ಬೆಂಗಳೂರು, ಸೆ.10: ಕರ್ನಾಟಕದ ಫಿನ್ಟೆಕ್ ಹಾಗೂ ಡಿಜಿಟಲ್ ವಾಣಿಜ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಪಾವತಿ ಪರಿಹಾರಗಳ ಸಂಸ್ಥೆ ಕ್ಯಾಶ್ಫ್ರೀ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಮುಂದಾಗಿವೆ.
ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2026ರ ಸಂದರ್ಭದಲ್ಲಿ ಎರಡೂ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಸಹಯೋಗದ ಮೂಲಕ ರಾಜ್ಯದ ಸ್ಟಾರ್ಟಪ್ಗಳಿಗೆ ಡಿಜಿಟಲ್ ಪಾವತಿ ಮೂಲಸೌಕರ್ಯ, ಉದ್ಯಮ ಪರಿಣತಿ, ಮಾರ್ಗದರ್ಶನ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನಾವೀನ್ಯತೆಗಳಿಗೆ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಕೆಡಿಇಎಂ ಇನ್ಕ್ಯುಬೇಷನ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಅರ್ಹ ಸ್ಟಾರ್ಟಪ್ಗಳಿಗೆ ಪೇಮೆಂಟ್ ಗೇಟ್ವೇ, ನೇರ ಪಾವತಿ ಹಾಗೂ ಅಂತರರಾಷ್ಟ್ರೀಯ ಪಾವತಿ ಸೇವೆಗಳಲ್ಲಿ ರಿಯಾಯಿತಿಗಳನ್ನು ಒದಗಿಸಲಾಗುತ್ತದೆ. ಆರಂಭಿಕ ಸೆಟಪ್ ಹಾಗೂ ವಾರ್ಷಿಕ ನಿರ್ವಹಣಾ ಶುಲ್ಕವಿಲ್ಲದೆ ಸೇವೆಗಳನ್ನು ಪಡೆಯುವ ಅವಕಾಶದ ಜೊತೆಗೆ, 12 ತಿಂಗಳವರೆಗೆ ಎಂಡಿಆರ್-ಮುಕ್ತ ವಹಿವಾಟಿನ ಕ್ರೆಡಿಟ್ಗಳು ಮತ್ತು ಮೀಸಲಾದ ಖಾತೆ ನಿರ್ವಾಹಕರ ನೆರವು ದೊರೆಯಲಿದೆ.
ಇದರೊಂದಿಗೆ ಕ್ಯಾಶ್ಫ್ರೀಯ ಒನ್-ಕ್ಲಿಕ್ ಚೆಕ್ಔಟ್, ರಿಸ್ಕ್ ಶೀಲ್ಡ್ ಮತ್ತು ಸೆಕ್ಯೂರ್ ಐಡಿ ತಂತ್ರಜ್ಞಾನಗಳನ್ನು ಆರು ತಿಂಗಳ ಕಾಲ ಉಚಿತವಾಗಿ ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಅವಕಾಶವೂ ಅರ್ಹ ಸ್ಟಾರ್ಟಪ್ಗಳಿಗೆ ಲಭ್ಯವಾಗಲಿದೆ.
ಸಹಭಾಗಿತ್ವದಡಿ ಕರ್ನಾಟಕ ಆಕ್ಸಿಲರೇಟರ್ ನೆಟ್ವರ್ಕ್ (ಕೆಎಎನ್)ಗೆ ಕ್ಯಾಶ್ಫ್ರೀ ಮೂಲಸೌಕರ್ಯ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ. ಕೆಡಿಇಎಂನ ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ (ಲೀಪ್) ಹಾಗೂ ಉತ್ಕೃಷ್ಟತಾ ಕೇಂದ್ರಗಳಲ್ಲಿಯೂ ಪಾವತಿ ಮತ್ತು ಅನುಷ್ಠಾನ ಪಾಲುದಾರನಾಗಿ ಸಂಸ್ಥೆ ಕೈಜೋಡಿಸಲಿದೆ.
ಈ ಕುರಿತು ಮಾತನಾಡಿದ ಕ್ಯಾಶ್ಫ್ರೀ ಸಹ-ಸಂಸ್ಥಾಪಕ ರೀಜು ದತ್ತಾ, ಕರ್ನಾಟಕದ ಬಲಿಷ್ಠ ಸ್ಟಾರ್ಟಪ್ ಪರಿಸರ ವ್ಯವಸ್ಥೆಯೇ ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಕೆಡಿಇಎಂ ಜತೆಗಿನ ಸಹಭಾಗಿತ್ವದ ಮೂಲಕ ರಾಜ್ಯದ ನವೋದ್ಯಮ ಪರಿಸರಕ್ಕೆ ತಮ್ಮ ಪರಿಣತಿಯನ್ನು ಮರಳಿ ನೀಡಲು ಉತ್ಸುಕರಾಗಿರುವುದಾಗಿ ತಿಳಿಸಿದರು.
ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಮಾತನಾಡಿ, ಬೆಂಗಳೂರಿಗೆ ಸೀಮಿತವಾಗಿರುವ ಉದ್ಯಮ, ತಂತ್ರಜ್ಞಾನ ಮತ್ತು ಕೈಗಾರಿಕಾ ಅವಕಾಶಗಳನ್ನು ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೂ ವಿಸ್ತರಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಕ್ಯಾಶ್ಫ್ರೀಯ ತಂತ್ರಜ್ಞಾನ ಮತ್ತು ಉದ್ಯಮ ಪರಿಣತಿ ರಾಜ್ಯದ ಹೊಸ ಸ್ಟಾರ್ಟಪ್ ಕ್ಲಸ್ಟರ್ಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಹಭಾಗಿತ್ವದ ಭಾಗವಾಗಿ ಪ್ರತಿ ವರ್ಷ ಕನಿಷ್ಠ ಒಂದು ರಾಜ್ಯಮಟ್ಟದ ಹ್ಯಾಕಥಾನ್ ಅಥವಾ ಎಐ ಬಿಲ್ಡಥಾನ್ ಆಯೋಜಿಸಲು ನಿರ್ಧರಿಸಲಾಗಿದೆ. ಆನ್ಲೈನ್ ಪಾವತಿ, ಡಿಜಿಟಲ್ ವಂಚನೆ ಪತ್ತೆ, ಆರ್ಥಿಕ ಮೂಲಸೌಕರ್ಯ ಹಾಗೂ ವಾಣಿಜ್ಯದಲ್ಲಿ ಎಐ ಬಳ
