ತುಮಕೂರು: ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಪೈಕಿ ಪತ್ರಿಕಾ ರಂಗವೂ ಸಹ ಒಂದಾಗಿದ್ದು ಯಾವುದೇ ಸರ್ಕಾರ ಅಥವಾ ರಾಜಕಾರಣಿಗಳ ತಪ್ಪುಗಳನ್ನ ಟೀಕಿಸಿ ತಮ್ಮ ಲೇಖನಿಯಲ್ಲಿ ಲೋಪ ದೋಷಗಳನ್ನು ಸರಿಪಡಿಸುವ ಪತ್ರಕರ್ತರು ಸದಾ ಒತ್ತಡದ ಜೀವನದಲ್ಲಿ ಇರುತ್ತಾರೆ ಇತ್ತೀಚಿಗೆ ಬದಲಾಗಿರುವ ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಗ್ರಾಮೀಣ ಭಾಗದ ಪತ್ರಕರ್ತರಿಂದ ಲೋಪ ದೋಷಗಳು ಕಂಡುಬರುತ್ತಿದ್ದು ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಗ್ರಾಮೀಣ ಪತ್ರಿಕೋದ್ಯಮಗಳಿಗೆ ಎರಡು ದಿನಗಳ ಕಾಲ ವಿಶೇಷ ಕಾರ್ಯಗಾರವನ್ನ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ಕಾರ್ಯಗಾರಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚಿಕ್ಕನಾಯಕನಹಳ್ಳಿಯ ಎಸ್.ಬಿ.ಚಾರಿಟೇಬಲ್ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸುವರ್ಣಮುಖಿ ಮಾಧ್ಯಮ ಅಧ್ಯಯನ ಕೇಂದ್ರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು ವಿವಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಗ್ರಾಮೀಣ ಪತ್ರಿಕೋದ್ಯಮ ಕಾರ್ಯಗಾರ ಹಾಗೂ ದಿವಂಗತ ಎನ್.ಬಸವಯ್ಯ ಜೀವಮಾನ ಸಾಧನೆ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾರ್ಯಗಾರಕ್ಕೆ ಪತ್ರಿಕೋದ್ಯಮ ಕ್ಷೇತ್ರದ ನುರಿತ ನೈಪುಣ್ಯತೆ ಹೊಂದಿರುವ ಪತ್ರಿಕೋದ್ಯಮಿಗಳು ಹಾಗೂ ಅಧ್ಯಯನಶೀಲರು ಪ್ರಾಧ್ಯಾಪಕರುಗಳು ಆಗಮಿಸುತ್ತಿದ್ದು ಪಟ್ಟಣದ ತೀನಂಶ್ರೀ ಭವನದಲ್ಲಿ ಸೆಪ್ಟೆಂಬರ್ 26 ಮತ್ತು 27ರಂದು ಕಾರ್ಯಗಾರ ನಡೆಯಲಿದೆ ಈ ಕಾರ್ಯದಲ್ಲಿ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ವೆಂಕಟೇಶ್ವರಲು ಹಾಗೂ ಕುಲಪತಿಗಳಾದ ಬಿ.ಕೆ.ರವಿ ಅವರುಗಳು ಆಗಮಿಸಲಿದ್ದು ಪತ್ರಿಕೋದ್ಯಮ ಕ್ಷೇತ್ರದ ಪ್ರಸ್ತುತ ಇರುವ ಸವಾಲುಗಳು ಮತ್ತು ಡಿಜಿಟಲ್ ಮಾಧ್ಯಮದ ಪ್ರಭಾವಗಳ ಬಗ್ಗೆ ವಿಶೇಷ ಕಾರ್ಯಗಾರಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚೀನಿ ಪುರುಷೋತ್ತಮ ಅವರು ಮಾತನಾಡಿ ಸದಾ ಒತ್ತಡದಲ್ಲಿರುವ ಪತ್ರಕರ್ತರಿಗೆ ನಿರಾಳತೆ ಬೇಕಿದೆ ಸಾಕಷ್ಟು ಅನುಭವಿ ಪತ್ರಕರ್ತರು ಮಾಧ್ಯಮ ರಂಗಕ್ಕೆ ಬರಬೇಕಾಗಿದೆ, ಚಿ.ನಾ.ಹಳ್ಳಿ ಯಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಈ ಕಾರ್ಯಗಾರಕ್ಕೆ ಎಲ್ಲಾ ಪತ್ರಕರ್ತರು ಆಗಮಿಸಿ ಯಶಸ್ವಿಗೊಳಿಸುವುದರ ಜೊತೆಗೆ ನಡೆದಾಡುವ ಬಸವಣ್ಣ ಎಂದೇ ಖ್ಯಾತರಾದ ದಿವಂಗತ ಎನ್ ಬಸವಯ್ಯ ಅವರ ಜೀವಮಾದ ಸಾಧನೆ ದತ್ತಿ ಪ್ರಶಸ್ತಿ ಪ್ರಧಾನ ನಮ್ಮ ಸುದ್ದಿಮನೆಯ ಪತ್ರಕರ್ತರಿಗೆ ನಡೆಯಲಿದ್ದು ಈಗಾಗಲೇ ಶಾಸಕ ಸುರೇಶ್ ಬಾಬು ಅವರು ದತ್ತಿ ಪ್ರಶಸ್ತಿ ಅಡಿಯಲ್ಲಿ 50,000ಗಳನ್ನ ಇಟ್ಟಿದ್ದು ಮುಂದಿನ ದಿನಗಳಲ್ಲಿ ಇದನ್ನ ಹೆಚ್ಚಳ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ||ಸಿಬಂತಿಪದ್ಮನಾಭ್,ಡಾ.ಕೆ.ಸಿದ್ದಲಿAಗಪ್ಪ, ಜಿಲ್ಲಾ ಕಾ.ನಿ.ಪ.ಸಂಘದ ಪ್ರಧಾನ ಕಾರ್ಯದರ್ಶಿ ಟಿ ಈ ರಘುರಾಮ್, ಯೋಗೀಶ್, ಎಂಎಸ್ ರವಿಕುಮಾರ್, ಗುರುಮೂರ್ತಿಕೊಟ್ಟಿಗೆಮನೆ ಸೇರಿದಂತೆ ವಿವಿಧ ಪತ್ರಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
