ರಾಮನಾಥಪುರ- ಸಂಗೀತ ಗ್ರಾಮವೆಂದೆ ಪ್ರಸಿದ್ಧಿ ಪಡೆದಿರುವ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಜನಮನ್ನಣೆ ಪಡೆದಿರುವ ರುದ್ರಪಟ್ಟಣದ ಶ್ರೀ ರಾಮಮಂದಿರದಲ್ಲಿ “ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ “ ವತಿಯಿಂದ 23 ನೇ ವಾರ್ಷಿಕ ಸಂಗೀತೋತ್ಸವದ ಪ್ರಥಮ ದಿವಸದ ಸಂಜೆ ಕಾರ್ಯಕ್ರಮ ವಿದ್ವಾನ್ ಡಾ. ಅರ್.ಕೆ. ಪದ್ಮನಾಭ ಅವರ ದಿವ್ಯ ಸಾನಿಧ್ಯದಲ್ಲಿ 8 ನೇ ಕಭೇರಿಯಲ್ಲಿ ವಿದುಷಿ. ಜೆ. ಯೋಗವಂದನ ವೀಣೆ, ವಿ. ಅದಿತಿ ಕೃಷ್ಣಪ್ರಸಾದ್ ಪಿಟೀಲ್, ವಿ. ಸ್ಮಿತಾ ಶ್ರೀಕಿರಣ್ ಕೊಳಲು, ವಿ. ದೀಪಿಕಾ ಶ್ರೀನಿವಾಸನ್ ಮೃದಂಗ, ವಿ. ಭಾಗ್ಯಲಕ್ಷ್ಮೀಕೃಷ್ಣ ಮೋರ್ಚಿಂಗ್ ಅಮೋಘವಾಗಿ ನಡೆಸಿಕೊಟ್ಟರು
ಗಾನ ಕಲಾ ಭೂಷಣ ಡಾ. ವಿದ್ವಾನ್ ಅರ್. ಕೆ. ಪದ್ಮನಾಭ ಅವರು ಮಾತನಾಡಿ ಜೀವನದಲ್ಲಿ ಹದತರುವ ಮುದಕೊಡುವ ಸಂಗೀತ ಕಲೆ ಸೆಲೆ ಬತ್ತದೆ ಜೋವಂತವಾಗಿರಲು ಸಂಗೀತಾರಧನೆ, ನಿರಂತರವಾಗಿ ನಡೆಯಲು ಶ್ರೋತೃಗಳು ಬಂದೂಗಳು, ಮಿತ್ರರೂ ಅದ ನಿಮ್ಮಗಳೆಲ್ಲರ ಹೃದಯ ವೈಶಾಲವೇ ಕಾರಣ ಎಂದು ವಿ. ಅರ್.ಕೆ.ಪಿ. ತಿಳಿಸಿದರು. ಮೈಸೂರು ಅರ್.ಸಿ. ರಮಾ ಅವರು ಸ್ವಾಗತಿಸಿ, ನಿರೂಪಿಸಿದರು.
