ಆ ಊರು ಹೆಸರು ದೊಡ್ಡಳ್ಳಿ. ಆದರೆ ಊರಿನ ಬುದ್ಧಿವಂತರೆಲ್ಲಾ ಪೇಟೆ ಪಟ್ಟಣ ಸೇರಿ ಉಳಿದವರು ಮುದುಕರು, ಎರಡು ಗುಂಟೆ ಮೂರು ಗುಂಟೆ ಜಮೀನು ಉಳಿಸಿಕೊಂಡ ರೈತರು, ಓದು ತಲೆಗೆ ಹತ್ತದವರು ಉಳಿದು ಒಂದು ಕಾಲಕ್ಕೆ ದೊಡ್ಡಳ್ಳಿ ಆಗಿದ್ದು ಈಗ ಸಣ್ಣಳ್ಳಿ ಆಗಿತ್ತು. ಹೆಸರು ಮಾತ್ರ ಅದೇ ಉಳಿದಿತ್ತು. ಈ ಮೊದಲು ಊರಿನಲ್ಲಿ 7ನೇ ತರಗತಿಯವರೆಗೆ ಶಾಲೆ ನಡೆಯುತ್ತಿತ್ತು. ನೂರಾರು ವಿದ್ಯಾರ್ಥಿಗಳಿಂದ ಶಾಲೆ ತುಂಬಿ ತುಳುಕುತ್ತಿತ್ತು. ಬರುಬರುತ್ತಾ ಖಾಸಗಿ ಶಾಲೆಗಳು ಬ್ರಿಟಿಷರು ದಾಳಿ ಇಟ್ಟಂತೆ ಊರಿಗೆ ಬಸ್ಸು ಕಳಿಸಿ ಮಕ್ಕಳನ್ನು ತಮ್ಮ ಆಂಗ್ಲಭಾಷಾ ಶಾಲೆಗೆ ಸೇರಿಸಿಕೊಂಡು ಬರಬರುತ್ತಾ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯತೊಡಗಿತು.
ಶಾಲೆಯ ಗೋಡೆ ಕುಸಿದರೆ ಹೇಗೋ ರಿಪೇರಿ ಮಾಡಿಸಬಹುದು. ಆದರೆ ವಿದ್ಯಾರ್ಥಿಗಳ ಸಂಖ್ಯೆಯೇ ಕುಸಿಯತೊಡಗಿದರೆ ಸರ್ಕಾರ ತಾನೇ ಏನು ಮಾಡಲು ಸಾಧ್ಯ. ಅದಕ್ಕೆ ಮಿಡಲ್ ಸ್ಕೂಲ್ ತೆಗೆದು ಪ್ರೆöÊಮರಿ ಶಾಲೆ ಉಳಿಸಿತು. ಏಳು ಮೇಷ್ಟಿçದ್ದ ಶಾಲೆ ಈಗ ಏಕೋಪಾದ್ಯಾಯ ಶಾಲೆ ಆಗಿತ್ತು. ಅಲ್ಲಿಯ ಜಿಕೆ ಮಾಸ್ಟರ್ ಮಕ್ಕಳಿಗೆ ಪಾಠ ಮಾಡುತ್ತಾ ಮಕ್ಕಳೇ, ನಾಳೇ ಶನಿವಾರ ಬೆಳಿಗ್ಗೆ ಮನೆಯಿಂದ ಬರುವಾಗ ಯಾರಾದರೂ ಹಾರೆ ಗುದ್ದಲಿ ಪಿಕಾಸಿ ತನ್ನಿ. ಶಾಲೆಯ ಮುಂದೆ ಹೂವು ಗಿಡ ಬೆಳೆಸೋಣ. ಭೇರ್ಯದಿಂದ ರಾಮ್ ಬರುತ್ತಿದ್ದಾರೆ. ನಮಗೆ ಅವರು ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡ ಕೊಡಿಸಿಕೊಡುತ್ತಾರೆ. ಮತ್ತು ಪರಿಸರ ಜಾಗೃತಿ ಬಗ್ಗೆ ಒಳ್ಳೆಯ ಭಾಷಣ ಮಾಡುತ್ತಾರೆ. ಇರಲಿ ಈಗ ನಾನು ಕೆಲವು ಪ್ರಶ್ನೆ ಕೇಳುವೇ ಉತ್ತರ ಹೇಳಿ. ಹೇ ಕೇಶವ, ನೀನು ಹೇಳೋ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಚಿಕ್ಕ ವಯಸ್ಸಿನಲ್ಲಿ ಬಗ್ಗದವರು ದೊಡ್ಡವರಾದ ಮೇಲೆ ಬಗ್ತಾರಾ..?
