ಮನುಷ್ಯನ ಸ್ವಾರ್ಥದಿಂದ ಕಾಡು (forest) ಸಂಪೂರ್ಣವಾಗಿ ನಾಶವಾಗಿದೆ. ಈ ಕಾಡಿನ ವಿನಾಶದಿಂದ ಅರಣ್ಯದಲ್ಲಿನ ಪ್ರಾಣಿಗಳೆಲ್ಲಾ ಆಹಾರವನ್ನರಸುತ್ತಾ ನಾಡಿನ ಕಡೆಗೆ ಬರುವುದು ಹೊಸದೇನಲ್ಲ. ಹೀಗೆ ಆಹಾರವನ್ನರಸುತ್ತಾ ಬರುವ ಈ ಪ್ರಾಣಿಗಳು ಜನರು, ಶ್ವಾನ ಮತ್ತು ದನಕರುಗಳ ಮೇಲೆ ದಾಳಿ ಮಾಡುತ್ತವೆ
ಆದರೆ ಇದೀಗ ಎದೆ ಝಲ್ ಎನಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು, ಪುಟ್ಪಾತ್ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲೇ ರಾಜಾರೋಷವಾಗಿ ಸಿಂಹಿಣಿಯೊಂದು ನಡೆದುಕೊಂಡು ಹೋಗಿದೆ. ಈ ಬಗ್ಗೆ ಅರಿವಿಲ್ಲದೇ ವ್ಯಕ್ತಿಯೂ ಗಾಢ ನಿದ್ರೆಯಲ್ಲಿ ಮುಳುಗಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ
ವೈರಲ್ ವಿಡಿಯೋದಲ್ಲಿ ಏನಿದೆ?
@KreatelyMedia ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪುಟ್ ಪಾತ್ ನಲ್ಲಿ ವ್ಯಕ್ತಿಯೊಬ್ಬನು ಮಲಗಿರುವುದನ್ನು ಕಾಣಬಹುದು. ಆದರೆ ಇತ್ತ ಸಿಂಹಿಣಿಯೊಂದು ಅವನ ಪಕ್ಕದಲ್ಲೇ ನಡೆದುಕೊಂಡು ಹೋಗಿದ್ದು, ಆದರೆ ಇದ್ಯಾವುದರ ಪರಿವೇ ಇಲ್ಲದೇ ಆತನು ಗಡದ್ದಾಗಿ ನಿದ್ದೆ ಮಾಡುತ್ತಿದ್ದಾನೆ.
