ಗುಬ್ಬಿ: ಪಟ್ಟಣದ ಪಶು ಆಹಾರ ಕಾರ್ಖಾನೆ ಆವರಣದಲ್ಲಿ ಗುಬ್ಬಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಂದ ಕುರುಕ್ಷೇತ್ರ ಅಥವಾ ಧರ್ಮರಾಜ ಸ್ಥಾಪನೆ ನಾಟಕದ ಅಭಿನಯ ಮಲ್ಲಸಂದ್ರ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀಮತಿ ಭಾರತಿಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಶಾಸಕ ಎಸ್. ಆರ್. ಶ್ರೀನಿವಾಸ್ರವರು ಉದ್ಘಾಟಿಸಿ ಶುಭಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮುಲ್ ನಿರ್ದೇಶಕರಾದ ಶ್ರೀಮತಿ ಭಾರತಿಶ್ರೀನಿವಾಸ್ ರವರು ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲು ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಂದ ಕುರುಕ್ಷೇತ್ರ ನಾಟಕವು ಅಮೋಘವಾಗಿ ಮೂಡಿಬಂದಿದೆ,ಕೆಲಸದ ಒತ್ತಡಗಳ ಮಧ್ಯೆ ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ,ಜಿಲ್ಲೆಯ ಎಲ್ಲ ಹಾಲು ಒಕ್ಕೂಟಗಳ ಸಂಘಗಳ ಕಾರ್ಯದರ್ಶಿಗಳು ನಾಟಕಗಳಲ್ಲಿ ಅಭಿನಯಿಸಲಿ,ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸೋಣ,ನಾಟಕಕ್ಕೆ ಅಗತ್ಯ ಸಹಕಾರವನ್ನು ನೀಡಲು ನಾವು ಸಿದ್ಧ ಎಂದು ತಿಳಿಸಿದರು.
ಕುರುಕ್ಷೇತ್ರ ನಾಟಕವು ಅದ್ಭುತವಾಗಿ ಮೂಡಿಬಂದಿತು,ಕಲಾ ರಸಿಕರ ಕಣ್ಮಣ ಸೆಳೆಯಿತು,ಕಲೆಯಲ್ಲಿ ಗುಬ್ಬಿ ವೀರಣ್ಣನವರು ತನ್ನದೇ ಆದ ಛಾಪು ಮೂಡಿಸಿರುವ ತಾಲ್ಲೋಕಿನಲ್ಲಿ ಇಂತಹ ಸದಭಿರುಚಿ ನಾಟಕವನ್ನು ಆಡಿ ಯುವ ಜನತೆಯನ್ನು ಕಲೆ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದ್ದು ನಿಜಕ್ಕೂ ಸಾರ್ಥಕವೆನೆಸಿತ್ತದೆ, ಇಂತಹ ಒಂದು ಕಲೆ ಅಭಿಮಾನ ಇತ್ತೀಚಿಗೆ ತುಮಕೂರು ಹಾಲು ಒಕ್ಕೂಟದ ವ್ಯಕ್ತಿಯಲ್ಲಿ ಕಾರ್ಯದರ್ಶಿಗಳಿಂದ ಹೊರಹೊಮ್ಮುತ್ತಿರೋದು ಶ್ಲಾಘನೀಯವಾದುದು ಇಂತಹ ಕಲೆಗಳನ್ನು ಎಲ್ಲಾ ರಂಗದ ಜನತೆ ಮೈಗೂಡಿಸಿಕೊಂಡು ಸಮಾಜದ ಹಾಗೂ ಹೋಗುಗಳನ್ನು ನಾಟಕಗಳ ಮೂಲಕ ತೋರ್ಪಡಿಸುತ್ತಿರುವುದು ಸಂತೋಷದಾಯಕವಾಗಿದೆ ಎಂದು ನಾಟಕ ನೋಡಿದ ಅಭಿಮಾನಿಗಳು ತಮ್ಮ ಅಭಿಮಾನದ ಮಾತುಗಳನ್ನು ತಿಳಿಸಿದರು.

ತುಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಶಿರಾ ಎಸ್.ಆರ್. ಗೌಡರು, ಕೊರಟಗೆರೆ ಸಿದ್ದಲಿಂಗಯ್ಯ, ತುಮಕೂರಿನ ನಂಜೇಗೌಡ, ಪಾವಗಡ ಚೆನ್ನಮಲ್ಲಯ್ಯ, ಉಳ್ಳೆನಹಳ್ಳಿಪ್ರಕಾಶ್,ತುಮುಲ್ ಗುಬ್ಬಿ ತಾಲ್ಲೋಕಿನ ಮುಖ್ಯಸ್ಥರಾದ ಶಂಕರ್ ನಾಗ್,ವಿಸ್ತರಣಾಧಿಕಾರಿ ಮಹೇಶ್,ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರುಗಳು, ನಿರ್ದೇಶಕರುಗಳು, ಎಂ.ಹೆಚ್ ಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ,ತುಮಕೂರು ಹಾಲು ಒಕ್ಕೂಟದ ಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್, ಗುಬ್ಬಿ ಪಶು ಆಹಾರ ಘಟಕದ ಜನರಲ್ ಮ್ಯಾನೇಜರ್ ಗಿರೀಶ್ ಸೇರಿದಂತೆ ಸಹಸ್ರಾರು ಕಲಾವಿದರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು,ನಿರ್ದೇಶಕರು, ತುಮಕೂರು ಹಾಲು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದು ನಾಟಕವನ್ನು ಯಶಸ್ವಿಗೊಳಿಸಿದರು.
ನಾಟಕದ ಮಾರ್ಗದರ್ಶಕರು ಮತ್ತು ಸಂಗೀತ ನಿರ್ದೇಶಕರಾದ ಬೆಳ್ಳಿಕಿರೀಟ ಪುರಸ್ಕೃತರಾದ ಹುಣಸೆಪಾಳ್ಯ ಜಗದೀಶ್ ರವರನ್ನು ತುಮುಲ್ ಆಡಳಿತ ಮಂಡಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು.
– ಚಂದ್ರಚೂಡ ಕೆ.ಬಿ
