ಚೀನಾ ಪೈಪೋಟಿಯ ದೇಶ. ಸದ್ಯಕ್ಕೆ ಪ್ರಪಂಚದ ಅತ್ಯದ್ಭುತ ವಿನ್ಯಾಸಗಳ ಕಟ್ಟಡಗಳು ಮತ್ತು ತಾಂತ್ರಿಕತೆ ಚೀನಾ ದೇಶದಲ್ಲಿ ಇವೆ. ಮೊದಲು ಎಂದು ಬಂದಾಗ ಚೀನಾ stands first. ಉದಾಹರಣೆಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಎತ್ತರದ ಸೇತುವೆ, ಉದ್ದನೆಯ ಸೇತುವೆ, ಅಣೆಕಟ್ಟು ಹೀಗೆ. ತಂತ್ರ ಜ್ಞಾನದಲ್ಲಿ ಇವರ ಕೃತಕ ಬುದ್ದಿಮತೆಯ ರೋಬೋಟ್ಸ ಪ್ರಪಂಚದಲ್ಲೆ ಶ್ರೇಷ್ಟ. ಇಂದು ಇವರ ಕಣ್ಣು ಕೃತಕ ಸೂರ್ಯ ಮತ್ತು atomic fusion ಕಡೆ ವಾಲಿದೆ. ಇವುಗಳಿಂದ ಎನರ್ಜಿ ಉತ್ಪಾದನೆ ಮಾಡಿ ರಫ್ತು ಮಾಡುವುದು. ಇವರ electric power ಉತ್ಪಾದನೆ ಸಾಕಷ್ಷು ಇದೆ. ಯಾವುದೇ ನಗರ ಇಲ್ಲಿ ನೋಡಲು ಜಗಮಗ, ವೀಕ್ಷಿಸಲು ಆನಂದ. ಮೊದಲೇ ತಿಳಿಸಿದಂತೆ ಇವರ ಮೂಲಭೂತ ಸೌಕರ್ಯಗಳು ನಮ್ಮ ದೇಶಕ್ಕಿಂತ ನೂರು ವರ್ಷಗಳು ಮುಂದೆ ಇರಬಹುದೇನೋ? ಅಲ್ಲಿಯ ಗೈಡ್ ಪ್ರಕಾರ ಶಾಂಘೈ ನಗರದಲ್ಲಿ ಅಲ್ಲಿ ತಯಾರಾದ ವಸ್ತುಗಳ international ಪ್ರದರ್ಶನ all 365 days ಇರುತ್ತಂತೆ.
ಇದನ್ನು ಓದಿ: ಚೀನಾ ಪ್ರವಾಸ ಕಥನ – ಭಾಗ – 1

ಚೀನಿಯರು ತಮ್ಮ ರಾಶಿ, ಶೆಂಘ್ ಶೂಯೀ ವಾಸ್ತು ಮತ್ತೆ ವರ್ಷದ ಪ್ರಾಣಿ ಬಗ್ಗೆ ಅಪಾರ ನಂಬಿಕೆ. ಎಲ್ಲಿ ನೋಡಿದರಲ್ಲಿ dragon ಪ್ರತಿಮೆಯ ಬಿತ್ತಿ ಚಿತ್ರ ಮತ್ತು ಲೋಗೊ ಕಾಣುವುದು. ಇವರ ಮೂಲ meditative ಅಭ್ಯಾಸ Tai chi. ಇದರ ಅರ್ಥ ಮನಸ್ಸನ್ನು ಶರೀರ ಮತ್ತು ಉಸಿರಿನ ಮೇಲೆ ನಿಯಂತ್ರಣ ಮಾಡುವುದು. ಇಲ್ಲಿ ಎಲ್ಲಾ ಉದ್ಯಾನವನಗಳಲ್ಲಿ ಜನರು ವಯಾಸ್ಸಾಗಿದ್ದರೂ ಸಹ ಬಂದು ಈ ಕಲೆ ಅಭ್ಯಾಸ ಮಾಡುತ್ತಿರುತ್ತಾರೆ.
ಇದನ್ನು ಓದಿ: ಭಾಗ- 2 … ಚೀನಾ ಪ್ರವಾಸ ಕಥನ

