ಚನ್ನರಾಯಪಟ್ಟಣ: ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿಯಾದ ಬಿ.ಎನ್ ಸಜಿನಿ ಅವರು 2025–26ನೇ ಸಾಲಿನ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಯ (ಮರುಮೌಲ್ಯಮಾಪನದ ನಂತರ) ಫಲಿತಾಂಶದಲ್ಲಿ 600ಕ್ಕೆ594 ಅಂಕಗಳನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇವರು ಚನ್ನರಾಯಪಟ್ಟಣ ತಾಲ್ಲೂಕಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಇದರ ಜೊತೆಗೆ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರು ವಿಷಯವಾರು ಅಂಕಗಳು:
ಕನ್ನಡ – 99
ಇಂಗ್ಲಿಷ್ – 95
ಇಕಾನಾಮಿಕ್ಸ್ – 100
ಅಕೌಂಟೆನ್ಸಿ – 100
ಸ್ಟಾಟಿಸ್ಟಿಕ್ಸ್ – 100
ಬಿಸಿನೆಸ್ ಸ್ಟಡೀಸ್ – 100
ಒಟ್ಟು – 600ಕ್ಕೆ 594 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ ಸಜಿನಿ ಅವರು ತಮ್ಮ ಸಾಧನೆಗೆ ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಲೋಹಿತ್ ಮಾತನಾಡಿ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ, ಕಾಲೇಜಿನ ಗೌರವವನ್ನು ಹೆಚ್ಚಿಸಿರುವುದಾಗಿ ಹೇಳಿದರು.
ಉಪಪ್ರಾಂಶುಪಾಲರಾದ ಉಲ್ಲಾಸ್ ಮಾತನಾಡಿ, ಕಾಲೇಜಿನ ದಾಖಲೆಯ ಫಲಿತಾಂಶವನ್ನು ತರುವಲ್ಲಿ ಯಶಸ್ವಿಯಾದ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜು ಒಂದು ಎಕ್ಸ್ಕ್ಲೂಸಿವ್ ಕಾಮರ್ಸ್ ಕಾಲೇಜು ಆಗಿದ್ದು, ಇಲ್ಲಿ SEBA ಮತ್ತು CEBA ಸಂಯೋಜನೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಿ ಎಂ ಲೋಹಿತ್, ಉಪಪ್ರಾಂಶುಪಾಲರಾದ ಎಚ್ ವಿ ಉಲ್ಲಾಸ್, ಕನ್ನಡ ಉಪನ್ಯಾಸಕಿ ಶಿಲ್ಪಾ ಹೆಚ್. ಟಿ, ಇಂಗ್ಲಿಷ್ ಉಪನ್ಯಾಸಕರಾದ ಪ್ರಸನ್ನಕುಮಾರ್ ಎ. ಸಿ, ಎಕನಾಮಿಕ್ಸ್ (Economics) ಉಪನ್ಯಾಸಕಿಯಾದ ಜಹಾರ ಬೇಗಮ್, ಬಿಸಿನೆಸ್ ಸ್ಟಡೀಸ್ (business studies) ಉಪನ್ಯಾಸಕರಾದ ಉಲ್ಲಾಸ್ ಹೆಚ್. ವಿ, ಅಕೌಂಟೆಂನ್ಸಿ (Accountancy) ಉಪನ್ಯಾಸಕರಾದ ಉಲ್ಲಾಸ್ ಹೆಚ್. ವಿ, ಸ್ಟಾಟಿಸ್ಟಿಕ್ಸ್(statistics) ಉಪನ್ಯಾಸಕಿಯಾದ ರೇಷ್ಮ ಹೆಚ್. ಕೆ, ಉಪನ್ಯಾಸಕಿಯಾದ ಬಿಂದು ಪಿ. ಎಂ, ಯೋಗ ತರಬೇತಿದಾರರಾದ ರೇಖಾರಾಣಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
