ರಾಮನಾಥಪುರ- ಕಾವೇರಿ ನದಿಯಲ್ಲಿನ ಪುಣ್ಯ ಸ್ಥಳಗಳಲ್ಲಿ ಹಗಲು ಮದ್ಯಾಹ್ನ ವೇಳೆಯಲ್ಲಿ ಕೆಲವು ಪುಂಡರ ಗುಂಪು ಮದ್ಯಪಾನ ಸೇವನೆ ಮಾಡುವುದಲ್ಲದೇ ನೀರಿನಲ್ಲಿ ಸ್ನಾನ ಮಾಡುವ ಮಹಿಳೆಯರು ಸೇರಿದಂತೆ ಇತರರಿಗೆ ತೊಂದರೆ ಉಂಟುಮಾಡುತ್ತಿರುವ ಭಯದ ವಾತವರಣ ಸೃಷ್ಠಿಸುತ್ತಿರುವುದು ಕಂಡುಬಂದಿದೆ.

ದಕ್ಷೀಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರ ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹತ್ತು ಹಲವಾರು ದೇವಸ್ಠಾನಗಳು ಪುಣ್ಯ ಕಾವೇರಿ ನದಿ ದಡದಲ್ಲಿ ಇದ್ದು, ನೂರಾರು ಭಕ್ತರು ನಿತ್ಯವೂ ಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ

ಪ್ರಮುಖವಾಗಿ ಕಾವೇರಿ ನದಿಯಲ್ಲಿನ ಪುರಾಣ ಪ್ರಸಿದ್ಧ ವಹ್ನಿ ಪುಷ್ಕರಣಿ ಸ್ಥಳ ಹೊರತುಪಡಿಸಿದರೇ ಉಳೆದಲ್ಲ ಗೋಗರ್ಭ,ಗಾಯಿತ್ರಿಶಿಲೆ,ಕುಮಾರಧಾರಾ ತೀರ್ಥ ಸ್ಥಳಗಳು ಕಾವೇರಿ ನದಿಯ ಮಧ್ಯಭಾಗದಲ್ಲಿ ಇವೆ.ಮೊದಲು ಈ ಸ್ಥಳಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸುವ ಮೊದಲು ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ಪ್ರತೀತಿಯಾಗಿದೆ.
ಪುಂಡರ ಹಾವಳಿ : ಬೇಸಿಗೆಯ ಬಿಸಿಲಿನ ತಾಪಮಾನ ಭಕ್ತರಿಗೆ ದೊಡ್ಡಮಟ್ಟದಲ್ಲಿ ಉಂಟಾಗಿರುವ ಪರಿಣಾಮ ಹೆಚ್ಚು ಕಾಲ ನೀರಿನಲ್ಲಿ ಕಳೆಯುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕುಟುಂಬದೊಂದಿಗೆ ಆಗಮಿಸುವ ಮಕ್ಕಳು,ಹೆಣ್ಣುಮಕ್ಕಳು ಕಂಡುಬರುತ್ತಾರೆ.ಕೆಲವರು ಗೆಳತಿ,ಗೆಳೆಯರೊಂದಿಗೆ ಬರುವವರ ಸಂಖ್ಯೆಯೇ ಅಧಿಕ.ಇಂತಹ ಸಂದರ್ಭವನ್ನು ದುರ್ಬಳಕೆ ಮಾಡುವ ಸಲುವಾಗಿ ಕೆಲವು ಪುಂಡರ ಗುಂಪು ಸ್ನಾನಮಾಡುವ ನೆಪದಲ್ಲಿ ಮದ್ಯಪಾನಗಳನ್ನು ಜತೆಯಲ್ಲಿಯೇ ತಂದು ಯಾವುದೇ ಭಯವಿಲ್ಲದೇ ಜನರು ಸ್ನಾನಮಾಡುವ ಜಾಗದಲ್ಲಿ ಸೇವನೆ ಮಾಡಿ ಕಿರಿ ಕಿರಿ ಉಂಟುಮಾಡುವುದಲ್ಲದೇ ಇತರೆ ಅಹಿತಕರ ಕೃತ್ಯಕ್ಕೆ ಮುಂದಾಗುತ್ತಾರೆ.ಈ ಬಗ್ಗೆ ಪ್ರಶ್ನೆಮಾಡಿದರೇ ಗಲಾಟೆ,ಘರ್ಷಣೆಗೂ ಮುಂದಾಗುತ್ತಾರೆ.
