ಚಾಮರಾಜನಗರ:- ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಜಿಲ್ಲಾ ಹಾಲು ಒಕ್ಕೂಟದಿಂದ ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ಹೆರಿಗೆ ವಾರ್ಡಿನಲ್ಲಿರುವ ಬಾಣಂತಿಯರು, ಗರ್ಭೀಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಡ್ ಲೈಫ್ ಹಾಲು ಮತ್ತು ಸುವಾಸಿತ ಹಾಲು ವಿತರಣೆ ಮಾಡಲಾಯಿತು.
ನಗರದ ಹೆರಿಗೆ ವಾರ್ಡುಗಳಿಗೆ ಚಾಮುಲ್ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಎಂ. ಪ್ರಸಾದ್ ಮತ್ತು ತಂಡವರು ತೆರಳಿ, ಜೂನ್ ೧ ವಿಶ್ವ ಹಾಲು ದಿನವಾಗಿದ್ದು, ಹಾಲಿನ ಮಹತ್ವವನ್ನು ಬಗ್ಗೆ ಅರಿವು ಮುಡಿಸುವ ಸಲವಾಗಿ ಅಸ್ಪತ್ರೆಯಲ್ಲಿರುವ ೨೦೦ಕ್ಕು ಹೆಚ್ಚು ಬಾಣಂತಿಯರು, ಗರ್ಭೀಣಿಯರು ಹಾಗು ಮಕ್ಕಳಿಗೆ ಗುಡ್ ಲೈಪ್ ಹಾಲು ಮತ್ತು ಸುವಾಸಿತ ಹಾಲಿನ ಬಾಟಲಿಗಳನ್ನು ನೀಡಿ, ವಿಶ್ವ ಹಾಲು ದಿನಾಚರಣೆಯ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ಎಂ. ಪ್ರಸಾದ್, ರಾಷ್ಟ್ರಾದ್ಯಂತ ವಿಶ್ವ ಹಾಲು ದಿನವನ್ನು ಆಚರಣೆ ಮಾಡಲಾಗುತ್ತಿದೆ. ಹಾಲಿನ ಮಹತ್ವ ಹಾಗೂ ಆರೋಗ್ಯವಂತ ಜೀವನಕ್ಕಾಗಿ ಪ್ರತಿಯೊಬ್ಬರಿಗೂ ಹಾಲು ಬಹುಮುಖ್ಯ. ಇದರ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಈ ಕಾರ್ಯಕ್ರಮವನನ್ನು ಆಯೋಜನೆ ಮಾಡಲಾಗಿದೆ. ಚಾಮುಲ್ನ ಮಾರುಕಟ್ಟೆ ವಿಭಾಗದಿಂದ ವಿಶ್ವ ಹಾಲು ದಿನದ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿರುವ ಹೆರಿಗೆ ಅಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಗರ್ಭೀಣಿಯರಿಗೆ ಹಾಲು ವಿತರಿಸಲಾಗಿದೆ.
ಹಾಲು ಆರೋಗ್ಯವೃದ್ದಿಗೆ ಉತ್ತಮ ಪೇಯ ಆಗಿದ್ದು, ಈಗ ಹುಟ್ಟಿದ ಮಗುವಿಗೆ ತಾಯಿ ಹಾಲಿನ ಜೊತೆಗೆ ನಂದಿನಿ ಹಾಲು ನೀಡಲಾಗುತ್ತದೆ.
ಇನ್ನು ಬೆಳೆಯುತ್ತಿದ್ದ ಅಂತ್ಯದವರೆಗೆ ಹಾಲು ಸೇವನೆಯಿಂದ ಆರೋಗ್ಯವಂತ ಶಕ್ತಿಯುತ ಜೀವನ ನಡೆಸಲು ಹಾಲು ಪ್ರಮುಖ ಪಾತ್ರ ವಹಿಸುತ್ತದೆ, ಗ್ರಾಹಕರು ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಂತ ಜೀವನ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಶಿವಕುಮಾರ್ , ಸಹಾಯಕ ವ್ಯವಸ್ಥಾಪಕ ಸೈಯದ್ ಮನ್ಸೂರ್ವುಲ್ಲಾ, ಮಾರುಕಟ್ಟೆ ಅಧಿಕಾರಿ ರಾಘವೇಂದ್ರ ರಾವ್, ವಿಭಾಗದ ನೂತನ್, ಸಂತೋಷ್, ಕ್ಷೀರ ಕೇಂದ್ರದ ಅಧಿಕೃತ ಮಾರಾಟಗಾರರು ಭಾಗವಹಿಸಿದ್ದರು.
-ಶ್ರೀ ಸಾಯಿ ಎಸ್ ಮಂಜು

[…] […]