ರಾಮನಾಥಪುರ- ವಡ್ಡರಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಮತ್ತು ಶ್ರೀ ಮಾರಮ್ಮದೇವಿಯವರ ನೂತನ ಆಲಯ ಜೀರ್ಣೋದ್ಧಾರ ಸ್ಥಿರಬಿಂಬ ಪ್ರತಿಸ್ಥಾಪನೆ, ಮತ್ತು ವಿಮಾನ ಗೋಪುರ ಕಳಸ ಪ್ರತಿಸ್ಥಾಪನಾ ಸಮಾರಂಭ ಮೇ 10. ರಂದು ಭಾನುವಾರ ಹಾಗೂ ಮೇ 11 ರಂದು ಸೋಮವಾರ ಬೆಳಿಗ್ಗೆ ನಡೆಯಲಿದೆ ಎಂದು ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಹಾಗೂ ಗ್ರಾಮಸ್ಥರು ತಿಳಿಸಿದರು.

ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ನೂತನ ದೇವಾಲಯದ ಲೋಕಾರ್ಪಣೆಯ ಪ್ರಯುಕ್ತ ದೇವಾಲಯದ ಅವರಣದಲ್ಲಿ ಮೇ. 10 ರಂದು ಭಾನುವಾರ ಸಂಜೆ 5 ಗಂಟೆಗೆ ಶ್ರೀ ಗಣಪತಿ ಪೂಜೆ, ವಾಸ್ತುಹೋಮ, ಮಂಗಳಾರತಿ, ತೀರ್ಥ ಪ್ರಸಾದ ವಿನಯೋಗವಿದೆ.
ಮೇ 11 ರಂದು ಸೋಮವಾರ ಬೆಳಿಗ್ಗೆ ಶುಭ ಬ್ರಾಹ್ನೀ ಮುಹೂತ್ತದಲ್ಲಿ ದೇವತಾ ಪ್ರತಿಸ್ಥಾಪನೆ, ಪೂರ್ಣಕುಂಭ ಸ್ಥಾಪನೆ ಮಹಾ ಮಂಗಳಾರತಿ ನಂತರ ಪ್ರಸಾದದ ವ್ಯವಸ್ಥೆ ನಡೆಯಲಿದೆ.
ಧಾರ್ಮಿಕ ಸಭೆ : ಧಾರ್ಮಿಕ ಸಭೆ ಮೇ. 11 ರಂದು ಸೋಮವಾರ ಬೆಳಿಗ್ಗೆ 10-30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರುಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಜಿಯವರು, ಅದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥಮಹಾಸ್ವಾಮಿಜಿಯವರು, ಸಿದ್ದಗಂಗಾ ಶ್ರೀಕ್ಷೇತ್ರದ ಪರಮಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮಿಜಿಯವರು, ಅರೆಮಾದನಹಳ್ಳಿ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸುಜ್ಲಾನತೀರ್ಥ ಮಹಾಸ್ವಾಮಿಜಿಯವರು, ಹಾಸನ ಅಧಿಚುಂಚನಗಿರಿ ಮಠದ ಶ್ರೀ ಶಂಭುನಾಥಸ್ವಾಮಿಜಿ, ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರಸ್ವಾಮಿಜಿ, ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮಿಜಿ, ಮನೆಹಳ್ಳಿ ಮಠದ ಶ್ರೀ ಮಹಾಂತಶಿವಲಿಂಗಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರಸ್ವಾಮಿಜಿ ಮುಂತಾದ ಸ್ವಾಮಿಜಿಯವರು ಸಾನಿಧ್ಯವಹಿಸುವರು.

ಮಾಜಿ ಪ್ರಧಾನಿಗಳು ಶ್ರೀ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯ ಮಂತ್ರಿಗಳು ಶ್ರೀ ಬಿ.ಎಸ್. ಯಡಿಯೂರಪ್ಪ ಗೌರವಾನ್ವಿತ ಉಪಸ್ಥಿತರಿರುವರು. ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ತು ಸದಸ್ಯರಾದ ಶ್ರೀ ಸುರಾಜ್ ರೇವಣ್ಣ ಉದ್ಘಾಟನೆ ಮಾಡುವರು.