ನಮ್ಮ ಹಾಗೆ ಅಲ್ಲಯು ತಾಯಿತ, ಆ ರಾಶಿಗೆ ತಕ್ಕಂತೆ ಕಲ್ಲಿನ ಹರಳು ಮತ್ತು ಮಣಿಗಳು, ಕತ್ತಿನ ದಪ್ಪನೆಯ ದಾರಕ್ಕೆ ವಿವಿಧ ಬಣ್ಣಗಳ ಅತ್ಯಮೂಲ್ಯ natural ಕಲ್ಲುಗಳ ಪೆಂಡೆಟ್ಸ ಉಪಯೋಗಿಸುತ್ತಾರೆ. ಇಲ್ಲಿಯ ತಾಯಿತ ನಮ್ಮ ಅಂತ್ರದ ತರಹ ಇರುವುದಿಲ್ಲ. ತಾಯಿತ ಮಧ್ಯೆ ಬಹು ಚಿಕ್ಕ ಬೂದುಕನ್ನಡಿ ಇರುತ್ತದೆ. ಇದರ ಒಳಗೆ ಕಣ್ಣಿನಲ್ಲಿ ನೋಡಿದಾಗ ಅವರವರ ಚೀನಿ ರಾಶಿಯ ಚಿತ್ರಗಳು ಕಾಣಿಸುತ್ತವೆ. ಅಲ್ಲಿಯ ನಿವಾಸಿಗಳು ಅದನ್ನು ಕೊಂಡು ತಮ್ಮ ಕೊರಳಿಗೆ ನೇತು ಹಾಕಿ ಕೊಳ್ಳುತ್ತಾರೆ.
ಇದನ್ನು ಓದಿ: ಚೀನಾ ಪ್ರವಾಸ ಕಥನ – ಭಾಗ – 3

ಅತಿ cheap ಮಣಿ ಮತ್ತು ಹರಳು ಎಂದರೆ fresh water harvested ಪರ್ಲ, nephrite ಜೇಡ್ ಮತ್ತು green agate. ಇವುಗಳಲ್ಲಿ ಮಾಡಿದಂತ ಆಭರಣಗಳನ್ನು ನಮಗೆ 999 ಯುವಾನ್ ಹೇಳಿ ನೂರು ಯುವಾನ್ಗೆ ಮಾರುತ್ತಾರೆ. ಆದರೆ ಅವರಿಗೆ ಹತ್ತು ಯುವಾನ್ production cost ಬಿದ್ದಿರುತ್ತೆ. ನಮ್ಮಲ್ಲಿಯ ವ್ಯಾಪಾರ ಸಹ ಹೀಗೆ ಇರುತ್ತದೆ ಅಲ್ಲವೇ?
ಇದನ್ನು ಓದಿ: ಭಾಗ – 4 … ಚೀನಾ ಪ್ರವಾಸ ಕಥನ

ಆ ದೇಶ ಪ್ರವಾಸೋದ್ಯಮವನ್ನು ಎಷ್ಟರ ಮಟ್ಟಿಗೆ improve ಮಾಡಬೇಕೊ ಅಷ್ಟು ಸುಧಾರಣೆ ಮಾಡಿರುತ್ತಾರೆ. ಶಾಂಘೈ ನಗರದಲ್ಲಿ ಅಗಲವಾದ ನದಿ Yangtze ಮತ್ತು ಚಿಕ್ಕ ಜೀವ ನದಿ Huangpu ಇವೆ. ನಗರದ ಹಳೇ ಮತ್ತು ಹೊಸ ನಗರಗಳ ಮಧ್ಯೆ ಓಡಾಡಲು under river ಸುರಂಗ ಮಾರ್ಗಗಳು ಇವೆ. Huangpu ಕೆಳಗೆ ಒಂದು ಕಡೆ bund sight seeing ಸುರಂಗ ಮಾರ್ಗ ಇದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ open ರೈಲಿನಲ್ಲಿ ಹೋಗಬೇಕು. ಹೋಗುವ ಸಮಯದಲ್ಲಿ ಚೀನಿ ಭಾಷೆಯ comentry ಜೊತೆಗೆ psychedelic ಬಣ್ಣದ ಬೆಳಿಕಿನ ಚಿತ್ತಾರವನ್ನು project ಮಾಡುತ್ತಾರೆ. ಒಟ್ಟಾರೆ ಜಾಗ ಸಿಕ್ಕಿದ್ದನ್ನು ಕಂಗೊಳಿಸಿ ಪ್ರವಾಸಿಗರಿಗೆ ಮುದ ನೀಡುವ ಪ್ರಯತ್ನ ಮತ್ತು ಅವರಿಗೆ ಹಣ ಗಳಿಕೆ.
ಇದನ್ನು ಓದಿ: ಚೀನಾ ಪ್ರವಾಸ ಕಥನ – ಭಾಗ 5

