ತುಮಕೂರು : ಕ್ಯಾನ್ಸರ್ ಖಾಯಿಲೆಯನ್ನು ಯಾರೂ ಸಹ ನಿರ್ಲಕ್ಷಿಸಬಾರದು,ಸೂಕ್ತ ಸಮಯದಲ್ಲಿ ಸೂಕ್ತ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರುಗಳಿಂದ ಪಡೆದರೆ ಕ್ಯಾನ್ಸರ್ ನ್ನು ಗುಣಪಡಿಸಬಹುದು,ನಿರ್ಲಕ್ಷಿಸಿದರೆ ಜೀವಕ್ಕೆ ತೊಂದರೆ ಇರುತ್ತದೆ,ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ,ಹೆಣ್ಣು ಮಕ್ಕಳು ಖಾಯಿಲೆಗಳನ್ನು ಮುಚ್ಚಿಡಬಾರದು ತಜ್ಞ ವೈದ್ಯರುಗಳಿಂದ ತಪಾಸಣೆ ಮಾಡಿಸಿಕೊಂಡು ಅವರಿಂದ ಮಾರ್ಗದರ್ಶನ ಪಡೆದರೆ ಖಾಯಿಲೆಗಳನ್ನು ಹೊಡೆದೋಡಿಸಬಹುದು,ಎಲ್ಲರೂ ಸಹ ವರ್ಷಕ್ಕೊಮ್ಮೆ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು ಆಗ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಕಾರ್ಯದರ್ಶಿ ನಾಗರತ್ನರವರು ತಿಳಿಸಿದರು.
ಅವರು ಇಂದು ಜಿಲ್ಲಾ ಬ್ರಾಹ್ಮಣ ಸಭಾ ತುಮಕೂರು ಹಾಗೂ ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರುಗಳ ಸಹಯೋಗದಲ್ಲಿ ನಗರದ 31ನೇ ವಾರ್ಡ್ನ ಜಯನಗರ ಪಶ್ಚಿಮದಲ್ಲಿರುವ ವಿಪ್ತಭವನದಲ್ಲಿ ಉಚಿತ ಕ್ಯಾನ್ಸರ್ ಹಾಗೂ ಗರ್ಭ ಕೋಶದ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಜಿಲ್ಲಾ ಬ್ರಾಹ್ಮಣಸಭಾದ ಅಧ್ಯಕ್ಷರಾದ ಹೆಚ್.ಎಂ. ಚಂದ್ರಶೇಖರ್ಹೆಬ್ಬಾಳ್ ರವರು ಕ್ಯಾನ್ಸರ್ ಒಂದು ಪಿಡುಗಾಗಿ ಹೊರಹೊಮ್ಮುತ್ತಿದೆ, ದಿನೇ ದಿನೇ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ,ಎಲ್ಲರೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು,ತಂಬಾಕು,ಬೀಡಿ ಸಿಗರೇಟುದಂತಹ ವ್ಯಸನಗಳಿಂದ ದೂರವಿರಬೇಕು ಆಗ ಕ್ಯಾನ್ಸರ್ ಬರುವುದಿಲ್ಲ,ಕ್ಯಾನ್ಸರ್ ಒಂದು ಮಾರಣಾಂತಿಕ ಖಾಯಿಲೆ ಆಗಿದೆ ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಬ್ರಾಹಣ ಮಹಾಸಭಾ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಜಂಟಿಯಾಗಿ ಉಚಿತ ಕ್ಯಾನ್ಸರ್ ಹಾಗೂ ಗರ್ಭಕೋಶ ತಪಾಸಣಾ ಶಿಬಿರವನ್ನು ಮಾಡುತ್ತಿದ್ದೇವೆ ನಗರದ ಎಲ್ಲ ಸಾರ್ವಜನಿಕರು ಇದನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಿದ್ದಾರ್ಥ ಮೆಡಿಕಲ್ ಕಾಲೇಜ್ ವೈದ್ಯರಾದ ಡಾ.ದೀಪಶ್ರೀ ಹಾಗೂ ಡಾ. ಅರವಿಂದ್ ಕ್ಯಾನ್ಸರ್ ಗೆ ಸಂಬಂಧಪಟ್ಟ ಸೂಕ್ಷ್ಮವಾದ ವಿಷಯಗಳನ್ನು ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಅಧ್ಯಕ್ಷರಾದ ನಾಗರಾಜ್, ಮಾಜಿ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಸ್ ಹರೀಶ,ಬ್ರಾಹ್ಮಣ ಸಭಾದ ನಿರ್ದೇಶಕರುಗಳಾದ ಅನಂತರಾಮ್, ಶ್ರೀನಿವಾಸ್, ಪದ್ಮನಾಭ ಶ್ರೀಮತಿ ಛಾಯಾ, ಶ್ರೀಮತಿ ಮಂಜುಳಾ,ಸೇವಾಕತೃಗಳಾದ ಚೇತನ್ ಕುಮಾರ್,ನಾಗೇಂದ್ರ, ಹರೀಶ್.ಶ್ರೀಮತಿ ಗೀತಾನಾಗೇಶ್, ರಾಮಪ್ರಸಾದ್ ಉಪಸ್ಥಿತರಿದ್ದರು. ಟಿ.ಎಸ್.ಮಂಜುನಾಥ್ ಸ್ವಾಗತಿಸಿದರು,ಚಂದ್ರಶೇಖರ್ ನಿರೂಪಿಸಿದರು.
ವರದಿ : ಕೆ ಬಿ ಚಂದ್ರಚೂಡ್