ಕೇಶವ ಎದ್ದು ನಿಂತು ಹೇಳಿದ ಚಿಕ್ಕ ವಯಸ್ಸಿನಲ್ಲಿ ಬಗ್ಗದ ನಮ್ಮ ಅಜ್ಜಿ ಈಗ ತುಂಬಾ ಬಗ್ಗಿದ್ದಾರೆ ಸಾರ್..
ಹೂಂ ಕೇಶವ ನೀನು ಹೇಳೋದು ದಿಟವೇ. ಈ ನಮ್ಮ ಹಳ್ಳಿಯಲ್ಲಿ ಉಳಿದಿರೋ ಅಜ್ಜಿಯರ ಬೆನ್ನು ಬಾಗಿರುವುದನ್ನು ನಾನು ನೋಡಿದ್ದೇನೆ. ನಿಮ್ಮ ಅಜ್ಜಿಯ ಬೆನ್ನು ಕೂಡ ಬಾಗಿದೆಯೇ. ಬಾಗಿರಲಿ ಕುಳಿತಿಕೋ. ಹೇ ವಿಜಯಕುಮಾರ ನೀನು ಹೇಳೋ. ಚಿಕ್ಕಮಗಳೂರು ಮತ್ತು ಅಕ್ಕಪಕ್ಕಗಳಲ್ಲಿ ಯಾವ ಬೆಳೆ ಬೆಳೆಯುತ್ತಾರೋ..?
ಸ್ವಲ್ಪ ಹೊತ್ತು ಯೋಚಿಸಿ ವಿಜಯಕುಮಾರ್ ಗೊತ್ತಿಲ್ಲ ಸಾರ್..ಎಂದ.
ಹೋಗಲಿ, ನೀನು ದಿನಾ ಕುಡಿಯುವ ಕಾಫಿ ಎಲ್ಲಿಂದ ಬರುತ್ತೋ..?
ನಮ್ಮ ಡ್ಯಾಡಿ ಅಂಗಡಿಯಿಂದ ಕಾಫಿಪುಡಿ ರ್ತಾರೆ. ಅಮ್ಮ ಹಾಲು ಕುದಿಸಿ ಅದಕ್ಕೆ ಕಾಫಿಪುಡಿ ಬೆರೆಸುತ್ತಾರೆ. ಡ್ಯಾಡಿಗೆ ಕುಡಿಯಲು ಕೊಡುತ್ತಾರೆ. ನನಗೆ ಮಾತ್ರ ಅಮೂಲ್ ಕೊಡುತ್ತಾರೆ…
ಹಲೋ ಅಮೂಲ್ ಬಾಯ್ ಪ್ಲೀಸ್ ಸಿಟ್ಡೌನ್, ನೆಕ್ಸ್÷್ಟ ಕ್ವಾಟ್ಲೆ ಕಿಟ್ಟ ನೀನು ಎದ್ದೆಳೋ.. ಯಾರಾದ್ರೂ ಭಯೋತ್ಪಾದಕರು ಸ್ಕೂಲ್ ಮುಂದೆ ಬಾಂಬ್ ಇಟ್ಟೋದ್ರೆ ಏನೋ ಮಾಡ್ತಿಯಾ..?
ಹೆಡ್ಮಾಸ್ಟುç ರೂಂಗೆ ತಂದಿಡ್ತಿನಿ..
ಲೇ ದಡ್ಡ, ಆ ಪೋಸ್ಟ್ ಹೋಗಿ ಬಹಳ ದಿನಾ ಆಯ್ತೋ.. ಈಗ ನಾನೇ ಹೆಡ್ಮಾಷ್ಟುç, ನಾನೇ ನಿಮಗೆ ಪಾಠ ಮಾಡೋ ಮೇಷ್ಟುç. ಲೆಕ್ಕ ಬರೆಯೋ ಗುಮಾಸ್ತನೂ ನಾನೇ. ಪೇಟೆಯಿಂದ ತರಕಾರಿ ತರೋದು ನಾನೇ. ಆದರೆ ನಿಮಗೆಲ್ಲಾ ಅಡಿಗೆ ಮಾಡಿ ಬಡಿಸೋದು ಮಾತ್ರ ಪಾಪಮ್ಮ. ಇರಲಿ ನೀನು ಕೂತ್ಕೋ.. ಎನ್ನುತ್ತಿರಲು ಶೀನ ಏದುಸಿರು ಬಿಡುತ್ತಾ ಓಡಿಬಂದನು. ಎಕ್ಸ್ ಕ್ಯೂಸ್ಮಿ ಸಾರ್, ಒಳಗೆ ಬರಲೇ?
