ಕೆ.ಆರ್.ಪೇಟೆ: ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ಶಾಸಕರಿಗೆ ಸರಿಯಾಗಿ ಅನುಧಾನ ನೀಡದೇ ಇರುವ ತಾಲ್ಲೂಕಿನ ಅಭಿವೃದ್ದಿ ನನ್ನ ನೀರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ. ಮುಂದೆ 2028ಕ್ಕೆ ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ತಾಲ್ಲೂಕಿನ ಜನತೆ ಮತ್ತೊಮ್ಮೆ ಕ್ಷೇತ್ರದ ಶಾಸಕನಾಗಲು ಅವಕಾಶ ನೀಡಿದರೆ, ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿ, ಕ್ಷೇತ್ರದ ಎಲ್ಲಾ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊಟಗಹಳ್ಳಿ, ರಂಗನಾಥಪುರ, ಆದಿಹಳ್ಳಿ, ಹೆತ್ತಗೋನಹಳ್ಳಿ, ಯಲಾದಹಳ್ಳಿ ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಾನು ಈ ಅವಧಿಯಲ್ಲಿ ಶಾಸಕನಾಗಿರುವುದು ನನಗೆ ತೃಪ್ತಿ ತಂದಿಲ್ಲ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಒಂದೇ ಒಂದು ಆಶ್ರಯ ಮನೆ ಮಂಜೂರು ಮಾಡಿಲ್ಲ. ರೈತರ ಜೀವನಾಡಿಯಾಗಿರುವ 2022ರಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಒಡೆದು ಹೋಗಿರುವ ಹಲವು ಕರೆಗಳ ಅಭಿವೃದ್ಧಿಗೆ ಅನುಧಾನ ನೀಡಿಲ್ಲ. ಕೊಚ್ಚಿ ಹೋಗಿರುವ ಸೇತುವೆಗಳ ಅಭಿವೃದ್ಧಿಗೆ ಅನುಧಾನ ನೀಡಿಲ್ಲ ಇದರಿಂದಾಗಿ ತಾಲ್ಲೂಕಿನ ಜನತೆ ರಾಜ್ಯ ಸರ್ಕಾರದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಗೆ ಏತ ನೀರಾವರಿ ಯೋಜನೆಯನ್ನು ಸ್ಪೀಕರ್ ಆಗಿದ್ದ ಕೃಷ್ಣ ಅವರ ಒತ್ತಾಸೆಯಂತೆ ಆಶಯದಂತೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು ಮಂಜೂರು ಮಾಡಿದ್ದರು. ನಂತರ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಸೂಕ್ತ ಅನುಧಾನ ನೀಡಿದ್ದರು. ಈಗ ಕಾಮಗಾರಿಯು ಶೇ.80ರಷ್ಟು ಮುಗಿದಿದ್ದು ಮುಕ್ತಾಯ ಹಂತದಲ್ಲಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳೆಯಾಶ್ರಿತ ಹೋಬಳಿಯಾದ ಸಂತೇಬಾಚಹಳ್ಳಿ ಹೋಬಳಿಗೆ ಏತನೀರಾವರಿ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಇದರ ಪ್ರತಿಫಲವಾಗಿ ಏನ ನೀರಾವರಿ ಕಾಮಗಾರಿ ಪುನರರಾಂಭಗೊಂಡಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಮುಗಿಯಲಿದ್ದು ಉದ್ಘಾಟನೆ ಮಾಡಿಸಿ ಸಂತೇಬಾಚಹಳ್ಳಿ ಹೋಬಳಿಯ ಜನತೆಗೆ ಹಾಗೂ ನಾಗಮಂಗಲ ತಾಲ್ಲೂಕಿನ ಹಲವು ಕೆರೆ ಕಟ್ಟೆಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರೂ ಸಹ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ಒಟ್ಟಾರೆ ಈ ಯೋಜನೆಯ ಕ್ರೆಡಿಟ್ ಯಾರಿಗಾದರೂ ಹೋಗಲಿ ನನಗೆ ಮಾತ್ರ ನನ್ನ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜನತೆಗೆ ನೀರಾವರಿ ಸೌಲಭ್ಯ ಸಿಕ್ಕರೆ ಅದೇ ನನಗೆ ಹೆಚ್ಚು ಸಂತೋಷ ಸಿಗಲಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲೇನಹಳ್ಳಿ ಎಂ.ಮೋಹನ್, ನಾಗರಘಟ್ಟ ದೀಲೀಪ್ಕುಮಾರ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ಸಾಮಿಲ್ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಧಾನಾಗೇಶ್, ಹೊಸಹಳ್ಳಿ ಉದಯಕುಮಾರ್, ಸಾರಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾನವೀನ್ಕುಮಾರ್, ಗ್ರಾ.ಪಂ.ಸದಸ್ಯರಾದ ರಮೇಶ್, ನಂಜಪ್ಪ, ಮಂಜೇಗೌಡ, ಬಸವರಾಜು, ರವಿಕುಮಾರ್, ಹೆತ್ತಗೋನಹಳ್ಳಿ ಮಹೇಶ್, ಚಲುವೇಗೌಡ, ಯಲಾದಹಳ್ಳಿ ನಾಗರಾಜು, ಸಾರಂಗಿ ಗ್ರಾಮ ಪಂಚಾಯಿತಿ ಪಿಡಿಓ ವಿನೋದ್, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ಪಿಡಿಓ ನವೀನ್, ಚೆಸ್ಕಾಂ ಇಂಜಿನಿಯರ್ ಶಿವಶಂಕರಮೂರ್ತಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆದಿಹಳ್ಳಿ ಗ್ರಾಮಸ್ಥರು ಶಾಸಕ ಮಂಜು ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಚಿತ್ರಶೀರ್ಷಿಕೆ:05.ಕೆ.ಆರ್.ಪಿ-03: ಕೆ.ಆರ್.ಪೇಟೆ: ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊಟಗಹಳ್ಳಿ, ರಂಗನಾಥಪುರ, ಆದಿಹಳ್ಳಿ, ಹೆತ್ತಗೋನಹಳ್ಳಿ, ಯಲಾದಹಳ್ಳಿ ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹೆಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
=========================================
ವರದಿ : ಶ್ರೀನಿವಾಸ್ ಆರ್
