ಬೆಂಗಳೂರು, ಜೂನ್ 4:* ಡಿಜಿಟಲ್ ಲೋಕದಲ್ಲಿ ಬದುಕುತ್ತಿರುವ ಇಂದಿನ ಜೆನ್ Z (Gen Z) ಯುವಕರು ತಮಗೆ ಬೇಡವಾದ ಆನ್ಲೈನ್ ಕಂಟೆಂಟ್ಗಳನ್ನು ಸುಲಭವಾಗಿ ಮ್ಯೂಟ್, ಬ್ಲಾಕ್ ಅಥವಾ ಸ್ಕಿಪ್ ಮಾಡಿಬಿಡುತ್ತಾರೆ. ಆದರೆ, ನೈಜ ಜೀವನದಲ್ಲಿ ಎದುರಾಗುವ ಮುಜುಗರದ ಕ್ಷಣಗಳನ್ನು ಹೀಗೆ ‘ಸ್ಕಿಪ್’ ಮಾಡಲು ಸಾಧ್ಯವಿಲ್ಲ. ಇದೇ ವಿಶಿಷ್ಟ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಸಿದ್ಧ ಸ್ನ್ಯಾಕಬಲ್ ಡ್ರಿಂಕ್ ಬ್ರ್ಯಾಂಡ್ ಮೊಗು ಮೊಗು (Mogu Mogu), ಭಾರತದಲ್ಲಿ ತನ್ನ ಹೊಸ ಜಾಗತಿಕ ಅಭಿಯಾನ “ವಾನಾ ಸ್ಕಿಪ್? ಯು ಗಾಟಾ ಚ್ಯೂ” (Wanna Skip? You Gotta Chew) ಅನ್ನು ಸೋಮವಾರ ಸಂಜೆ 6 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಥೈಲ್ಯಾಂಡ್ ಮೂಲದ ಸಪ್ಪೆ ಪಬ್ಲಿಕ್ ಕಂಪನಿ ಲಿಮಿಟೆಡ್ (SAPPE) ರೂಪಿಸಿರುವ ಈ ಅಭಿಯಾನವು, ಜಾಗತಿಕ ಮಟ್ಟದಲ್ಲಿ ಜೆನ್ Z ಯುವಕರ ನೈಜ ಜೀವನದ ಕುರಿತು ನಡೆಸಿದ ಆಳವಾದ ಅಧ್ಯಯನದ ಆಧಾರದ ಮೇಲೆ ಮೂಡಿಬಂದಿದೆ. ಈ ಅಧ್ಯಯನದಲ್ಲಿ ಯುವಕರು ದಿನನಿತ್ಯ ಸಾರ್ವಜನಿಕ ಸಾರಿಗೆಯಲ್ಲಿ ಅಪರಿಚಿತರೊಂದಿಗೆ ಅನಿರೀಕ್ಷಿತವಾಗಿ ಕಣ್ಣಿಗೆ ಕಣ್ಣು ಬಿಡುವುದು, ಪ್ರವಾಸದ ಸಮಯದಲ್ಲಿ ಜೋಡಿಗಳ ಮಧ್ಯೆ ಒಬ್ಬರೇ ಸಿಂಗಲ್ ಆಗಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಟಿಂಡರ್ನಲ್ಲಿ ಕಂಡ ಪ್ರೊಫೈಲ್ ಚಿತ್ರಕ್ಕೂ ನೈಜವಾಗಿ ಭೇಟಿಯಾದ ವ್ಯಕ್ತಿಗೂ ಸಾಮ್ಯತೆ ಇಲ್ಲದಿರುವಂತಹ ಪ್ರಮುಖ ಮುಜುಗರದ ಸಂದರ್ಭಗಳನ್ನು ಗುರುತಿಸಲಾಗಿದೆ.
ಇಂತಹ ಪರಿಸ್ಥಿತಿಗಳನ್ನು ನೈಜ ಜೀವನದಲ್ಲಿ ‘ಸ್ಕಿಪ್’ ಮಾಡಲು ಸಾಧ್ಯವಿಲ್ಲದಿದ್ದಾಗ, ಮೊಗು ಮೊಗು ಪಾನೀಯವನ್ನು ‘ಚ್ಯೂ’ (ಮೆಲ್ಲುವ) ಮಾಡುವ ಮೂಲಕ ಆ ಪರಿಸ್ಥಿತಿಯನ್ನು ಕೂಲ್ ಆಗಿ ಎದುರಿಸಿ ಎಂಬ ಸಂದೇಶವನ್ನು ಬ್ರ್ಯಾಂಡ್ ನೀಡುತ್ತಿದೆ. ಬ್ರ್ಯಾಂಡ್ನ ಸಿಗ್ನೇಚರ್ ಶೈಲಿಯಾದ ‘ಸಿಪ್ ಅಂಡ್ ಚ್ಯೂ (Sip and Chew) ಅನುಭವವೇ ಈ ಅಭಿಯಾನದ ಜೀವಾಳವಾಗಿದೆ. ಪಾನೀಯವನ್ನು ಚವೆಯುವುದರಿಂದ ಒತ್ತಡ ಕಡಿಮೆಯಾಗಿ, ಮೂಡ್ ಫ್ರೆಶ್ ಆಗುತ್ತದೆ ಎಂಬ ಅಂಶವನ್ನು ಕಂಪನಿ ಇಲ್ಲಿ ಹೈಲೈಟ್ ಮಾಡಿದೆ.