ನದಿಯಲ್ಲಿ ನೀರಿನ ಹರಿಯುವಿಕೆ ಕುಂಠಿತಗೊಂಡಿರುವ ಪರಿಣಾಮ ಹೆಚ್ಚು ನೀರು ಇರುವ ಗೋಗರ್ಭ ಜಾಗದಲ್ಲಿ ಜನರು ಸೇರುತ್ತಾರೆ.ಈ ಗೋಗರ್ಭದಲ್ಲಿ ಮುಳುಗಿ ಹೊರಬಂದರೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ಈ ಸಲುವಾಗಿ ಹೆಣ್ಣುಮಕ್ಕಳು ಕೂಡ ಇಲ್ಲಿ ಸೇರಿ ಗೋಗರ್ಭದಲ್ಲಿ ಮುಳುಗಲು ಬರುತ್ತಾರೆ.ಈ ಸಂದರ್ಭವನ್ನು ಕಟುಂಬದಲ್ಲದ ಕೆಲವ ಯುವಕರು,ಪುರುಷರು ದುರುದ್ದೇಶಪೂರ್ವಕವಾಗಿ ಮಹಿಳೆಯರನ್ನು ನೀರಿನಲ್ಲಿ ಮುಳುಗಿಸಿ ಹೊರಬರುವ ವೇಳೆ ಅವರನ್ನು ಮತ್ತೆ ತಡೆದು ದಡಕ್ಕೆ ಸೇರಿಸುತ್ತಾರೆ.ಈ ಕೆಲಸಕ್ಕಾಗಿಯೇ ಕೆಲವು ಯುವಕರು ನೀರಿನಲ್ಲಿ ಈಜಾಡುತ್ತಾರೆ.
ರಕ್ಷಣಾ ಕ್ರಮ ಕೈಗೊಳ್ಳದ ಆಡಳಿತ : ದಕ್ಷಿಣ ಕಾಶೀ ಎಂದೇ ಕರೆಯುವ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿ ಹತ್ತಾರು ಪುರಾತನ,ಪುರಾಣ ಪ್ರಸಿದ್ಧ ದೇವಾಲಯಗಳು ಇವೆ.ಇಡೀ ವರ್ಷ ಪೂರ್ತಿ ರಥೋತ್ಸವ,ಉತ್ಸವ,ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಜಿಲ್ಲೆಯಲ್ಲಿಯೇ ರಾಮನಾಥಪುರ ಅತ್ಯಂತ ಪುಣ್ಯ ಸ್ಥಳವಾಗಿದೆ.ನದಿಯಲ್ಲಿ ನಿತ್ಯವೂ ನೂರಾರು ಮಂದಿ ಸ್ನಾನ ಮಾಡುತ್ತಾರೆ.ಹೆಣ್ಣು ಮಕ್ಕಳು ಕೂಡ ಸೇರಿದ್ದಾರೆ.ಇನ್ನೂ ಕೂಡ ಮಹಿಳೆಯರು,ಹೆಣ್ಣಮಕ್ಕಳು ಸ್ನಾನಮಾಡಿ ಬಟ್ಟೆಬದಲಿಸುವ ಕೇಂದ್ರಗಳನ್ನು ನಿರ್ಮಿಸಿಲ್ಲ.ದೇವರ ಪವಿತ್ರ ಸ್ಥಳವೆಂಬ ಕಾರಣಕ್ಕೆ ಎಲ್ಲವನ್ನು ಸಹ ಸಹಿಸಿಕೊಂಡಿದ್ದಾರೆ.ತಾಲೂಕು ಆಡಳಿತ ,ಸ್ಥಳೀಯ ಗ್ರಾಪಂ ಆಡಳಿತ,ದೇವಾಲಯ ಆಡಳಿತ ಮಂಡಳಿ ನದಿಯಲ್ಲಿ ಸ್ನಾನಮಾಡುವ ಮಹಿಳಾ ಭಕ್ತರಿಗೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಮಿಳುನಾಡಿನ ದೇವಾಲಯಗಳ ಬಳಿ ಹರಿಯುವ ಕಾವೇರಿ ನದಿಯ ಪ್ರವೇಶಧ್ವಾರಕ್ಕೆ ರಕ್ಷಣಾ ಗೇಟ್ಗಳನ್ನು ಅಳವಡಿಸಲಾಗಿದೆ.ಭಕ್ತರು ಸಂಪೂರ್ಣ ನದಿಗೆ ಹೋಗದಂತೆ ರಕ್ಷಣಾ ಕಂಬಿಗಳು ಇವೆ.ಇದರಿಂದ ನೀರು ಕಲುಶಿತಗೊಳ್ಳದಂತೆ ಕ್ರಮವಹಿಸಲಾಗಿದೆ.ಆದರೆ ರಾಮನಾಥಪುರ ದೇವಾಲಯ ಬಳಿ ಹರಿಯುವ ಕಾವೇರಿ ನದಿಯ ಪ್ರವೇಶಧ್ವಾರಕ್ಕೆ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿಲ್ಲ.ಈ ಸಲುವಾಗಿ ನದಿ ನೀರು ಮಲೀನತೆ ಹರಡಲು ಕಾರಣವಾಗಿದೆ.