ವಿಶೇಷ ಆಹ್ವಾನಿತರಾಗಿ ಹಾಸನ ಲೋಕಸಭಾ ಸದಸ್ಯರು ಶ್ರೀ ಶ್ರೇಯಸ್ ಎಂ.ಪಟೇಲ್, ಮಾಜಿ ಶಾಸಕರು ಡಾ. ಎ.ಟಿ. ರಾಮಸ್ವಾಮಿ, ಕಾಂಗ್ರೇಸ್ ಮುಖಂಡರಾದ ಎಚ್.ಪಿ. ಶ್ರೀಧರಗೌಡರು, ಉದ್ಯಮಿಗಳಾದ. ಮುದಗನೂರು ಎಂ.ಟಿ ಕೃಷ್ಣೇಗೌಡರು, ಮಂಡ್ಯ ಜಿಲ್ಲಾಧಿಕಾರಿಗಳು ಡಾ. ಶ್ರೀ ಕುಮಾರ್, ತಹಸಿಲ್ದಾರ್ ಕೆ.ಸಿ ಸೌಮ್ಯ, ಜೆ.ಡಿ.ಎಸ್. ಮುಖಂಡರು ದೊಡ್ಡಮಗ್ಗೆ ರಾಜೇಗೌಡರು, ವೀರಶೈವ ಲಿಂಗಾಯಿತ ಮಹಾ ಸಭಾ ಅಧ್ಯಕ್ಷರು ಬೆಮ್ಮತ್ತಿ ಸುರೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಮಂಜುಶೆಟ್ಡಿಗೌಡರು, ಹಾಗೂ ನಿರಂಜನವರು, ಗುತ್ತಿಗೆದಾರರಾದ ಕಳ್ಳಿಮುದ್ದನಹಳ್ಳಿ ಶ್ರೀ ಲೋಕೇಶ್, ಮಹಾಸಭಾ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಗೊಬ್ಬರ ಅಂಗಡಿ ಮಾಲಿಕರು ರಂಗಾಪುರ ಮಹದೇವಪ್ಪ, ಗುತ್ತಿಗೆದಾರರಾದ ಶ್ರೀ ಕಿರಣ್ ಕುಮಾರ್ ಹಾಗೂ ಸ್ವಾತಿಗೋಪಾಲ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಅರಕಲಗೂಡು ಆರಕ್ಷಕ ವೃತ ನಿರೀಕ್ಷಕರು ವಸಂತ್ ರವರು, ಶನಿವಾರಸಂತೆ ಆರಕ್ಷಕ ವೃತ ನಿರೀಕ್ಷಕರು ಕೃಷ್ಣರಾಜ ಅರಸ್, ಕೊಣನೂರು ಠಾಣೆ ಪಿ.ಎಸ್.ಐ. ಶ್ರೀ ಮರಿಯಪ್ಪ ಅರ್. ಬ್ಯಾಳಿ, ಕೆ.ಇ.ಬಿ. ಅಭಿಯಂತರರು ಸಿ.ಕೆ. ಚಿದಂಬರರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಶ್ರೀಮತಿ ವೀಣಾ ಮಂಜುನಾಥ್ ಮುಂತಾದ ಹರಗುರು ಚರಮೂರ್ತಿಗಳು ಜನಪ್ರತಿನಿಧಿಗಳು ಗ್ರಾಮಸ್ಥರು ಭಾಗವಹಿಸುವರು ಎಂದು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಅಭಿವೃದ್ದಿ ಸಮಿತಿಯವರು ಹಾಗೂ ಗ್ರಾಮಸ್ಥರು ತಿಳಿಸಿದರು.

ವರದಿ : ಕುಮಾರಸ್ವಾಮಿ, ಶರಣರು ರಾಮನಾಥಪುರ