ಭಾರತ ದೇವಸ್ಥಾನದ ಮುಂಭಾಗಳಲ್ಲಿ ಕಂಡು ಬರುವ ಬಿಲ್ವಪತ್ರೆ ಮರ, ಅಶ್ವತ್ಥ ಮರ, ಆಲದ ಮರ ಹೀಗೆ ಹಲವು ಮರಗಳನ್ನು ಸುತ್ತುವರಿದು ನಮಸ್ಕರಿಸುವುದು ಸಂಪ್ರದಾಯ. ಅಲ್ಲಿಯೂ ಸಹ ಇಂತಾದ್ದೆ ಪದ್ದತಿ ಇದೆ. ಅಲ್ಲಿಯ ಹಲವು ದೇವಸ್ಥಾನಗಳಲ್ಲಿ ಅಥವ ವಿಹಾರಗಳಲ್ಲಿ ಹಳೇ ದೊಡ್ಡ pine ಮರಗಳು ಇವೆ. ಅಂತಹ ಮರಗಳನ್ನು ಸ್ಪರ್ಶಸಿ ತಬ್ಬಿಕೊಂಡರೆ ಆಯಸ್ಸು, ಶಾಂತಿ ಮತ್ತು ಶಕ್ತಿ ಬರುವುದಂತೆ. ನಮ್ಮ ಗೈಡ್ ಮುಟ್ಟಿ ತಬ್ಬಿಕೊಳ್ಳಿ ಎಂದರು. ನಾವೆಲ್ಲರೂ (including me) ಚಾಚುತಪ್ಪದಂತೆ ಕುರಿಗಳ ತರ ಮಾಡಿದೆವು. ಗೈಡ್ incense ಅಥವಾ ಊದುಕಡ್ಡಿ ಹಚ್ಚಿ ಎಂದರು, ಹಚ್ಚಿದೆವು. At the bottom of the day ಹೇಳಿದ ಹಾಗೆ ಮಾಡಿದ ನನಗೆ ಎಷ್ಟು ಪುಣ್ಯ ಬಂದಿರಬಹುದೋ ತಿಳಿಯದು.
ಇದನ್ನು ಓದಿ: ಭಾಗ – 6 … ಚೀನಾ ಪ್ರವಾಸ ಕಥನ

ನಮ್ಮ ಹತ್ತು ಪ್ರವಾಸ ದಿವಸಗಳು ಅಲ್ಲಿಯ bullet train ತರಹ ಕಳೆದುಹೋಯಿತು. ನಮ್ಮ ಜೊತೆಯಲ್ಲಿ ತಾಲಿವುಡ್ ಫೇಮ್ ಜನಪ್ರಿಯ ಸಂಗೀತ ನಿರ್ದೇಶಕರಾದ ಶ್ರೀ ಕೋಟಿ (saluari ಕೋಟೇಶ್ವರ್ ರಾವ್) ಸಹ ಬಂದಿದ್ದರು. ಇವರು ಸುಮಾರು 500 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರೆ. ಇವರು ಅತ್ಯುತ್ತಮ ಹಾಡುಗಾರರೂ ಹೌದು. ನಾವು guilin ನೀಲ್ ನದಿಯಲ್ಲಿ ಕ್ರೂಸ್ ವಿಹಾರ ಮಾಡುತ್ತಿದ್ದಾಗ ಇವರ ಹಾಡಿನಿಂದ ನಮ್ಮನೆಲ್ಲಾ ರಂಜಿಸಿದರು. ಎ ಆರ್ ರೆಹಮಾನ್ ಇವರ ಶಿಷ್ಯರಂತೆ. ಇವರು ಸ್ವರ್ಗೀಯ ವಿಷ್ಣುವರ್ಧನ್ ನಟಿಸಿರುವ “ಜೀವನದಿ” ಚಲನ ಚಿತ್ರದ “ಕನ್ನಡ ನಾಡಿನ ಜೀವ ನದಿ ಕಾವೇರಿ” ಹಾಡಿಗೆ ರಾಗ ಸಂಯೋಜಕರು.
ಇದನ್ನು ಓದಿ: ಭಾಗ – 7 … ಚೀನಾ ಪ್ರವಾಸ ಕಥನ