ಸ್ವಚ್ಛತೆ ಕೈಗೊಳ್ಳುತ್ತಿರುವ ಸಮಿತಿ : ಹಲವು ವರ್ಷಗಳಿಂದಲೂ ಕೂಡ ಸ್ಥಳೀಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರು ಸ್ವಯಂಪ್ರೇರಿತವಾಗಿ ನದಿಯಲ್ಲಿ ಬಿಸಾಡಿ ಹೋಗಿರುವ ಬಟ್ಟೆ,ಅನುಪಯುಕ್ತ ತ್ಯಾಜ್ಯಗಳನ್ನು ಸ್ವಚ್ಛಮಾಡುತ್ತಾರೆ.ಈ ಸಂದರ್ಭದಲ್ಲಿ ಯಾರೂ ಕೂಡ ಅನಗತ್ಯ ವಸ್ತುಗಳನ್ನು ನೀರಿನಲ್ಲಿ ಹಾಕದೇ ಒಂದು ಕಡೆ ಇಡಿ ಎಂದು ಮನವರಿಕೆ ಮಾಡಿದರೂ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲ.ಈ ರೀತಿ ಸಂಗ್ರಹವಾಗುವ ತ್ಯಾಜ್ಯ ಹತ್ತಾರು ಗಾಡಿಯಷ್ಟು ಬರಿ ಬಟ್ಟೆಯ ಇರುತ್ತದೆ.ನದಿಯ ಪ್ರವೇಶಧ್ವಾರದಲ್ಲಿ ಮುನ್ನೆಚ್ಚರಿಕೆ ಕೈಗೊಂಡರೇ ನಿಯಂತ್ರಿಸಬಹುದಾಗಿದೆ.

ಜಿಲ್ಲಾಡಳಿತ,ಶಾಸಕರಲ್ಲಿ ಮನವಿ : ಕೊಡಗಿನ ತಲೆಕಾವೇರಿಯಿಂದ ಹರಿಯುವ ಕಾವೇರಿ ನದಿ ಕರ್ನಾಟಕ,ತಮಿಳುನಾಡು ರಾಜ್ಯಗಳ ಜೀವನದಿಯಾಗಿದೆ. ಕೋಟ್ಯಾಂತರ ಜನರಿಗೆ ನೀರುಣಿಸುವ ಜೀವದಾತೆ ಕಾವೇರಿ.ಈಗಾಗಲೇ ಮಲೀನತೆ ಹರಡಲಾಗುತ್ತಿದೆ.ಕನಿಷ್ಟ ಪುಣ್ಯ ಕ್ಷೇತ್ರಗಳ ವ್ಯಾಪ್ತಿಯಲ್ಲಾದರೂ ನೀರಿನ ಸ್ವಚ್ಛತೆ,ರಕ್ಷಣಾ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.ಈ ಸಲುವಾಗಿ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರಾದ ಎ.ಮಂಜು ಅವರು ಅಗತ್ಯ ರಕ್ಷಣಾ ಕ್ರಮ ಹಾಗೂ ಅವಶ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ರಾಮನಾಥಪುರ ಕಾವೇರಿ ನದಿ ಮಧ್ಯ ಭಾಗದಲ್ಲಿರುವ ಗೋಗರ್ಭಕ್ಕೆ ಪುರಾಣ ಪ್ರಸಿದ್ಧ ಇತಿಹಾಸವಿದೆ.ಈ ಹಿಂದೆ ಶ್ರೀಲಂಕೆಯಲ್ಲಿ ಶ್ರೀರಾಮ ಲಂಕಾಧಿಪತಿಯಾದ ರಾವಣನನ್ನು ಕೊಂದ ಪಾಪದ ಪರಿಹಾರಕ್ಕಾಗಿ ಶ್ರೀರಾಮ ಹಾಗೂ ಅವರ ಪರಿವಾರದವರು ಬಂದು ಈ ಗೋಗರ್ಭದಲ್ಲಿ ನುಸುಳಿ ಸ್ನಾನ ಮಾಡಿ ಪಾಪ ಕಳೆದುಕೊಂಡರು ಎಂಬ ಪ್ರತೀತೆ ಇದೆ.ಇಂತಹ ಪುಣ್ಯ ಸ್ಥಳದಲ್ಲಿ ಕೆಲ ಯುವಕರು ಬಂದು ಮದ್ಯಪಾನ ಮಾಡಲು ಮುಂದಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನದಿಯಲ್ಲಿ ಪುಣ್ಯಸ್ನಾನ ಮಾಡಿ ಪಾಪ ಕಳೆದುಕೊಂಡು ಹೋಗಲಿಕ್ಕೆ ಬಂದಂತಹ ಭಕ್ತರಿಗೆ ತೊಂದರೆ ಕೊಟ್ಟು ಪಾವಿತ್ರತೆಯನ್ನು ಹಾಳು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕಿದೆ.
–ಸಿದ್ದರಾಜು,ಗ್ರಾಪಂ ಮಾಜಿ ಉಪಾಧ್ಯಕ್ಷರು,(ಹೇಳಿಕೆ)
ಈಗಲಾದರೂ ಕಾವೇರಿ ನದಿಯ ಪಾವಿತ್ರತೆ ಸಂರಕ್ಷಿಸಲು ಮತ್ತು ಮಲಿನ ತಪ್ಪಿಸಲು ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು,ಗ್ರಾಪಂ ಆಡಳಿತ ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿ ಸಭೆಯನ್ನು ಕರೆದು ನದಿ ರಕ್ಷಣೆಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕಿದೆ.
ಶ್ರೀ ಕಾಳಬೋಯಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ .
ವರದಿ. – ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
