುವಂತೆ, ಆಭರಣ ಸಂಗ್ರಹಗಳಿಗೆ ಜೀವ ತುಂಬುವಂತೆ ಅತ್ಯಂತ ಚಿಂತನಶೀಲವಾಗಿ ರೂಪಿಸಲಾಗಿದೆ. ಇಲ್ಲಿ ಸ್ತ್ರೀಯರು ಕಳೆದುಹೋಗುತ್ತಾರೆ. ಈ ಸೊಗಸಾದ ವಾತಾವರಣದಲ್ಲಿ, ಆಕೆಯಲ್ಲಿ ಒಂದು ರೀತಿಯ ತನ್ಮಯತೆಯ ಭಾವ ಮೂಡುತ್ತದೆ. ಸಿಂಧೂ ನದಿಯಂತೆ ಹರಿಯುವ ಬಾವ ಮೂಡಿಸುವ ವಜ್ರಗಳು ಮತ್ತು ಎಮರಾಲ್ಡ್ ಕಟ್ ಪಚ್ಚೆಗಳ ಕೆತ್ತನೆಯುಳ್ಳ ‘ಬಿಯಾಂಡ್’ ಸಂಗ್ರಹವನ್ನು ನೋಡಿದಾಗ ಆಕೆಗೆ ತಾನು ಪ್ರಕೃತಿಯ ಒಂದು ಶಕ್ತಿ ಎಂಬುದು ನೆನಪಾಗುತ್ತದೆ. ಇನ್ನು ‘ಅಲೈವ್’ ಸಂಗ್ರಹವನ್ನು ನೋಡಿದಾಗ, ತಾನು ಎಲ್ಲಿ ನಿಂತರೂ ಅರಳುವ ಕಾಡುಹೂವಿನಂತೆ ಅವಳಿಗೆ ಭಾಸವಾಗುತ್ತದೆ.
ಮಳಿಗೆಯಲ್ಲಿರುವ ವಿಶೇಷವಾದ ಗೋಡೆಯು ಅವಳನ್ನು ಸೆಳೆಯುತ್ತದೆ, ಅಲ್ಲಿ ಅಮೂಲ್ಯ ರತ್ನಗಳು ಮತ್ತು ಕಥೆಗಳು ಒಂದಾಗಿ ಸೇರಿಕೊಂಡಿವೆ. ಅಲ್ಲಿರುವ ಪ್ರತಿಯೊಂದು ಅನನ್ಯ ಆಭರಣವೂ ಅವಳ ವಿಶಿಷ್ಟತೆಗೆ ಸಂದ ಗೌರವದಂತಿದೆ.
ಅವಳು ಮತ್ತಷ್ಟು ಈ ಮಳಿಗೆಯಲ್ಲಿ ತಲ್ಲೀನಳಾಗಿ ಮುಂದಕ್ಕೆ ಹೆಜ್ಜೆ ಇಡುತ್ತಿದ್ದಂತೆ, ಜೋಯಾ ಮಳಿಗೆಯು ಇನ್ನಷ್ಟು ಗಾಢ ಅನುಭವ ಒದಗಿಸುತ್ತದೆ. ಶಾಂತವಾದ ಓಯಸಿಸ್ ನಂತೆ ಭಾಸವಾಗುವ ಆ ಪರಿಸರದಲ್ಲಿ, ತಾಜಾವಾಗಿ ತಯಾರಿಸಿದ ಕಾಫಿ ಮತ್ತು ರುಚಿಕರವಾದ ತಿಂಡಿಗಳನ್ನು ಸವಿಯುತ್ತಾ ಅವಳು ಮೈಮರೆಯುತ್ತಾಳೆ. ಪ್ರತಿ ಸಂಗ್ರಹದ ಮೂಲಕ ತನ್ಮಯಳಾಗುತ್ತಾ, ನಿರಾಳವಾದ ಸೌಂದರ್ಯದ ಕ್ಷಣಗಳನ್ನು ಆಸ್ವಾದಿಸುತ್ತಾಳೆ.