ಬರ್ಲೇ ರ್ಲೇ.. ಇರೋದು ಮೂರು ಮತ್ತೊಂದು ಸ್ಟೂಡೆಂಟು. ನೀನು ಲೇಟಾಗಿ ಬಂದ್ರು ವೆಲ್ ಕಮ್ ಮಾಡ್ಲೇ ಬೇಕು. ಕಮಿನ್.. ಸರಿ ಯಾಕೆ ಇವತ್ತು ಇಷ್ಟು ಲೇಟಾಗಿ ಬಂದೆ.
ಸಾರ್, ನಮ್ಮ ಮನೆ ಹತ್ರ ಕೋಳಿ ಕೂಗೋದು ತಡ ಆಯು..
ನಮ್ಮ ಮನೆ ಹತ್ರ ಬೆಳಿಗ್ಗೆ ಐದೂವರೆಗೆ ಕೂಗ್ತಲ್ಲೋ..
ಅದೇ ಕೋಳಿ ನಮ್ಮ ಮನೆ ಹತ್ರ ಬಂದಾಗ ಎಂಟಾಗಿತ್ತು ಸಾರ್..
ಸರಿ ಮಕ್ಕಳೇ, ಈಗ ಕನ್ನಡದ ಪಾಠ ಮುಗಿಯಿತು. ಒಂದು ಮತ್ತು ಎರಡನೇ ತರಗತಿ ಮಕ್ಕಳು ಆಡಲು ಹೋಗಿ. ಮೂರು ಮತ್ತು ನಾಲ್ಕನೇ ತರಗತಿ ಮಕ್ಕಳಿಗೆ ಈಗ ಗಣಿತದ ಪಾಠ.
ಲೋ ಚಿಕ್ಕಣ್ಣ, ಒಂದು ಆಲೂಗೆಡ್ಡೆಯನ್ನು ನಾಲ್ಕು ಭಾಗವಾಗಿ ಕತ್ತರಿಸಿದರೆ ಒಂದೊಂದು ಭಾಗವೂ ಕಾಲು ಭಾಗವಾಗುತ್ತದೆ. ಒಂದು ಕಾಲು ಭಾಗವನ್ನು ಮತ್ತೂ ನಾಲ್ಕು ಭಾಗವಾಗಿ ಕತ್ತರಿಸಿದರೆ ಎನ್ ಆಗುತ್ತೋ..?
ಆಲೂಗೆಡ್ಡೆ ಚಿಪ್ಸ್ ಆಗುತ್ತೆ.. ಚಿಕ್ಕಣ್ಣನ ಉತ್ತರಕ್ಕೆ ಮಕ್ಕಳೆಲ್ಲಾ ಭೇಷ್ ಎಂದರು.
ಎಲ್ಲರಿಗಣ್ಣ ನಮ್ಮ ಚಿಕ್ಕ ಲೆಕ್ಕ ಅಂದ್ರೇ ಬಲು ದು:ಖ.. ಮಾಸ್ತರ ಗಾದೆ ಮಾತಿಗೆ ಮಕ್ಕಳೆಲ್ಲಾ ನಕ್ಕರು. ಹೂಂ ನಿಮಗೆ ನಗು, ನನಗೆ ದು:ಖ. ಇರಲಿ, ಲೋ ಗೆಂಡೆರಾಮ ನೀನು ಎದ್ದು ನಿಂತ್ಕೋ. ಈಗ ನಾನು ಟೇಬಲ್ ಮೇಲೆ ನಾಲ್ಕು ಮೊಟ್ಟೆಗಳನ್ನು, ಕುರ್ಚಿಯ ಮೇಲೆ ಮೂರು ಮೊಟ್ಟೆಗಳನ್ನು ಹಾಗೂ ನೆಲದ ಮೇಲ ಐದು ಮೊಟ್ಟೆಗಳನ್ನು ಇಟ್ಟರೆ ಒಟ್ಟು ಎಷ್ಟು ಮೊಟ್ಟೆ ಆಗುತ್ತದೆ ?
ಸಾರ್, ನೀವು ಯಾವಾಗ ಮೊಟ್ಟೆ ಇಡಲು ಪ್ರಾರಂಭ ಮಾಡಿದ್ರೀ..? ಎಂದು ಮೇಷ್ಟಿçಗೆ ತಿರುಗಿ ಪ್ರಶ್ನೆ ಕೇಳಲು ಮಕ್ಕಳೆಲ್ಲಾ ಬಿದ್ದು ಬಿದ್ದು ನಕ್ಕರು.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್,
ಹಾಸನ-573201.
