ಕೆ.ಆರ್.ಪೇಟೆ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಟೌಟ್ಗೆ ಪುಷ್ಪ – ಕ್ಷೀರಾಭಿಷೇಕ ಮಾಡಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಪಟ್ಟಣದ ಹೇಮಾವತಿ ವೃತ್ತ ಬಳಿ *ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್* ಅವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಕಟೌಟ್ಗೆ ಹಾಲು, ಹೂವುಗಳಿಂದ ಅಭಿಷೇಕ ಮಾಡಿ,ರೈತರಿಗೆ ಜನರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
*ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್* ನಮ್ಮ ನೆಚ್ಚಿನ ನ್ಯಾಯಕ ಸಿ.ಎಂ,ಡಿ.ಕೆ. ಶಿವಕುಮಾರ್ ಅವರು ಕೇವಲ ನಾಯಕರಲ್ಲ,ಕಾಂಗ್ರೆಸ್ ಪಕ್ಷದ ಜೀವಾಳ. 30 ವರ್ಷಕ್ಕೂ ಹೆಚ್ಚು ಕಾಲ ಒಂದೇ ಪಕ್ಷದಲ್ಲಿ, ಒಂದೇ ನಿಷ್ಠೆಯಿಂದ ದುಡಿದಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ರಾಜಕೀಯಕ್ಕೆ ಕಾಲಿಟ್ಟ ದಿನದಿಂದ ಇವತ್ತಿನ ಕೆಪಿಸಿಸಿ ಅಧ್ಯಕ್ಷರವರೆಗೂ ಪಕ್ಷಕ್ಕಾಗಿ ಹಗಲು-ರಾತ್ರಿ ಶ್ರಮಿಸಿದ್ದಾರೆ. ವಿರೋಧ ಪಕ್ಷದ ಕುತಂತ್ರದಿಂದ ಜೈಲು ಶಿಕ್ಷೆ ಅನುಭವಿಸಿದಾಗಲೂ,ರಾಜಕೀಯ ಸಂಕಷ್ಟ ಎದುರಾದಾಗಲೂ ಪಕ್ಷ ಬಿಡದೇ ನಿಷ್ಠೆಯಿಂದ ನಿಂತರು.ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಸಂಘಟನೆ ಮಾಡಿ, ಸೋತಿದ್ದ ಕಾಂಗ್ರೆಸ್ಗೆ ಮತ್ತೆ ಜೀವ ತುಂಬಿದ ಕೀರ್ತಿ ಅವರದ್ದು. ಕಷ್ಟದಲ್ಲಿರುವ ಕಾರ್ಯಕರ್ತನ ಮನೆಗೆ ನೇರವಾಗಿ ಹೋಗಿ ಸಾಂತ್ವನ ಹೇಳುವ ಗುಣ ಜೊತೆಗೆ ತಾಳ್ಮೆ, ಸಂಘಟನಾ ಚಾತುರ್ಯ, ದುಡಿಮೆ – ಇವೆಲ್ಲವೂ ಸೇರಿ ಇವತ್ತು ಮುಖ್ಯಮಂತ್ರಿ ಕುರ್ಚಿ ತಲುಪಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕ ರೈತ, ಯುವಕ, ಮಹಿಳೆ ಎಲ್ಲರಿಗೂ ನ್ಯಾಯ ಸಿಗಲಿದೆ” ಎಂದು ಬಣ್ಣಿಸಿದರು.

ಬಳಿಕ ಮಾತನಾಡಿದ ಜಿ. ಪಂ ಮಾಜಿ ಸದಸ್ಯ ಬಿ.ಎಲ್ ದೇವರಾಜು ಅಭಿ ಡಿ.ಕೆ. ಶಿವಕುಮಾರ್ ಅವರ ತಾಳ್ಮೆ ಹಾಗೂ ಸುದೀರ್ಘ ಪಕ್ಷ ನಿಷ್ಠೆ ಎಲ್ಲರಿಗೂ ಮಾದರಿ.ಅವರ ನೇತೃತ್ವದಲ್ಲಿ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಕಾಣಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಿ.ಎಲ್ ದೇವರಾಜು, ತಾ.ಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಪುರಸಭೆ ಮಾಜಿ ಸದಸ್ಯ ಡಿ. ಪ್ರೇಮ್ ಕುಮಾರ್, ಕೃಷಿಕ ಸಮಾಜ ನಿರ್ದೇಶಕ ಅಶೋಕ್,ಹೆತ್ತೋಗೋನಹಳ್ಳಿ ನಾರಾಯಣಪ್ಪ,ಹಿರಿಯ ಮುಖಂಡ ವೆಂಕಟಪ್ಪ, ಯುವ ಮುಖಂಡ ದೊಡ್ಡಗಾಡಿಗನಹಳ್ಳಿ ಲೋಕೇಶ್,ಹಾಗೂ ಕೆ.ಆರ್.ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯ ಕೋರಿದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