ಈ ಅಭಿಯಾನದ ಭಾಗವಾಗಿ ಮೊಗು ಮೊಗು ಭಾರತದಲ್ಲಿ ತನ್ನ ಅತಿ ದೊಡ್ಡ ಉತ್ಪನ್ನ ವಿಸ್ತರಣೆಯನ್ನು ಪ್ರಕಟಿಸಿದ್ದು, ಮಾರುಕಟ್ಟೆಗೆ ಮೊದಲ ಬಾರಿಗೆ ಮೊಗು ಮೊಗು ಕ್ಯಾಂಡಿ ಹಾಗೂ ಮೊಗು ಮೊಗು ಐಸ್ ಟೀ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಭಾರತದ ವಿತರಕ ಸಂಸ್ಥೆಯಾದ ಸನ್ಬೀಮ್ ವೆಂಚರ್ಸ್ ಸಂಸ್ಥಾಪಕ ವಿಕಾಶ್ ಸಿಂಘಲ್ ಮಾತನಾಡಿ, ಭಾರತದಲ್ಲಿ ಲಿಚಿ, ಸ್ಟ್ರಾಬೆರಿ ಮತ್ತು ಗ್ರೇಪ್ ಫ್ಲೇವರ್ಗಳು ಸದಾ ಮುಂಚೂಣಿಯಲ್ಲಿದ್ದು, ಇತ್ತೀಚೆಗೆ ಲಾಂಚ್ ಆದ ಬ್ಲ್ಯಾಕ್ಕರಂಟ್ ಕೂಡ ಭಾರೀ ಜನಪ್ರಿಯತೆ ಗಳಿಸಿದೆ ಎಂದು ತಿಳಿಸಿದ್ದಾರೆ.
ಈ ಜಾಗತಿಕ ಅಭಿಯಾನವು ಭಾರತದಲ್ಲಿ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಪ್ರಮುಖ ಡಿಜಿಟಲ್ ವೇದಿಕೆಗಳಲ್ಲಿ ಸವಿಸ್ತಾರವಾಗಿ ನಡೆಯಲಿದ್ದು, ಪ್ರಭಾವಿ ಇನ್ಫ್ಲುಯೆನ್ಸರ್ಗಳ ಸಹಭಾಗಿತ್ವ ಮತ್ತು ಇ-ಕಾಮರ್ಸ್ ಕೊಡುಗೆಗಳ ಮೂಲಕ ದೇಶದ ಶೇ. 80 ಕ್ಕೂ ಹೆಚ್ಚು ಜೆನ್ Z ಯುವಸಮೂಹವನ್ನು ತಲುಪುವ ಗುರಿಯನ್ನು ಹೊಂದಿದೆ.
ಸಪ್ಪೆ ಪಬ್ಲಿಕ್ ಕಂಪನಿ ಲಿಮಿಟೆಡ್ನ ಸಿಇಒ ಪಿಯಾಜಿತ್ ರುಕ್ಕರಿಯಾಪೋಂಗ್ ಮಾತನಾಡಿ, ಜೆನ್ Z ಯುವಕರು ಜಾಗತಿಕ ಟ್ರೆಂಡ್ಗಳನ್ನು ಮುನ್ನಡೆಸುವ ಶಕ್ತಿಯಾಗಿದ್ದು, ಅವರಿಗೆ ಹೊಸ ಅನುಭವ ಮತ್ತು ನೈಜತೆ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ. ನಮಗೆ ಭಾರತವು ಜಾಗತಿಕವಾಗಿ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದ್ದು, ಇಲ್ಲಿ ದೀರ್ಘಕಾಲೀನ ಹೂಡಿಕೆಗೆ ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ವಿಶ್ವದ ಮೊದಲ ‘ನಾಟಾ ಡಿ ಕೋಕೋ’ (Nata de Coco) ಒಳಗೊಂಡ ಹಣ್ಣಿನ ಜ್ಯೂಸ್ ಪಾನೀಯವಾಗಿರುವ ಮೊಗು ಮೊಗು, ಪ್ರಸ್ತುತ 100ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದ್ದು, ಭಾರತದ ಪ್ರಮುಖ ಆಧುನಿಕ ಮಳಿಗೆಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ.