ಪ್ರಪಂಚದಲ್ಲಿ ಭಾರತ ಯೋಗ ಅಭ್ಯಾಸಕ್ಕೆ ಕೇಂದ್ರ ಬಿಂದು. ಹಲವಾರು ಯೋಗ ಸಿದ್ದರು “levitation”, ಅಂದರೆ ಗಳಿಯಲ್ಲಿ ತೇಲುವ ಮನಸ್ಸಿನ ಸ್ಥಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ತರಹ ಕೆಲಸ ಮಾಡುವುದು ಅಲ್ಲಿಯ Meglev (magnetic levitation) ರೈಲುಗಳು. ನಾವು ಈ ಟ್ರೈನ್ ಹತ್ತಿದ station ಇಂದ Pudong ವಿಮಾನ ನಿಲ್ದಾಣ ಸುಮಾರು 35 ಕಿಲೋಮೀಟರ್ಸ ಇತ್ತು. ಈ ವಿಮಾನ ನಿಲ್ದಾಣ ತಲುಪಲು ಹತ್ತು ನಿಮಿಷ ಸಾಕಾಯಿತು. ಅದೇ ಬಸ್ಸಿನಲ್ಲಿ ಸಂಚರಿಸಿದರ ಒಂದು ಗಂಟೆ ಬೇಕಾಗಿತ್ತು. ಈ ರೈಲಿನ ವೇಗ ಗಂಟೆಗೆ ಮುನ್ನೂರು ಕಿಲೋಮೀಟರ್ಸ. ಇದರ ಕಾರ್ಯ ವಿದ್ಯುತ್ತ ಶಕ್ತಿಯಿಂದ ಟ್ರೈನಿನ ಕೆಳ ಭಾಗವನ್ನು ಮತ್ತು ಹಳಿಯ ಮೇಲ್ ಭಾಗವನ್ನು magnetic -ve ಅಥವಾ +ve ಚಾರ್ಜ ಮಾಡುತ್ತಾರೆ, ಆಗ ಇಡೀ ಟ್ರೈನ್ ಗಾಳಿಯಲ್ಲಿ ತೇಲುತ್ತದೆ (float). ಕೆಲವು ನಗರಗಳ ಮಧ್ಯೆ ಇವುಗಳ ವೇಗ ಸುಮಾರು 500 ಕಿಲೋಮೀಟರ್ಸ ಇರುತ್ತವೆ. ಇಲ್ಲಿ ಎರಡನ್ನು ಒಂದೇ ತರಹ ಚಾರ್ಜ ಮಾಡುವುದರಿಂದ ರೈಲು ಭೂಮಿಯಿಂದ ಮೇಲೆ ತೇಲಿ ಸಂಚರಿಸುತ್ತದೆ (same magnetic forces are repelling in nature).
ಇದನ್ನು ಓದಿ: ಭಾಗ – 8 … ಚೀನಾ ಪ್ರವಾಸ ಕಥನ

I don’t know the four walled economy of China because when I enquired my guide about it’s economic policies he was tight lipped.

ಭಾರತದ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವ . ಅಲ್ಲಿಯದ್ದು ಸರ್ವಾಧಿಕಾರಿ ವ್ಯವಸ್ಥೆ. ಅಲ್ಲಿ autocracy ಇದ್ದರೂ ಬೆಳವಣಿಗೆಯಲ್ಲಿ ಮಾತ್ರ ಉದಾರತನ ತೋರಿದ್ದಾರೆ. ಅ ದೇಶ ಕೇಳಿ ಅರಿಯದಂತೆ ಮುಂದುವರಿಯಲು ಯಾವ ಕಾರಣ ಇರಬಹುದು?
ಮರೆತಿದ್ದೆ, ಆಲ್ಲಿಯ ಸರ್ಕಾರ “Red ( communism)”. ಆದರೆ ಅಲ್ಲಿಯ ಯಾವುದೇ ಮೂಲೆ ಮತ್ತು ದಾರಿಯಲ್ಲಿ “Red (gutka)” ಮಾರ್ಕ ಕಾಣುವುದಿಲ್ಲ. ಇಲ್ಲಿಯ ತರಹವೆ ಅಲ್ಲಿಯ ಪ್ರಜೆಗಳು ದಾರಿಯಲ್ಲಿ ಉಗುಳುತ್ತಾರೆ ಮತ್ತು cigarette but ಬಿಸಾಕುತ್ತಾರೆ. ಅಲ್ಲಿ ಶೇಕಡ ಮೂವತ್ತರಷ್ಟು (ಭಾರತದಲ್ಲಿ ಶೇಕಡ ಹತ್ತು) ಜನರು cigarettes ಸೇದುತ್ತಾರೆ.
ಮುಗಿಯಿತು…

