ರಾಮನಾಥಪುರ – ರಾಜ್ಯದಲ್ಲಿ ಈ ಹಿಂದೆ ನಾನು ಸಚಿವನಾಗಿದ್ದ ಸಮಯದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಸದುದ್ದೇಶದಿಂದ 5 ರೂಪಾಯಿಗೆ ಸಹಾಯಧನ ಹೆಚ್ಚಿಸಿದ್ದಾಗಿ ಹಿಂದಿನ ಹೈನುಗಾರಿಕೆ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ತಿಳಿಸಿದರು.

ದೊಡ್ಡಮಗ್ಗೆ ಹೋಬಳಿ ಲಕ್ಷ್ಮಿಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ರೈತರುಗಳು ಕೃಷಿ ಬೆಳೆಯ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮನವಿ ಮಾಡಿದ ಅವರು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗಿತ್ತು. ಖಾಸಗಿ ಡೈರಿಗಳಿಗೆ ಅವಲಂಬಿತರಾಗದೆ ಮಹಿಳಾ ಸಹಕಾರ ಸಂಘದ ಡೈರಿಗಳಿಗೆ ಹಾಲು ಹಾಕುವ ಮುಖಾಂತರ ಸರ್ಕಾರದ ಸಹಾಯಧನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರಕಲಗೂಡು ತಾಲ್ಲೂಕು ಜೆ.ಡಿಎಸ್ ಅಧ್ಯಕ್ಷರು ಹೊನ್ನವಳ್ಳಿ ಸತೀಶ್ ಮುಂತಾದವರು ಇದ್ದರು.
ವರದಿ : ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
