ಕೊರಟಗೆರೆ :- ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಶ್ರೀ ಮಾರುತಿ ಕೃಪಾಪೋಷಕ ನಾಟಕ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದ ಸಜ್ಜಿಕೆಯಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ
ಶಾಂತಲಿಂಗಯ್ಯನಪಾಳ್ಯದ ವೆಂಕಟರಮಣಪ್ಪ ನವರ ಸುಪುತ್ರ ರಮೇಶ್ ಎಸ್ ವಿ ಎಂಬವರಿಗೆ ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಕಲಾವಿದರಾದ ನಟರಾಜ್ ಸಿ ಎಸ್, ರಂಗರಾಜು ಸಿ ಬಿ, ಪುಟ್ಟರಾಜು ಶಿಕ್ಷಕರಾದ ರಂಗಸ್ವಾಮಯ್ಯ, ಮುಖಂಡರುಗಳಾದ ಪತ್ರಕರ್ತ ಲಕ್ಷ್ಮಿಕಾಂತ್, ರಂಗರಾಜು , ಆನಂದ್ (ಟೀ ಸ್ಟಾಲ್) ಮೈಲಾರಪ್ಪ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
